ಕೇಂದ್ರ ಸಚಿವಾಲಯದಿಂದ ರಾಜ್ಯದ ಅನ್ನಪೂರ್ಣಗೆ ಅತ್ಯುತ್ತಮ ಆಶಾ ಕಾರ್ಯಕರ್ತೆ ಬಿರುದು

ಕೊರೋನಾ ಸೋಂಕಿರಿಂದ ಸ್ನೇಹಿತರು, ಆಪ್ತರು ಹಾಗೂ ಸಂಬಂಧಿಕರೇ ದೂರ ಸರಿಯುತ್ತಿರುವ ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ ದಿಟ್ಟ ಮಹಿಳೆಯೊಬ್ಬರಿಗೆ ಕೇಂದ್ರ ಸಚಿವಾರ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂಬ ಬಿರುದನ್ನು ನೀಡಿದೆ. 
ಅನ್ನಪೂರ್ಣ
ಅನ್ನಪೂರ್ಣ

ಶಿವಮೊಗ್ಗ: ಕೊರೋನಾ ಸೋಂಕಿರಿಂದ ಸ್ನೇಹಿತರು, ಆಪ್ತರು ಹಾಗೂ ಸಂಬಂಧಿಕರೇ ದೂರ ಸರಿಯುತ್ತಿರುವ ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ರಾಜ್ಯದ ದಿಟ್ಟ ಮಹಿಳೆಯೊಬ್ಬರಿಗೆ ಕೇಂದ್ರ ಸಚಿವಾರ ಅತ್ಯುತ್ತಮ ಆಶಾ ಕಾರ್ಯಕರ್ತೆ ಎಂಬ ಬಿರುದನ್ನು ನೀಡಿದೆ. 

ಶಿವಮೊಗ್ಗದ ತುಂಗಾನಗರ ಪಿಹೆಚ್ಸಿ ವ್ಯಾಪ್ತಿಯ ಟಿಪ್ಪುನಗರ ಬಲಭಾಗದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಅನ್ನಪೂರ್ಣ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ. 

ಕಂಟೈನ್ಮೆಂಟ್ ಝೋನ್ ಗಳಲ್ಲಿ ಕಾರ್ಯನಿರ್ವಹಿಸುವುದು ಸವಾಲಿನ ಕೆಲಸ ವಾಗಿರುತ್ತದೆ. ಕೆಲವೊಮ್ಮೆ ತಮ್ಮ ಪ್ರದೇಶಗಳನ್ನು ಸೀಲ್'ಡೌನ್ ಮಾಡಿದ ಕಾರಣಕ್ಕೆ ಸ್ಥಳೀಯರು ಪ್ರತಿಭಟನೆ ಮಾಡುತ್ತಾರೆ. ತುಂಗಾನಗರದಲ್ಲಿರುವ ಬಹುತೇಕ ಜನರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಸೀಲ್'ಡೌನ್ ನಿಂದ ಕೆಲಸ ಕಳೆದುಕೊಳ್ಳುತ್ತಾರೆಂಬ ಭಯದಲ್ಲಿರುತ್ತಾರೆ. ಕೆಲವೊಮ್ಮೆ ಜನರು ನಮ್ಮನ್ನು ನಿಂದಿಸುವುದೂ ಉಂಟು ಎಂದು ಅನ್ನಪೂರ್ಣ ಅವರು ಹೇಳಿದ್ದಾರೆ.

2015ರಿಂದಲೂ ತುಂಗಾನಗರದಲ್ಲಿ ಅನ್ನಪೂರ್ಣ ಅವರು ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಳಚೆ ಪ್ರದೇಶದಲ್ಲಿ 3,000 ಜನರು ವಾಸವಿದ್ದು, ಇಲ್ಲಿ 10 ಕಂಟೈನ್ಮೆಂಟ್ ಝೋನ್ ಗಳಿವೆ. ಕೊರೋನಾ ಟಾಸ್ಕ್'ನ್ನು ಅನ್ನಪೂರ್ಣ ಅವರು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಯಾರೇ ಬಂದರೂ ಕೂಡಲೇ ಅಲ್ಲಿಗೆ ತೆರಳುವ ಅನ್ನಪೂರ್ಣ ಮಾಹಿತಿ ಕಲೆ ಹಾಕುತ್ತಾರೆ. ಲಕ್ಷಣಗಳ ಕುರಿತು ಪರಿಶೀಲನೆ ನಡೆಸಿ ಕ್ವಾರಂಟೈನ್'ಗೆ ಕಳುಹಿಸುವ ಕಾರ್ಯ ಮಾಡುತ್ತಾರೆಂದು ಆಶಾ ಕಾರ್ಯಕರ್ತೆಯರ ಮಾರ್ಗದರ್ಶಕಿ ಆರತಿಯವರು ಹೇಳಿದ್ದಾರೆ. 

ಕಾರ್ಯನಿರ್ವಹಿಸುತ್ತಿರುವ ವೇಳೆ ಬಾಲ್ಯವಿವಾಹವೊಂದನ್ನೂ ಕೂಡ ತಡೆದಿದ್ದರು. ಬಾಲಕಿಯೊಬ್ಬಳಿಗೆ ವಿವಾಹ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಅನ್ನಪೂರ್ಣ ಅವರು ಎರಡೂ ಕುಟುಂಬಗಳ ಮನವೊಲಿಸಿ ವಿವಾಹ ನಿಲ್ಲಿಸಿದ್ದರು. ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಡುವುದಕ್ಕೂ ಮುನ್ನವೂ ಅನ್ನಪೂರ್ಣ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com