ಆನ್‌ಲೈನ್ ಶಿಕ್ಷಣ ತಂದೊಡ್ಡಿದ ಸಂಕಟ: ಶೇ.43ರಷ್ಟು ವಿಶೇಷ ಚೇತನ ಮಕ್ಕಳು ಶಿಕ್ಷಣದಿಂದಲೇ ದೂರ- ಸಮೀಕ್ಷೆ

ಇಂದಿನ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಹೆಚ್ಚು ಜನಪ್ರಿಯವಾಗಿತ್ತಿದೆ. ಆದರೆ ವಿಶೇಷಚೇತನರು ಅವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಂದಾಗಿ ಈ ಆನ್‌ಲೈನ್ ಶಿಕ್ಷಣದಿಂದ ದೂರ ಉಳಿಯಬೇಕಾಗಿದೆ.
ಆನ್‌ಲೈನ್ ಕಲಿಕೆ
ಆನ್‌ಲೈನ್ ಕಲಿಕೆ

ನವದೆಹಲಿ: ಇಂದಿನ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಹೆಚ್ಚು ಜನಪ್ರಿಯವಾಗಿತ್ತಿದೆ. ಆದರೆ ವಿಶೇಷಚೇತನರು ಅವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಂದಾಗಿ ಈ ಆನ್‌ಲೈನ್ ಶಿಕ್ಷಣದಿಂದ ದೂರ ಉಳಿಯಬೇಕಾಗಿದೆ. ಶೇಕಡಾ 43 ರಷ್ಟು ವಿಶೇಷ ಚೇತನ ಮಕ್ಕಳು ಅಧ್ಯಯನದಿಂದ ಹೊರಗುಳಿಯಲು ಯೋಜಿಸುತ್ತಿದ್ದಾರೆ ಎಂದು ಈ ಕುರಿತು ನಡೆದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಒಡಿಶಾ, ಜಾರ್ಖಂಡ್, ಮಧ್ಯಪ್ರದೇಶ, ತ್ರಿಪುರ, ಚೆನ್ನೈ, ಸಿಕ್ಕಿಂ, ನಾಗಾಲ್ಯಾಂಡ್, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಮೇ ತಿಂಗಳಲ್ಲಿ ವಿಶೇಷಚೇತನರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಮುದಾಯ ಆಧಾರಿತ ಸಂಘಟನೆಯಾದ ಸ್ವಾಭಿಮಾನ್ ಈ ಸಮೀಕ್ಷೆಯನ್ನು ನಡೆಸಿದೆ. ಒಟ್ತಾರೆ  3,627 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಇದ್ದಾರೆ. . ಸಮೀಕ್ಷೆಯ ಪ್ರಕಾರ, ಶೇಕಡಾ 56.5 ರಷ್ಟು ವಿಶೇಷಚೇತನ ಮಕ್ಕಳು ಇನ್ನೂತರಗತಿಗಳಿಗೆ ಹಾಜರಾಗಲು ಸಹ ಕಷ್ಟಪಡುತ್ತಿದ್ದಾರೆ. ಆದರೆ 77 ಪ್ರತಿಶತ ವಿದ್ಯಾರ್ಥಿಗಳು ತಾವು ನಿಭಾಯಿಸಲು ಸಾಧ್ಯವಾಗದ ಕಾರಣ  ದೂರಶಿಕ್ಷಣದ ವಿಧಾನದಿಂದ ಶಿಕ್ಷಣ ನಮಗೆ ದೂರದ ಮಾತು ಎಂದಿದ್ದಾರೆ.

ಶೇ. 56.48 ರಷ್ಟುವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ ಎಂದು ಸಮೀಕ್ಷೆಯು ಕಂಡುಕೊಂಡಿದೆ. ಉಳಿದ 43.52 ರಷ್ಟು ವಿದ್ಯಾರ್ಥಿಗಳು ಈ ಅದ್ಯಯನದಿಂದ ಹೊರಗುಳಿಯಲು ಯೋಜಿಸುತ್ತಿದ್ದಾರೆ. ಮೂವತ್ತೊಂಬತ್ತು ಶೇಕಡಾ ದೃಷ್ಟಿ ವಿಶೇಷಚೇತನರು ಅನೇಕ ವಿದ್ಯಾರ್ಥಿಗಳು ಏಕಕಾಲದಲ್ಲಿ ಮಾತನಾಡುವ ಕಾರಣ ನಮಗೆ ಪಾಠ ಅರ್ಥ ಮಾಡಿಕೊಳ್ಲಲು ಸಾಧ್ಯವಾಗುವುದಿಲ್ಲ ಎಂದು ದೂರಿದ್ದಾರೆ.

ಇನ್ನು ಈ ಆನ್‌ಲೈನ್ ಶಿಕ್ಷಣದಲ್ಲಿ ಯಾವುದೇ ಸೈನ್ ಲ್ಯಾಂಗ್ವೇಜ್ ವ್ಯಾಖ್ಯಾನಕಾರರು ಇಲ್ಲದಿರುವುದು ವಿಶೇಷಚೇತನ ಮಕ್ಕಳಿಗೆ ಸವಾಲಾಗಿದೆ, ಇದರಿಂದ ನಮಗೆ ತೊಂದರೆ ಆಗಿದೆ ಎಂದು 44 ಪ್ರತಿಶತ ವಿಶೇಷಚೇತನ ಮಕ್ಕಳು ದೂರಿದ್ದಾರೆ.ಶೇಕಡಾ 86 ರಷ್ಟು ವಿಶೇಷಚೇತನ ಮಕ್ಕಳ ಪೋಷಕರು (ಸಿಡಬ್ಲ್ಯುಡಿ) ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂದು ತಿಳಿದಿಲ್ಲ ಮತ್ತು ಸುಮಾರು 81 ಪ್ರತಿಶತ ಶಿಕ್ಷಕರು ತಮ್ಮೊಂದಿಗೆ ಕಲಿಕೆಗೆ ಬೇಕಾದ  ಶೈಕ್ಷಣಿಕ ಸಾಮಗ್ರಿಗಳನ್ನು ಹೊಂದಿಲ್ಲ ಎಂದು ಹೇಳಿದರು.

"ಶೇಕಡಾ 64 ರಷ್ಟು ವಿದ್ಯಾರ್ಥಿಗಳು (ಸಿಡಬ್ಲ್ಯುಡಿ) ಮನೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಅಥವಾ ಕಂಪ್ಯೂಟರ್‌ಗಳನ್ನು ಹೊಂದಿಲ್ಲ ಎಂದು ಶಿಕ್ಷಕರು ವರದಿ ಮಾಡಿದ್ದಾರೆ. ಶೇಕಡಾ 67 ರಷ್ಟು ವಿದ್ಯಾರ್ಥಿಗಳು (ಸಿಡಬ್ಲ್ಯುಡಿ) ಆನ್‌ಲೈನ್ ಶಿಕ್ಷಣಕ್ಕಾಗಿ ಟ್ಯಾಬ್‌ಗಳು ಅಥವಾ ಕಂಪ್ಯೂಟರ್‌ಗಳು ಅಥವಾ ಅದಕ್ಕೆ ಸಮಾನವಾದ ಸಾಧನಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ"  ವಿಶೇಷಚೇತನ ಮಕ್ಕಳಲ್ಲಿ ಎಪ್ಪತ್ತನಾಲ್ಕು ಪ್ರತಿಶತದಷ್ಟು ಮಕ್ಕಳು ಶೈಕ್ಷಣಿಕ ಉದ್ದೇಶಗಳಿಗಾಗಿ ಡೇಟಾ / ವೈ-ಫೈ ಬೆಂಬಲ ಬೇಕು ಎಂದು ಹೇಳಿದರೆ 61 ಪ್ರತಿಶತ  ಶಿಕ್ಷಕರು  ಲೇಖಕರು, ಬೆಂಗಾವಲು, ಓದುಗರು ಮತ್ತು ಪರಿಚಾರಕರ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ. 

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ "ಹೊಸ ಸಾಮಗ್ರಿ" ಗಳೊಂದಿಗೆ ಅಗತ್ಯವಿರುವ ನೀತಿ ನಿರೂಪಣೆಗಳ ಬದಲಾವಣೆಗಳು ಮತ್ತು ಪರಿಷ್ಕರಣೆಗಳಿಗೆ ಸಮೀಕ್ಷೆಯನ್ನು ಆಧರಿಸಿದ ವರದಿಯು ವಿವರವಾದ ಶಿಫಾರಸುಗಳನ್ನು ಮಾಡಿದೆ. "ವಿವಿಧ ರೀತಿಯ  ವೈಕಲ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ  ಸೂಕ್ತವಾದ ಪಠ್ಯಕ್ರಮವನ್ನು ರಚಿಸುವುದುಅಷ್ಟು ಸುಲಭವಾಗಿಲ್ಲಮತ್ತು  ವಿಶೇಷಚೇತನಗಳಾಗಿರುವ  ಮಕ್ಕಳಿಗೆ ಯಾವುದೇ ಆರಂಭಿಕ ಹಂತದ ಶಿಕ್ಷಣ ಅಗತ್ಯವಿರುತ್ತದೆ.ಎಂದು ವರದಿ ತಿಳಿಸಿದೆ. "ಮಕ್ಕಳಿಗೆ ಸೂಕ್ತವಾದ ಪರ್ಯಾಯ ಸ್ವರೂಪಗಳಲ್ಲಿ ಸೂಕ್ತವಾದ ಪಠ್ಯಕ್ರಮದಿಂದ  ಬೆಂಬಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನೀತಿ ನಿರೂಪಣೆಯಲ್ಲಿ ಬದಲಾವಣೆಗಳು ಅಗತ್ಯವಾಗಿವೆ ಮತ್ತು ಆನ್‌ಲೈನ್ ಕಲಿಕೆಯನ್ನು ಕಾರ್ಯಸಾಧ್ಯವಾಗಿಸಲು ಹಾರ್ಡ್‌ವೇರ್ ಮತ್ತು ಡೇಟಾವನ್ನು ಹೊಂದಬೇಕಿದೆ, ಅದೇ ಸಮಯದಲ್ಲಿ, ಬದಲಾವಣೆಗೆ ಹೊಂದಿಕೊಳ್ಳಲು ವಿಶೇಷ ಶಿಕ್ಷಣತಜ್ಞರು ಮತ್ತು ಪೋಷಕರ ಬೆಂಬಲ ವಿಶೇಷ ಚೇತನ ಮಕ್ಕಳನ್ನು ಉತ್ತಮವಾಗಿ ಬೆಂಬಲಿಸಲು ಅಗತ್ಯ ಪರಿಸರ ಬೇಕಿದೆ"ಎಂದು ಅದು ಹೇಳಿದೆ.

ಶೈಕ್ಷಣಿಕ  ಬಜೆಟ್ ಅನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. "ಅದೇ ಸಮಯದಲ್ಲಿ, ಶಿಕ್ಷಣಕ್ಕಾಗಿ ಸಮುದಾಯ ರೇಡಿಯೋ ಮತ್ತು ದೂರದರ್ಶನದಂತಹ ಪರ್ಯಾಯ ಮಾಧ್ಯಮಗಳನ್ನು ಅನ್ವೇಷಿಸುವ ಅವಶ್ಯಕತೆಯಿದೆ. ವಿಶೇಷಚೇತನ  ಮಕ್ಕಳು ತಮ್ಮ ಪೌಷ್ಠಿಕಾಂಶದ ಅಗತ್ಯಕ್ಕಾಗಿ  ಮಧ್ಯಾಹ್ನದ ಊಟ ಅವಲಂಬಿಸಿರುವುದರಿಂದ, ಅವರು ಈ ಬೆಂಬಲವನ್ನು ಪಡೆಯುವುದು ಮುಖ್ಯವಾಗಿದೆ ," ಅದು ಹೇಳಿದೆ.

ಸ್ವಾಭಿಮಾನ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕಿ ಶ್ರುತಿ ಮೊಹಾಪಾತ್ರ ಮಾತನಾಡಿ, ವಿಶೇಷಚೇತನ ಮಕ್ಕಳೆಲ್ಲರನ್ನೂ ಒಂದೇ ಗುಂಪಿನಲ್ಲಿ ಸೇರಿಸಲು ಬರುವುದಿಲ್ಲ. ಏಕೆಂದರೆ ಅವರು ವಿಭಿನ್ನ ಅಂಗಗಳ ವಿಶೇಷಚೇತನರಾಗಿರುತ್ತಾರೆ. ಆದ್ದರಿಂದ ವಿಭಿನ್ನ ಅಗತ್ಯಗಳನ್ನು ಹೊಂದಿದ್ದಾರೆ. "ಪ್ರಸ್ತುತ ಸಾಂಕ್ರಾಮಿಕ ರೋಗವು ವಿಕಲಾಂಗ ವಿದ್ಯಾರ್ಥಿಗಳಸಾಮರ್ಥ್ಯವನ್ನು ಹೊಂದಿದೆ. ಸಾಕಷ್ಟು ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದಿದ್ದರೆ, ಅವರು ಶಿಕ್ಷಣದ ಶೋಧನೆ ಹಾಗೂ ಘನತೆಯ ಜೀವನದಲ್ಲಿ  ಸರಿಪಡಿಸಲಾಗದ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.

"ಪರ್ಯಾಯ ಕೋರ್ಸ್ ಗಳಿಗೆ ಅಗತ್ಯ ವಸ್ತುಗಳು ವಿಭಿನ್ನ ಪ್ರಕಾರದ ವಿಶೇಷಚೇತನರಿಗೆ ಪೂರೈಸಬೇಕು. ನಮ್ಮ ಶಿಫಾರಸುಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಸಶಕ್ತಗೊಳಿಸುವುದರಿಂದ ಅವರು ತಮ್ಮ ತಮ್ಮ ಕರ್ತವ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು" ಎಂದು ಮೋಹಪಾತ್ರ ಹೇಳಿದರು. ಮಾರ್ಚ್‌ನಲ್ಲಿ ಕೋವಿಡ್ 19 ನಿಂದ ಉಂಟಾದ ಲಾಕ್‌ಡೌನ್ ಶಾಲೆಗಳು ಮತ್ತು ಕಾಲೇಜುಗಳನ್ನು ಬೋಧನೆ ಮತ್ತು ಕಲಿಕೆಯ ಚಟುವಟಿಕೆಗಳಿಂಡ ದೂರ ಉಳಿಸಿದೆ, . ಆದರೆ ದುರ್ಬಲ ಇಂಟರ್ನೆಟ್  ಸಂಪರ್ಕ  ಇ-ಶಿಕ್ಷಣವನ್ನು ಅನೇಕ ಮಕ್ಕಳಿಗೆ ದೂರದ ಕನಸಾಗಿ ಮಾಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 35 ಕೋಟಿಗೂ ಹೆಚ್ಚು ವಿಶೇಷಚೇತನ ವಿದ್ಯಾರ್ಥಿಗಳು ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com