ಭಾರತೀಯ ಸೇನಾ ಯುದ್ಧ ವಿಮಾನ ಪೈಲಟ್ ಆಗಿ ಆಯ್ಕೆಯಾದ ಕೊಡಗಿನ ಯುವತಿ ಪುಣ್ಯ ನಂಜಪ್ಪ 

ಮಡಿಕೇರಿಯ ಯುವತಿ ಪುಣ್ಯ ನಂಜಪ್ಪ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.  ಈ ಮೂಲಕ ಈ ಹುದ್ದೆಗೇರಿದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ. 
ಪುಣ್ಯ ನಂಜಪ್ಪ
ಪುಣ್ಯ ನಂಜಪ್ಪ

ಮಡಿಕೇರಿ: ಮಡಿಕೇರಿಯ ಯುವತಿ ಪುಣ್ಯ ನಂಜಪ್ಪ ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.  ಈ ಮೂಲಕ ಈ ಹುದ್ದೆಗೇರಿದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ.

ಮಡಿಕೇರಿಯ ನಂಜಪ್ಪ ಹಾಗೂ ಅನು ದಂಪತಿಗಳ ಒಬ್ಬಳೇ ಮಗಳಾಗಿದ್ದ ಪುಣ್ಯ ನಂಜಪ್ಪ ಬಾಲ್ಯದಿಂದಲೇ ಪೈಲಟ್ ಆಗುವ ಕನಸು ಕಂಡಿದ್ದರು.  ಮೈಸೂರು ದಸರಾ ವೇಳೆ ನಡೆದ ಏರ್ ಶೋ ನೋಡಿದ್ದ ಪುಣ್ಯ ತಾವೂ ವಿಮಾನ ಪೈಲಟ್ ಆಗಬೇಕೆಂದು ನಿಶ್ಚಯಿಸಿದ್ದರು.

ಹೈದರಾಬಾದ್ ನಲ್ಲಿ ಒಂದು ವರ್ಷದ ಸೇನಾ ತರಬೇತಿ ಮುಗಿಸಿದ್ದ ಪುಣ್ಯ ಕಳೆದ ವರ್ಷ ೨೦೧೯ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ಸೇನೆ ಸೇರಿದ್ದರು.

ಇಂಜಿನಿಯರಿಂಗ್ ಪದವೀಧರೆಯೂ ಆಗಿರುವ ಪುಣ್ಯ ನಂಜಪ್ಪ ಅವರೀಗ ಪೂರ್ಣ ಪ್ರಮಾಣದ ಯುದ್ಧ ವಿಮಾನ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com