ಕೋವಿಡ್ ಸಂಕಟ ಕಾಲದಲ್ಲಿ ಮಾದರಿ ಕಾರ್ಯ: ದೆಹಲಿಯ ಮೊದಲ ಪ್ಲಾಸ್ಮಾದಾನಿಯಿಂದ ಏಳನೇ ಬಾರಿ ಪ್ಲಾಸ್ಮಾ ದೇಣಿಗೆ

ಇತರರೂ ತಾವು ಮುಂದೆ ಬಂದು ಜೀವಗಳನ್ನು ಉಳಿಸಲು ನಾನು ಆದರ್ಶಪ್ರಾಯನಾಗಿರಲು ಬಯಸುತ್ತೇನೆ ... ನಾನು ಇದನ್ನು ಮಾಡಬೇಕೆಂದು ಬಯಸಿರುವುದ್ ದೇವರ ಚಿತ್ತವಾಗಿರಬಹುದು" ಎಂದು 36 ವರ್ಷದ ತಬ್ರೇಜ್ ಖಾನ್ ಹೇಳಿದ್ದಾರೆ. ತಬ್ರೇಜ್ ತಮ್ಮ ಪ್ಲಾಸ್ಮಾಗಳನ್ನು ಏಳನೇ ಬಾರ್ಗೆ ದಾನ ಮಾಡಲು ನಿರ್ಧರಿಸಿದ್ದಾರೆ
ಕೋವಿಡ್ ಸಂಕಟ ಕಾಲದಲ್ಲಿ ಮಾದರಿ ಕಾರ್ಯ: ದೆಹಲಿಯ ಮೊದಲ ಪ್ಲಾಸ್ಮಾದಾನಿಯಿಂದ ಏಳನೇ ಬಾರಿ ಪ್ಲಾಸ್ಮಾ ದೇಣಿಗೆ

ನವದೆಹಲಿ: "ಇತರರೂ ತಾವು ಮುಂದೆ ಬಂದು ಜೀವಗಳನ್ನು ಉಳಿಸಲು ನಾನು ಆದರ್ಶಪ್ರಾಯನಾಗಿರಲು ಬಯಸುತ್ತೇನೆ ... ನಾನು ಇದನ್ನು ಮಾಡಬೇಕೆಂದು ಬಯಸಿರುವುದು ದೇವರ ಚಿತ್ತವಾಗಿರಬಹುದು" ಎಂದು 36 ವರ್ಷದ ತಬ್ರೇಜ್ ಖಾನ್ ಹೇಳಿದ್ದಾರೆ. ತಬ್ರೇಜ್ ತಮ್ಮ ಪ್ಲಾಸ್ಮಾಗಳನ್ನು ಏಳನೇ ಬಾರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. 

ಜಹಾಂಗೀರ್‌ಪುರಿಯ ನಿವಾಸಿ, ತಬ್ರೇಜ್ ದೆಹಲಿ ಮಹಾನಗರದ ಮೊದಲ ಪ್ಲಾಸ್ಮಾ ದಾನಿ. ಪ್ರಯಾಣದ ಇತಿಹಾಸ ಹೊಂದಿ ತನ್ನ ಸೋದರನೊಡನೆ ಸಂಪರ್ಕಕ್ಕೆ ಬಂದ ನಂತರ ಮಾರ್ಚ್ ನಲ್ಲಿ ಅವರಿಗೆ ಕೊರೋನಾವೈಅರಸ್ ಸೋಂಕು ಬಂದಿತ್ತು. ಆ ನಂತರದಲ್ಲಿ ಚಿಕಿತ್ಸೆ ಬಳಿಕ ಏಪ್ರಿಲ್ 5 ರಂದು ಸೋಂಕಿನಿಂದ ಚೇತರಿಸಿಕೊಂಡರು.

ತಬ್ರೇಜ್ ಖಾನ್ ತಮ್ಮ ಪ್ಲಾಸ್ಮಾವನ್ನು ಏಪ್ರಿಲ್  20 ರಂದು ಮೊದಲ ಬಾರಿಗೆ ದಾನ ಮಾಡಿದ್ದರು. ಅಂದಿನಿಂದ ಜನರು ತಾವು ಬದುಕುಳಿಯಲಿಕ್ಕಾಗಿ, ಗಂಭೀರ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗಾಗಿ ಅವರನ್ನು ಸಂಪರ್ಕಿಸಿದಾಗ ರೋಗಿಯ  ರಕ್ತದ ಗುಂಪಿನೊಂದಿಗೆ ಹೊಂದಿಕೆ ಕಂಡುಬಂದಲ್ಲಿ ತಬ್ರೇಜ್ ತಾವು ಪ್ಲಾಸ್ಮಾವನ್ನು ದಾನ ಮಾಡಲು ಹಿಂಜರಿಯುವುದಿಲ್ಲ. 

"ಕೆಲವೇ ದಿನಗಳ ಹಿಂದೆ, ಹಿರಿಯ ವ್ಯಕ್ತಿಯೊಬ್ಬರ ಕುಟುಂಬವು ನನ್ನನ್ನು ಸಂಪರ್ಕಿಸಿತು, ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ನಾನು ಕಂಡುಕೊಂಡೆ. ನಾನು ಪ್ಲಾಸ್ಮಾವನ್ನು ದಾನ ಮಾಡಿದ್ದೇನೆ ಮತ್ತು ಈಗ ಅವರ ಸ್ಥಿತಿ ಉತ್ತಮವಾಗಿದೆ, ಅವರ  ಜೀವ ಉಳಿದಿದೆ. . ರೋಗಿಯ ಕುಟುಂಬ ನನ್ನನ್ನು ತಬ್ಬಿಕೊಂಡು ಅತ್ತಿದ್ದು ನಾನು ಅವರ ಭಾವನೆಗಳನ್ನು ಅರಿಯಬಲ್ಲೆ. ಅವರ ಆಶೀರ್ವಾದ ನನಗೆ ಬೇಕು" ತಬ್ರೇಜ್ ಹೇಳಿದ್ದಾರೆ.   ತನ್ನ ದೇಹವು ಇತರರಿಗೆ ಸಹಾಯ ಮಾಡುವ ಪ್ರತಿಕಾಯಗಳನ್ನು ಇನ್ನೂ ಉತ್ಪಾದಿಸಬಲ್ಲದು ಎಂಬ ಬಗ್ಗೆಅವರಿಗೆ ಹೆಮ್ಮೆ ಇದ್ದರೂ ಸಾಮಾಜಿಕ ಕಳಂಕವೇ ಅವರನ್ನು ಕಾಡುವ ಸಂಕಟವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಎಲ್ಲಾ ಬದಲಾಗಿದೆ ಎಂದು ತಬ್ರೇಜ್ ಹೇಳಿದ್ದಾರೆ. "ಜನರು ನನ್ನನ್ನು ನೋಡಿದಾಗ ಮುಖ ತಿರುಗಿಸುತ್ತಾರೆ. ಈ ಹಿಂದಿದ್ದ ನೆರೆಹೊರೆಯವರೂ ನನ್ನನ್ನು ಸಂಜೆ ಚಹಾಕ್ಕಾಗಿ ಆಹ್ವಾನಿಸುತ್ತಿದ್ದರು ಆದರೆ ಈಗ ಅವರು ನಮ್ಮನ್ನು ನಿರ್ಲಕ್ಷಿಸುತ್ತಾರೆ, ಅದು ನೋವುಂಟು ಮಾಡುತ್ತದೆ"  ಕೆಲವೊಮ್ಮೆ, ಅವರು ಮುಸ್ಲಿಂ ಆಗಿರುವುದರಿಂದ ಅವರು ದೆಹಲಿಯಲ್ಲಿ ವೈರಸ್ ಹರಡುವ ಕೆಲಸದಲ್ಲಿ ತೊಡಗಿದ್ದರೆಂಬ ಆರೋಪವೂ ಕೇಳಿಬಂದಿದೆ.  ಈ ಕಳಂಕವು ತಬ್ಲಿಘಿ ಜಮಾಅತ್ ಘಟನೆಯಿಂದ ಹುಟ್ಟಿಕೊಂಡಿದೆ. . “ಈಗ ಅವರು (ಸ್ಥಳೀಯರು) ನನ್ನ ದಾನಗುಣವನ್ನು ಕಳಂಕವನ್ನು ಮುಚ್ಚುಡುವ ಕ್ರಿಯೆ ಎನ್ನುತ್ತಿದ್ದಾರೆ. ಈ ದ್ವೇಷ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ ಆರು ಬಾರಿಯ ದಾನದಲ್ಲಿ ಐದು ಹಿಂದೂ ಕುಟುಂಬಗಳಿಗೆ ದಾನ ಮಾಡಿದ್ದೇನೆ.  ಸಾಂಕ್ರಾಮಿಕ ರೋಗದ ನಡುವೆ ಧರ್ಮ ಎಲ್ಲಿ ಬರುತ್ತದೆ? ”ಎಂದು ಅವರು ಪ್ರಶ್ನಿಸಿ ವಿಷಾದ ವ್ಯಕ್ತಪಡಿಸುತ್ತಾರೆ.

ಇನ್ನು ತಬ್ರೇಜ್ ಇಷ್ಟು ಬಾರಿ ಪ್ಲಾಸ್ಮಾ ದಾನ ಮಾಡಿದರೂ ದೆಹಲಿ ಸರ್ಕಾರದಿಂದ ಅಥವಾ ಜಿಲ್ಲಾ ಡಿಎಂನಿಂದ ಯಾವುದೇ ಮಾನ್ಯತೆ ಸಿಕ್ಕಿಲ್ಲ. "ಪ್ಲಾಸ್ಮಾ ದಾನವನ್ನು ಉತ್ತೇಜಿಸಲು ಅವರು ಕನಿಷ್ಠ ನನ್ನ ಉದಾಹರಣೆಯನ್ನು ಬಳಸಬಹುದು" ಅವರು ಹೇಳಿದ್ದಾರೆ. .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com