ಜಾರ್ಖಂಡ್: ಐಎಫ್‌ಎಸ್ ಅಧಿಕಾರಿಯ ಪ್ರೇರಣೆಯಿಂದ 700 ಚೆಕ್-ಡ್ಯಾಮ್‌ ನಿರ್ಮಿಸಿದ ಗ್ರಾಮಸ್ಥರು!

ಜಾರ್ಖಂಡ್ ರಾಜಧಾನಿ ರಾಂಚಿಯಿಂದ 45 ಕಿ.ಮೀ ದೂರದಲ್ಲಿರುವ ಒರ್ಮಂಜಿ ಬ್ಲಾಕ್ ವ್ಯಾಪ್ತಿಯಲ್ಲಿರುವ ಅರಾ ಮತ್ತು ಕೇರಂ ಗ್ರಾಮಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಅಲ್ಲಿನ ಜನಕ್ಕೆ ಕಾಡನ್ನು ಕಡಿದು, ಅದನ್ನು ಮಾರಾಟ ಸ್ಥಳೀಯ ಮದ್ಯ ಕುಡಿಯುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಎಲ್ಲರೂ ಭಾವಿಸಿದ್ದರು.
ಸಿದ್ಧಾರ್ಥ್ ತ್ರಿಪಾಠಿ
ಸಿದ್ಧಾರ್ಥ್ ತ್ರಿಪಾಠಿ

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಿಂದ 45 ಕಿ.ಮೀ ದೂರದಲ್ಲಿರುವ ಒರ್ಮಂಜಿ ಬ್ಲಾಕ್ ವ್ಯಾಪ್ತಿಯಲ್ಲಿರುವ ಅರಾ ಮತ್ತು ಕೇರಂ ಗ್ರಾಮಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಅಲ್ಲಿನ ಜನಕ್ಕೆ ಕಾಡನ್ನು ಕಡಿದು, ಅದನ್ನು ಮಾರಾಟ ಮಾಡಿ, ಸ್ಥಳೀಯ ಮದ್ಯ ಕುಡಿಯುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಒಬ್ಬ ಐಎಫ್ಎಸ್ ಅಧಿಕಾರಿ ಈ ಎರಡು ಗ್ರಾಮಗಳ ಜನರ ಮನಸ್ಸನ್ನು ಬದಲಾಯಿಸಿದ್ದು, ಅವರ ಪ್ರೇರಣೆಯಿಂದ 700 ಚೆಕ್-ಡ್ಯಾಮ್‌ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಈ ಎರಡು ಗ್ರಾಮಗಳು ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದವು. ಆದರೆ ಇಂದು, ಈ ಹಳ್ಳಿಗಳು ಸ್ವಾವಲಂಬಿಗಳಾಗಿವೆ. ಇಲ್ಲಿನ ಜನ ಡೈರಿ, ಕೋಳಿ ಮತ್ತು ಮೇಕೆ ಸಾಕಾಣಿಕೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾಧರಿಯಾಗಿದ್ದಾರೆ.

ಅನೇಕರು ತಮ್ಮದೇ ಆದ ಅಂಗಡಿಗಳನ್ನು ಹೊಂದಿದ್ದಾರೆ ಮತ್ತು ಗ್ರಾಮದಲ್ಲಿ ಬ್ಯೂಟಿ ಪಾರ್ಲರ್‌ಗಳನ್ನು ಸಹ ತೆರೆದಿದ್ದಾರೆ. ಈ ಎರಡು ಗ್ರಾಮಗಳ ಬದಲಾಣೆ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ‘ಮನ್ ಕಿ ಬಾತ್’ ನಲ್ಲಿ ಉಲ್ಲೇಖಿಸಿದ್ದಾರೆ.

ಈ ಬದಲಾವಣೆ ಹೇಗೆ ಸಾಧ್ಯವಾಯಿತು ಎಂದು ಗ್ರಾಮದಲ್ಲಿ ಯಾರನ್ನೇ ಕೇಳಿದದರು, ಎಂಜಿಎನ್ಆರ್ ಇಜಿಎ ಆಯುಕ್ತ ಹಾಗೂ ಐಎಫ್ಎಸ್ ಅಧಿಕಾರಿ ಸಿದ್ಧಾರ್ಥ್ ತ್ರಿಪಾಠಿ ಹೆಸರು ಹೇಳುತ್ತಾರೆ.

ತ್ರಿಪಾಠಿ ಅವರು, ಮೂರು ವರ್ಷಗಳ ಹಿಂದೆ ಕೆಲವು ಬದಲಾವಣೆ ಮಾಡಲು ಈ ಗ್ರಾಮಗಳಿಗೆ ಆಗಮಿಸಿದರು. ಆದರೆ ಬದಲಾವಣೆ ಒಪ್ಪಿಕೊಳ್ಳಲು ಗ್ರಾಮಸ್ಥರು ಸಿದ್ಧವಾಗಲಿಲ್ಲ. ಆದರೂ ಅವರು ಈ ಗ್ರಾಮಗಳಿಗೆ ಪದೇಪದೇ ಭೇಟಿ ನೀಡುತ್ತಲೇ ಇದ್ದರು ಮತ್ತು ಅಂತಿಮವಾಗಿ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.

ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಹಣದ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸಮಯ. ನೀವು ಗ್ರಾಮಸ್ಥರನ್ನು ಒಗ್ಗೂಡಿಸಿ ಸಂಘಟಿಸಬೇಕು ಮತ್ತು ಜನರಿಗೆ ಶಿಕ್ಷಣ ನೀಡಬೇಕು, ಆದರೆ ಅವರ ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲ್ಯಗಳಿಗೆ ಸರಿಯಾದ ಗೌರವವನ್ನು ನೀಡಬೇಕು ಎಂದು ತ್ರಿಪಾಠಿ ಹೇಳುತ್ತಾರೆ.

180 ಗ್ರಾಮಸ್ಥರ 75 ದಿನಗಳ ನಿರಂತರ ಶ್ರಮದಾನದ ಪರಿಣಾಮ ಗ್ರಾಮದಲ್ಲಿ 1.75 ಕೋಟಿ ರೂ.ಮೌಲ್ಯದ 700 ಚೆಕ್-ಡ್ಯಾಮ್ ಗಳನ್ನು ನಿರ್ಮಿಸಲಾಗಿದೆ ಎಂದು ಕೇರಂ ಗ್ರಾಮದ ಗ್ರಾಮ ಪ್ರಧಾನ್ ರಾಮೇಶ್ವರ ಬೇಡಿಯಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com