ನಾನೊಬ್ಬ ತುಂಟ ಹುಡುಗಿ: ಖಾಕಿಯಿಂದಾಚಿನ ಬದುಕನ್ನು ತೆರೆದಿಟ್ಟ ಡಿಸಿಪಿ ಇಶಾ ಪಂತ್ 

ಉಪ ಪೊಲೀಸ್ ಆಯುಕ್ತರು (ಆಗ್ನೇಯ) ಇಶಾ ಪಂತ್ ಪಾಲ್ಲಿಗೆ ಎಂದಿಗೂ ಕೆಲಸವಿಲ್ಲದ ದಿನಗಳಿರುವುದಿಲ್ಲ. ಆದರೆ ಅವರೆಂದಿಗೂ ತಮ್ಮ ಅಪಾಯಿಂಟ್ ಮೆಂಟ್ ಗಳನ್ನು ತಪ್ಪಿಸಿಕೊಂಡವರಲ್ಲ. ಆದರೆ ಜೀವನವು ಬರೇ ಕೆಲಸವಲ್ಲ, ಆಟವೂ ಅಲ್ಲ. ವಿಶೇಷವೆಂದರೆ ಇಶಾ ಪಂತ್ ತಾವು ಇತ್ತೀಚೆಗೆ ಹಾಡಿದ್ದ ಕನ್ನಡ ಗೀತೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. 

Published: 30th January 2020 12:28 PM  |   Last Updated: 30th January 2020 12:28 PM   |  A+A-


ಡಿಸಿಪಿ ಇಶಾ ಪಂತ್

Posted By : Raghavendra Adiga
Source : The New Indian Express

ಬೆಂಗಳೂರು: ಉಪ ಪೊಲೀಸ್ ಆಯುಕ್ತರು (ಆಗ್ನೇಯ) ಇಶಾ ಪಂತ್ ಪಾಲ್ಲಿಗೆ ಎಂದಿಗೂ ಕೆಲಸವಿಲ್ಲದ ದಿನಗಳಿರುವುದಿಲ್ಲ. ಆದರೆ ಅವರೆಂದಿಗೂ ತಮ್ಮ ಅಪಾಯಿಂಟ್ ಮೆಂಟ್ ಗಳನ್ನು ತಪ್ಪಿಸಿಕೊಂಡವರಲ್ಲ. ಆದರೆ ಜೀವನವು ಬರೇ ಕೆಲಸವಲ್ಲ, ಆಟವೂ ಅಲ್ಲ. ವಿಶೇಷವೆಂದರೆ ಇಶಾ ಪಂತ್ ತಾವು ಇತ್ತೀಚೆಗೆ ಹಾಡಿದ್ದ ಕನ್ನಡ ಗೀತೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. 

"ನಾನು ಕಠಿಣ ವ್ಯಕ್ತಿತ್ವವನ್ನು ಹೊಂದಿದ್ದೇನೆ ಆದರೆ ಅದು ಕೆಲಸದ ಭಾಗವಾಗುತ್ತದೆ. ಕ್ರಿಮಿನಲ್ ವಿಚಾರಗಳನ್ನು ನಿಭಾಯಿಸಲು ಅದು ಅಗತ್ಯವಿದೆ" ಎನ್ನುವ ಆಯುಕ್ತರ ಪ್ಲೇ ಲಿಸ್ಟ್ ನಲ್ಲಿ ಕೆಲ  ಹಳೆಯ ಹಿಂದಿ ಚಲನಚಿತ್ರ  ಗೀತೆಗಳು,  ಶಾಸ್ತ್ರೀಯ ಸಂಗೀತ ಮತ್ತು ಜನಪ್ರಿಯ ದಕ್ಷಿಣ ಭಾರತದ ಹಾಡುಗಳ ಸಂಗ್ರಹವಿದೆ. "ನಾನು ಕನ್ನಡಿಗನನ್ನು ಮದುವೆಯಾಗಿದ್ದರಿಂದ, ನಾನು ತೆಲುಗು, ತಮಿಳು ಮತ್ತು ಕನ್ನಡ ಹಾಡುಗಳಿಗೂ ಕಿವಿಯಾಗಿದ್ದೇನೆ"

ಆಕೆಯ ಜೀವನದಲ್ಲಿ ಒಂದು ಸಾಮಾನ್ಯ ದಿನ ಯಾವುದರೊಡನೆ ಕೊನೆಯಾಗುತ್ತದೆ ಎಂದು ಯಾರಿಗೂ ಹೇಳಲಾಗುವುದಿಲ್ಲ.  ಆದರೆ ಅದು ಯಾವಾಗಲೂ ಒಂದೇ ರೀತಿಯಲ್ಲಿ ಪ್ರಾರಂಭವಾಗುತ್ತದೆ. : ಮಗಳನ್ನು ಶಾಲೆಗೆ ಬಿಡುವುದರೊಂದಿಗೆಇದು ಸಂಭವಿಸುತ್ತದೆ. "ದಿನ ಪ್ರಾರಂಭವಾದ ಕೂಡಲೇ ನನ್ನ ಎರಡೂವರೆ ವರ್ಷದ ಮಗುವಿನೊಂದಿಗೆ ಸ್ವಲ್ಪ ಸಮಯ ಕಳೆಯುವುದನ್ನು ನಾನುಮರೆಯುವುದಿಲ್ಲ. ಇಲ್ಲದಿದ್ದರೆ ಅವಳನ್ನು ಮತ್ತೆ ಆ ದಿನ ನೋಡುವುದು ಕಷ್ಟ. ಎಂದು ಇಶಾ ಪಂತ್ ವಿವರಿಸುತ್ತಾರೆ. ಅವರು ಖಾಕಿ ಸಮವಸ್ತ್ರದಲ್ಲಿ ಯಾವಾಗಲೂ ಗುರುತಿಸಿಕೊಳ್ಳುತ್ತಾರೆ. ಆದರೆ ಅಚ್ಚರಿಗಳಿಂದ ತುಂಬಿರುವ ಆಕೆ ಡೆನಿಮ್‌ಗಳು ಮತ್ತು ಟಿ ಶರ್ಟ್‌ಗಳನ್ನು ಇಷ್ಟ ಪಡುತ್ತಾರೆ. 

"ನಾನು ಪಾರ್ಟಿಗಳಿಗೆ ಸೀರೆಗಳನ್ನು ಉಟ್ಟು ತೆರಳುವೆ. ಆದರೆ ತಮಾಷೆ ಎಂದರೆ ಜನರು ಯಾರೂ ನನ್ನ ಗುರುತು ಹಚ್ಚುವುದಿಲ್ಲ. ಸಾಮಾನ್ಯರೆಂಬಂತೆ ನನ್ನ ಬೆನ್ನ ಹಿಂದೆ ನಡೆಯುತ್ತಾರೆ. " ಐಎಎಸ್ ಅಧಿಕಾರಿಯನ್ನು ಮದುವೆಯಾದ ಇಶಾ ಪಂತ್ ಆಹಾರದ ವಿಷಯಕ್ಕೆ ಬಂದರೆ ಹೋಮ್‌ಬೌಂಡ್ ಗರ್ಲ್ ಆಗಿದ್ದಾರೆ. ಎಣ್ಣೆಯಲ್ಲಿ ಕರಿದ ಪದಾರ್ಥಕ್ಕಿಂತ ಚ್ಚಾಗಿ ಆರೋಗ್ಯಕರ ಮನೆಯಲ್ಲಿ ಬೇಯಿಸಿದ ಊಟಕ್ಕೆ ಆದ್ಯತೆ ನೀಡುತ್ತಾರೆ. ಅಲ್ಲದೆ ಆಕೆ ಎಂದಿಗೂ ಊಟವನ್ನು ತಪ್ಪಿಸುವುದಿಲ್ಲ ಎನ್ನುವುದು ಖಾತ್ರ್ ಮಾಡಿಕೊಳ್ಳುತ್ತಾರೆ.

ಇನ್ನೂ ನಂಬಲಾಗದ ಸಂಗತಿ ಎಂದರೆ ಇಶಾ ಪಂತ್ ತುಂಟಾಟದ ಹುಡುಗಿ! ಮೂವರು ಸಹೋದರಿಯರಲ್ಲಿ ಕಿರಿಯಳಾದ ಈಕೆ ಆಗಾಗ್ಗೆ ತುಂಟತನ ಮಾಡುತ್ತಿದ್ದವರು. "ನನ್ನೊಂದಿಗೆ ಕಟ್ಟುನಿಟ್ಟಾಗಿರುತ್ತಿದ್ದ ಏಕೈಕ ವ್ಯಕ್ತಿ ನನ್ನ ಹಿರಿಯ ಸಹೋದರಿ"  ಎಂದು ಆಕೆ ನೆನಪಿಸಿಕೊಳ್ಳುತ್ತಾರೆ. ತನ್ನ ನಾಗರಿಕ ಸೇವೆಗಳ ಪರೀಕ್ಷೆಗಳನ್ನು ತೆಗೆದುಕೊಂಡಾಗ ತನ್ನ ಸ್ನೇಹಿತ ನಿರೂಪಿಸಿದ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾಳೆ. "ಭೋಪಾಲ್ ನಲ್ಲಿ ಬಾಲ್ಕನಿಯಲ್ಲಿ ಎಲ್ಲರ ಮುಂದೆ ಅಪ್ರಾಪ್ತ ಬಾಲಕಿಯೊಬ್ಬಳು ಕಿರುಕುಳಕ್ಕೊಳಗಾಗಿದ್ದಳು. ಅದಕ್ಕೆ ನನ್ನ ಸ್ನೇಹಿತನೂ ಸಾಕ್ಷಿಯಾಗಿದ್ದ. ಆದರೆ ಯಾರೊಬ್ಬರೂ ಆ ಕಿರುಕುಳ ನೀಡಿದ್ದ ವ್ಯಕ್ತಿಗೆ ಯಾವ ದಂಡನೆಯನ್ನೂ ನೀಡಿರಲಿಲ್ಲ" ಇದು ಆಕೆ ಐಪಿಎಸ್ ಸೇರಿಕೊಳ್ಳಲು ಪ್ರೇರಣೆ ಒದಗಿಸಿದ ಘಟನೆ.

ಕಠಿಣ ಪೋಲೀಸ್ ಅಧಿಕಾರಿ ಎಂದು ತಿಳಿದಿದ್ದರೂ ಇಶಾ ಪಂತ್ ಎಲ್ಲರಿಗೆ ಹತ್ತಿರವಾಗಿರಲು ಬಯಸುತ್ತಾರೆ.  "ಜನರು ಕಾನೂನಿನ ಬಗ್ಗೆ ಭಯಪಡಬೇಕು, ಪೊಲೀಸರ ಬಗೆಗಲ್ಲ" ಅವರು ಹೇಳುತ್ತಾರೆ. , ಸಣ್ಣ ಹಳ್ಳಿಗಳ ಮಹಿಳೆಯರಿಗೆ ಮನೆಯಲ್ಲಿ ಎದುರಾಗುವ ನಿಂದನೆ, ಕಿರುಕುಳದ ವಿರುದ್ಧ ದೂರು ನೀಡಲು ನೇರವಾಗಿ ಅವರ ಬಳಿಗೆ ಬರುವಂತಾಗುವುದು ದೊಡ್ಡ ಬದಲಾವಣೆಯಾಗಿದೆ  ಎಂದು ಆಕೆ ಹೇಳಿದ್ದಾರೆ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp