ಕೌಶಿಕ್ ರಾಜು
ಕೌಶಿಕ್ ರಾಜು

ಲಾಕ್ ಡೌನ್ ನಡುವೆ ಪ್ರೀತಿಯಿಂದ ಜನಸೇವೆ: ಲಕ್ಷ ಮಂದಿಯ ಹೊಟ್ಟೆ ತುಂಬಿಸುವ ಕೌಶಿಕ್ ರಾಜು 

ಕೌಶಿಕ್ ರಾಜು ಈ ಹಿಂದಿಗಿಂತ ಈಗ ಹೆಚ್ಚು ಕಾರ್ಯನಿರತವಾಗಿದ್ದಾರೆ. ಲಾಕ್ ಡೌನ್ ನ ಈ ದಿನಗಳಲ್ಲಿ ನಗರದಾದ್ಯಂತ 250 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಿನಕ್ಕೆ 1.7 ಲಕ್ಷ ಊಟದ ತಯಾರಿಯನ್ನು ಅವರು ನೋಡಿಕೊಳ್ಳಬೇಕಿದೆ.

ಬೆಂಗಳೂರು: ಕೌಶಿಕ್ ರಾಜು ಈ ಹಿಂದಿಗಿಂತ ಈಗ ಹೆಚ್ಚು ಕಾರ್ಯನಿರತವಾಗಿದ್ದಾರೆ. ಲಾಕ್ ಡೌನ್ ನ ಈ ದಿನಗಳಲ್ಲಿ ನಗರದಾದ್ಯಂತ 250 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಿನಕ್ಕೆ 1.7 ಲಕ್ಷ ಊಟದ ತಯಾರಿಯನ್ನು ಅವರು ನೋಡಿಕೊಳ್ಳಬೇಕಿದೆ. ಆಟ್ರಿಯಾ ಗ್ರೂಪ್ಸ್ ನ ನಿರ್ದೇಶಕರಾದ ಕೌಶಿಕ್ ‘ಸರ್ವ್ ಬೆಂಗಳೂರು’ ಉಪಕ್ರಮಕ್ಕೆ ಸಜ್ಜಾಗಿ ನಿಂತಿದ್ದಾರೆ. ಈ ಸಮಯದಲ್ಲಿ ಹೆಚ್ಚು ಅಗತ್ಯವಿರುವವರಿಗೆತಮ್ಮ ಬೆಂಬಲವನ್ನು ಇವರು ನೀಡುತ್ತಿದ್ದಾರೆ.

"ಅನೇಕರಿಗೆ ಆಹಾರ ಸಮಸ್ಯೆಯಾಗಿದೆ. ಊಟ ಮೂಲಭೂತವಾದ ಅಗತ್ಯ. ಲಾಕ್ ಡೌನ್ ಘೋಷಣೆಯಾದಾಗ ನಾವು ರಾಡಿಸನ್ ಬ್ಲೂ ಆಟ್ರಿಯಾದ  ಅಡುಗೆಮನೆಯಲ್ಲಿ ಈ ‘ಸರ್ವ್ ಬೆಂಗಳೂರು’ ಪಕ್ರಮವನ್ನು ಪ್ರಾರಂಭಿಸಿದ್ದೇವೆ. ಆದರೆ ಹೆಚ್ಚುತ್ತಿರುವ ಹಸಿದವರ ಸಂಖ್ಯೆ ಬಗ್ಗೆ ನಾವು ಅರಿತಾಗ ಮ್ಮ ಹೆಚ್ಚಿನ ಅಡಿಗೆಮನೆಗಳನ್ನು ಈ ಗುರಿ ಸಾಧನೆಗೆ ಬಳಕೆ ಮಾಡಲು  ನಾವು ನಿರ್ಧರಿಸಿದ್ದೇವೆ. ಇದಲ್ಲದೆ, ಸಾಮಾಜಿಕ ಅಂತರವನ್ನು  ಅನುಸರಿಸುವುದನ್ನು  ಖಚಿತಪಡಿಸಿಕೊಳ್ಳಲು ನಮಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗಿದೆ ” ಅವರು ಹೇಳೀದ್ದಾರೆ.

ಈಗ, ಸುಮಾರು 3 ಅಡಿಗೆಮನೆಗಳು ಚಾಲನೆಯಲ್ಲಿವೆ, ಅಲ್ಲಿ ಸಿಬ್ಬಂದಿ ಮುಂಜಾನೆ 3 ಗಂಟೆಗೆ ಅಡುಗೆ ಪ್ರಾರಂಭಿಸುತ್ತಾರೆ. ಊಟವು ಸಾಮಾನ್ಯವಾಗಿ ಒಂದು ಖಾದ್ಯವನ್ನು ಒಳಗೊಂಡಿರುತ್ತದೆ - ಪೊಂಗಲ್ ಅಥವಾ ಖಾರಾಬಾತ್  ನಂತಹ ಅಕ್ಕಿ ಅಥವಾ ರವೆಯಿಂದ ಮಾಡಿದ ತಿಂಡಿಯನ್ನು ನಾವು ಹಂಚುತ್ತೇವೆ. "ನಾವು ರೊಟೀನ್  ಮೆನುವನ್ನು ಅನುಸರಿಸುತ್ತೇವೆ ಮತ್ತು ಪ್ರತಿ ಪ್ಯಾಕ್‌ 400 ಗ್ರಾಂ ನಷ್ಟು ಆಹಾರ ಹೊಂದಿರಲಿದೆ. ಈ ಊಟವನ್ನು ವೈಟ್‌ಫೀಲ್ಡ್, ಪೀಣ್ಯಮತ್ತು ಬೊಮ್ಮಸಂದ್ರ ಸೇರಿದಂತೆ ನಗರದಾದ್ಯಂತ ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಪ್ಯಾಕಿಂಗ್ ತಂಡವು ಬೆಳಿಗ್ಗೆ 7 ರ ಸುಮಾರಿಗೆ ಕಾರ್ಯಾಚರಣೆಗೆ ಇಳಿಯುತ್ತದೆ. ಆ ಬಳಿಕ ಅದನ್ನು ವಿತರಣೆಗೆ ಕಳುಹಿಸಲಾಗುತ್ತದೆ. "ಬೆಳಿಗ್ಗೆ 9.30 ರ ಹೊತ್ತಿಗೆ, ಭೋಜನವು ತಯಾರಾಗುತ್ತಿದೆ, ನಂತರ ಅದನ್ನು ಪ್ಯಾಕ್ ಮಾಡಿ ಸಂಜೆ ವೇಳೆಗೆ ಕಳುಹಿಸಲಾಗುತ್ತದೆ" ಎಂದು ರಾಜು ಹೇಳುತ್ತಾರೆ. ಅವರ ಸಿಬ್ಬಂ 350 ಸದಸ್ಯರು ಇದರಲ್ಲಿ ಭಾಗವಹಿಸುತ್ತಾರೆ. ಅವರಲ್ಲಿ ಅನೇಕರು ಅವರ ಕುಟುಂಬದೊಡನೆ ಭಿನ್ನಾಭಿಪ್ರಾಯಕ್ಕೆ ಒಳಗಾಗಬೇಕಾಗಿ ಬಂದಿತ್ತು. 

"ಇದು ಸಂಪೂರ್ಣವಾಗಿ ಸ್ವಯಂಸೇವೆಯಾಧಾರಿತವಾಗಿದೆ. ಜನರು ಹೊರಹೋಗಲು ಸಾಕಷ್ಟು ಭಯಪಡುತ್ತಾರೆ. ಅದನ್ನು ನಾವು ಅರ್ಥಮಾಡಿಕೊಂಡಿದ್ದೇವೆ" ಎಂದು ಅವರು ಹೇಳುತ್ತಾರೆ, ಜನರು ಸಹಾಯ ಮಾಡಲು ಮುಂದೆ ಬರುವುದನ್ನು ಕಾಣಲು ಸಂತಸವಾಗುತ್ತದೆ.  ಏಪ್ರಿಲ್ 14 ರವರೆಗೆ ಆಹಾರವನ್ನು ಕಳುಹಿಸುವ ಯೋಜನೆ ಇದ್ದರೂ, ಮೊದಲ ಲಾಕ್‌ಡೌನ್  ಮುಂದುವರಿದ ಹಿನ್ನೆಲೆ ಈ ಉಪಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.  ಈಗ, ಅಡಿಗೆಮನೆಗಳನ್ನು ವಿಕೇಂದ್ರೀಕರಿಸುವ ಪ್ರಯತ್ನದಲ್ಲಿ, ಅಪಾರ್ಟ್ಮೆಂಟ್ ಸಂಕೀರ್ಣಗಳ ಬಳಕೆ ಮಾಡಬೇಕಿದೆ. ಆ ಸಂಕೀರ್ಣದಲ್ಲಿನ ಅಡುಗೆಮನೆಗಳಿಂದ  50-100ಊಟಗಳು ತಯಾರಾಗಬಹುದು. ಹಾಗೊಮ್ಮೆ ಮಾಡಿದರೆ ಈ ಉಪಕ್ರಮ ಮುಂದಿನ ಒಂದು ವರ್ಷದ ಕಾಲ ಮುಂದುವರಿಯಲು ಅನುಕೂಲವಾಗಲಿದೆ.  ಎಂದು ಅವರು ಯೋಜಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com