ಒಂದು ಪ್ಲೇಟ್ 'ಮಾಸ್ಕ್ ಪರೋಟಾ'!: ಕೋವಿಡ್ ಜಾಗೃತಿಗಾಗಿ ಮದುರೈ ಹೋಟೆಲ್ ನಲ್ಲಿ ತಯಾರಾಯ್ತು 'ಕೊರೋನಾ ಮೆನು'

ಮದುರೈ ಜಿಲ್ಲೆಯ ಜನರಿಗೂ ಪರೋಟಾಗೂ ಬಿಡಿಸಲಾಗದ ನಂಟು. ಕೊರೋನಾವೈರಸ್ ಹಾವಳಿ ಇರುವ ಈ ಸಮಯದಲ್ಲಿ ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಇದನ್ನೇ ಸಾಧನವಾಗಿ ಮಾಡಿಕೊಳ್ಳಲಾಗಿದೆ.  ಇಲ್ಲಿನ ಹೋಟೆಲ್ ಟೆಂಪಲ್ ಸಿಟಿನಲ್ಲಿ ಇದೀಗ ಜನರಿಗೆ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ "ಮಾಸ್ಕ್ ಪರೋಟ" ತಯಾರಿಸಲಾಗುತ್ತಿದೆ.
ಮಾಸ್ಕ್ ಪರೋಟ
ಮಾಸ್ಕ್ ಪರೋಟ

ಮದುರೈ: ಮದುರೈಜಿಲ್ಲೆಯ ಜನರಿಗೂ ಪರೋಟಾಗೂ ಬಿಡಿಸಲಾಗದ ನಂಟು. ಕೊರೋನಾವೈರಸ್ ಹಾವಳಿ ಇರುವ ಈ ಸಮಯದಲ್ಲಿ ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಇದನ್ನೇ ಸಾಧನವಾಗಿ ಮಾಡಿಕೊಳ್ಳಲಾಗಿದೆ.  ಇಲ್ಲಿನ ಹೋಟೆಲ್ ಟೆಂಪಲ್ ಸಿಟಿನಲ್ಲಿ ಇದೀಗ ಜನರಿಗೆ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ "ಮಾಸ್ಕ್ ಪರೋಟ" ತಯಾರಿಸಲಾಗುತ್ತಿದೆ.

ನಗರದಾದ್ಯಂತ 12 ಶಾಖೆಗಳನ್ನು ಹೊಂದಿರುವ ಹೋಟೆಲ್ ಟೆಂಪಲ್ ಸಿಟಿ ಮಂಗಳವಾರ ಸಂಜೆಯಿಂದ  3-ಪ್ಲೈ ಸರ್ಜಿಕಲ್ ಮಾಸ್ಕ್ ಅನ್ನು ಹೋಲುವ "ಮಾಸ್ಕ್ ಪರೋಟಾ"ವನ್ನು ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತಿದೆ,

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗಿನ ಸಂವಾದದಲ್ಲಿ ಹೋಟೆಲ್ ಟೆಂಪಲ್‌ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಲಕ್ಷ್ಮಣ ಕುಮಾರ್ (45) ಮಾತನಾಡಿ "ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಆತಂಕಕಾರಿ ಏರಿಕೆ ಕಂಡಿದೆ. ತಮಿಳುನಾಡಿನಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಇಲ್ಲಿ ವರದಿಯಾಗಿದೆ.  ಆದರೆ ಇಲ್ಲಿನ ಜನರು ಇನ್ನೂ ಮಾಸ್ಕ್ ಇಲ್ಲದೆ ಬೀದಿಗಳಲ್ಲಿ ಸುತ್ತಾಡುತ್ತಲೇ ಇದ್ದಾರೆ. ಇದು ನಮ್ಮ ಆಲೋಚನೆಗೆ ಪ್ರೇರಣೆಯಾಗಿದ್ದು ಇಲ್ಲಿನ ಜನರು ಬಹುವಾಗಿ ಇಷ್ಟಪಟ್ಟು ತಿನ್ನುವ ಪದಾರ್ಥ ಪರೋಟಾ ಆಗಿದ್ದು ಇದೇ ಪರೋಟಾ ಮೂಲಕ ಅವರಿಗೆ ಮಾಸ್ಕ್ ಧಾರಣೆಯ ಬಗ್ಗೆ ಅರಿವು ಮೂಡಿಸಲು ನಾವು ತೀರ್ಮಾನಿಸಿದ್ದೇವೆ."

ಮಂಗಳವಾರ ಸಂಜೆ  ಈ ಪರಿಕಲ್ಪನೆ ಸಾಕಾರ ರೂಪು ತಾಳಿದೆ.  ಅವರ ಇಬ್ಬರು ಪರೋಟಾ ಮಾಸ್ಟರ್ಸ್ - ಮುನ್ನಾ, ನೇಪಾಳಿ ಮತ್ತು ಮಧುರೈನ ಒಥಕಡೈನ ಎಸ್ ಸತೀಶ್ ಬಾಬು ಅವರು ಅದೇ ಸಂಜೆ ಈ ವಿಶೇಷ "ಮಾಸ್ಕ್ ಪರೋಟಾ" ತಯಾರಿಸಲು ಮುಂಡಾಗಿದ್ದಾರೆ. ಈ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್, ಇರಾಕ್ ಮತ್ತು ಮಲೇಷ್ಯಾದಲ್ಲಿ ವಿದೇಶದಲ್ಲಿ ಕೆಲಸ ಮಾಡಿದ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರರಾದ ಸತೀಶ್ ಬಾಬು (32) ಈಗ ತನ್ನೂರಿಗೆ ಮರಳಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಪರೋತಾ ಮಾಸ್ಟರ್ ಆಗಿ ಈ ಹೋಟೆಲ್ ಗೆ ಸೇರ್ಪಡೆಯಾಗಿದ್ದರು.

"ಮಾಸ್ಕ್ ಪರೋಟಾ" ಗಾಗಿ ಪದಾರ್ಥಗಳು ಮತ್ತು ತಯಾರಿಕೆ ವಿದ್ಚಾನ ಸಾಮಾನ್ಯ ಪರೋಟದಂತೆಯೇ ಇರಲಿದೆ.  ಆಕಾರದಲ್ಲಿ ಮಾತ್ರವೇ ಭಿನ್ನವಾಗಿರುತ್ತದೆ., ಅಲ್ಲಿ ಮುಖದ  ಮಾಸ್ಕ್ ಮಾದರಿಯ ಮೂರು ಪದರಗಳನ್ನು ಹಿಟ್ಟಿನಿಂದ ಚಾಕಚಕ್ಯತೆಯಿಂದ ಬೆರೆಸಲಾಗುತ್ತದೆ. ಈ ಸಾಂಕ್ರಾಮಿಕ ಸಮಯದಲ್ಲಿ ತನ್ಮೂಲಕ ಸಂದೇಶ ರವಾನಿಸಲು ಇದು ಪ್ರಮುಖ ಸಾಧನವಾಗಿದೆ. ನಾನು ಪ್ರಥಮ ಮಾಸ್ಕ್ ಪರೋಟ ತಯಾರಿಗೆ ಕೆಲವೇ ನಿಮಿಷಗಳನ್ನು ಮಾತ್ರ ತೆಗೆದುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.

ಮಧುರೈ ಮೂಲದ ಕುಮಾರ್, 2003 ರಲ್ಲಿ ಪ್ರಾರಂಭವಾದ ಸಸ್ಯಾಹಾರಿ ಹೋಟೆಲ್ ಒಂದರಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದ್ದರು.ಕಳೆದ ವರ್ಷಗಳಲ್ಲಿ ಕ್ರಿಕೆಟ್ ದೇವರು ಸಚಿನ್ ಹಾಗೂ ರಜನಿಕಾಂತ್ ಅವರ ಹೆಸರಿನಲ್ಲಿ ತೆಂಡೂಲ್ಕರ್ ದೋಸೆ ಹಾಗೂ ಬಾಬಾ ಪನ್ನೀರ್ ಬಟರ್ ಮಸಾಲಾ ಎಂಬ ವಿಶೇಷ ತಿನಿಸನ್ನು ಪರಿಚಯಿಸಿದ್ದರು.

ಕೊರೋನಾದ ಈ ಕಾಲಘಟ್ಟದಲ್ಲಿ ಕೊರೋನಾ ರವೆ ದೋಸೆ(ಒಂಡಕ್ಕೆ 50 ರೂ.), ಕೊರೋನಾ ಬೋಂಡಾ (ಎರಡಕ್ಕೆ 50 ರೂ.), ಗಿಡಮೂಲಿಕೆಗಳ ರಸಮ್  ಇವೆಲ್ಲವೂ ಹೋಟೆಲ್ ನ ಮೆನುವುಗೆ ಹೊಸದಾಗಿ ಸೇರ್ಪಡೆಯಾಗಿದೆ.

ಇದೀಗ ಮಾಸ್ಕ್ ಪರೋಟ ನೈಟ್ ಹಿಟ್ ಆಗಿ ಮಾರ್ಪಟ್ಟಿದೆ.  "ಹೋಟೆಲ್ ಸಾಮಾನ್ಯವಾಗಿ ಸಂಜೆ 4 ರಿಂದ 9 ರ ನಡುವೆಪರೋಟಾಗಳನ್ನು ಪೂರೈಸುತ್ತದೆ. ಆದರೆ, ಭಕ್ಷ್ಯವು ವೈರಲ್ ಆದ ನಂತರ ಹೆಚ್ಚಿದ ಬೇಡಿಕೆ ಪರಿಣಾಮ ನಾವು ಇಂದು ಬೆಳಿಗ್ಗೆ 10 ಗಂಟೆಯಿಂದ ಪರೋಟಾ ವನ್ನು ಗ್ರಾಹಕರಿಗೆ ಉಣಬಡಿಸುತ್ತಿದ್ದೇವೆ.  ಎಲ್ಲರೂ, ವಿಶೇಷವಾಗಿ ಮಕ್ಕಳು ಈ ಪರಿಕಲ್ಪನೆಯ ಬಗ್ಗೆ ಉತ್ಸುಕರಾಗಿದ್ದಾರೆ. ಹೋಟೆಲ್ ಶಾಖೆಯಲ್ಲಿ ಸಾಮಾನ್ಯ ವ್ಯವಹಾರ ದಿನದಲ್ಲಿ 50 ಸೆಟ್‌ಗಳು ಮಾರಾಟವಾಗುತ್ತಿದ್ದವು. ಬೆಳಿಗ್ಗೆಯಿಂದ ಮಂಗಳವಾರ ಮಾತ್ರ 500 ಸೆಟ್‌ಗಳ  ಮಾಸ್ಕ್ ಪರೋಟಾ ಮಾರಾಟವಾಗಿದೆ. 

ಈ ಪ್ರಯತ್ನವು ಗಡಿಯನ್ನು ಮೀರಿ ಪ್ರಸಿದ್ದಿ ಪಡೆದಿದ್ದು  "ಈ ಆಲೋಚನೆಯು ಪರಿಣಾಮಕಾರಿಯಾಗಿ ನಗರದ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ನಡವಳಿಕೆಯ ಬದಲಾವಣೆಯನ್ನು ತರುತ್ತದೆ ಎಂದು ನಾನು ಆಶಾವಾದಿಯಾಗಿದ್ದೇನೆ. ಜನರು ಜೀವನಶೈಲಿಯ ಭಾಗವಾಗಿ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಲಬೇಕು. ಅವರು ಹಾಗೆ ಮಾಡುತ್ತಾರೆಂದು  ನನಗೆ ಖಾತ್ರಿಯಿದೆ" ಎಂದು ಅವರು ಒತ್ತಿ ಹೇಳಿದರು.

ಮಾಸ್ಕ್ ಪರೋಟಾ ಪ್ರಸ್ತುತ ಡಾ.ಎಂ.ಜಿ.ಆರ್ ಬಸ್ ನಿಲ್ದಾಣದ ಎದುರು ಮಟ್ಟುತವಾಣಿಯಲ್ಲಿರುವ ಹೋಟೆಲ್‌ನ ಮೊದಲ ಶಾಖೆಯಲ್ಲಿ ಲಭ್ಯವಿದೆ. ಎರಡು ಮಾಸ್ಕ್ ಪರೋಟಾ ಬೆಲೆ 50 ರೂ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com