ಅನಾರೋಗ್ಯಕ್ಕೀಡಾದ ಮಗನನ್ನು ಕಾಣುವ ಹಂಬಲ: ಕಣ್ಣೀರಿಡುತ್ತಿರುವ ವಲಸೆ ಕಾರ್ಮಿಕನ ವೈರಲ್ ಫೋಟೋದ ಹಿಂದಿನ ಕಥೆ

ಸಾಮಾಜಿಕ ತಾಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಕಂಡ ಪಿಟಿಐ ಮೂಲದ್ದೆನ್ನಲಾದ ವಲಸೆ ಕಾರ್ಮಿಕನ ಛಾಯಾಚಿತ್ರವೊಂದು ವ್ಯಾಪಕ ವೈರಲ್ ಆಗಿದ್ದು ಇದರ ಪರಿಣಾಮ ಬಿಹಾರದಲ್ಲಿರುವ ಅವರ ಮನೆಗೆ ತಲುಪಲು  ಆ ವ್ಯಕ್ತಿಗೆ ನೆರವು ದೊರಕಿದೆ. 
ಛಾಯಾಗ್ರಾಹಕ ತೆಗೆದ
ಛಾಯಾಗ್ರಾಹಕ ತೆಗೆದ

ನವದೆಹಲಿ: ಸಾಮಾಜಿಕ ತಾಣ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಕಂಡ ಪಿಟಿಐ ಛಾಯಾಗ್ರಾಹಕ ತೆಗೆದ ವಲಸೆ ಕಾರ್ಮಿಕನ ಛಾಯಾಚಿತ್ರವೊಂದು ವ್ಯಾಪಕ ವೈರಲ್ ಆಗಿದ್ದು ಇದರ ಪರಿಣಾಮ ಬಿಹಾರದಲ್ಲಿರುವ ಅವರ ಮನೆಗೆ ತಲುಪಲು  ಆ ವ್ಯಕ್ತಿಗೆ ನೆರವು ದೊರಕಿದೆ. 

ಪಿಟಿಐ  ಛಾಯಾಗ್ರಾಹಕ ಅತುಲ್ ಯಾದವ್ ದೆಹಲಿ ರಸ್ತೆಬದಿಯಲ್ಲಿದ್ದ ರಾಂಪುಕರ್ ಪಂಡಿತ್ ಅವರೊಂದಿಗಿನ ಭೇಟಿಯ ಸಮಯ ತೆಗೆಯಲಾಗಿದ್ದ ವಲಸೆ ಕಾರ್ಮಿಕರ ದುರಂತವನ್ನು ಬೊಂಬಿಸುವ ಚಿತ್ರವಿದಾಗಿತ್ತು.

"ರಾಂಪುಕರ್  ಪಂಡಿತ್ ಫೋನಿನಲ್ಲಿ ಮಾತನಾಡುತ್ತಾ  ನಿಜಾಮುದ್ದೀನ್ ಸೇತುವೆಯ ಮೇಲೆ ಸತತವಾಗಿ ಕಣ್ಣೀರುಗೆರೆಯುತ್ತಿದ್ದರು. ಹಾಗಾಗಿ ನಾನು ಮುಂದೆ ಹೋಗಲು ಸಾಧ್ಯವಾಗಿಲ್ಲಕಳೆದ ಕೆಲವು ವಾರಗಳಲ್ಲಿ, ನಾನು ಅನೇಕ ವಲಸಿಗರನ್ನು ಕಂಡಿದ್ದೇನೆ ಮತ್ತುಅವರ ಫೋಟೋಗಳನ್ನು ಕ್ಲಿಕ್ಕಿಸಿದ್ದೇನೆ. ಒಬ್ಬರು ಇನ್ನೊಬ್ಬರಿಗಿಂತ ಹೆಚ್ಚು ಅಸಹಾಯಕರಾಗಿದ್ದಾರೆ, ಆದರೆ ಅವರ ಮುಖದಲ್ಲಿನ ನೋವು ನನಗೆ ಬೆಚ್ಚಿ ಬೀಳಿಸಿತ್ತು.ರಾಂಪುಕರ್  ಪಂಡಿತ್ ಅವರ ಚಿತ್ರ ತೆಗೆದು ಬಳಿಕ ಮುಂದೆ ಹೋಗುವುದಕ್ಕೆ ನನಗೆ ಸಾಧ್ಯವಾಗಲಿದೆ "ಅವರಿಗೇನು ತೊಂದರೆ ಕಾಡುತ್ತಿದೆ?" ತಿಳಿಯುವ ಮನಸ್ಸಾಗಿತ್ತು. ಅದರಂತೆ ನಾನು ಅವರ ಬಳಿ ಸಾರಿ ವಿಚಾರೈಸಲಾಗಿ ಅವರ ಮಗ ನಾರೋಗ್ಯಕ್ಕೆ ತುತ್ತಾಗಿ ಇಂದಲ್ಲ ನಾಳೆ ಸಾಯುವ ಸ್ಥಿತಿಯಲ್ಲಿದ್ದಾನೆ ಎನ್ನುವುದು ತಿಳಿದಿತ್ತು. ಆತನಿಗೆ ತನ್ನ ಮಗನನ್ನು ಕಾಣಲು ಊರಿಗೆ ತುರ್ತಾಗಿ ಹೋಗಬೇಕಿತ್ತು.

"ನಾನು ಅವರ ಮಗ ಎಲ್ಲಿದ್ದಾನೆ? ಎಂದು ಕೇಳಲು ಅವರು ದುಃಖದ ಭರದಲ್ಲಿ ಹೆಚ್ಚು ಹೇಳದೆ "ಅಲ್ಲಿ" ಎಂದಷ್ಟೇ ಉತ್ತರಿಸಿದ್ದರು ಮತ್ತು ಕೆಲ  ಮೈಲಿ ದೂರದಲ್ಲಿರುವ ದೆಹಲಿಯ ಗಡಿಯ ಕಡೆಗೆ ತೋರಿಸುತ್ತಿದ್ದರು.

"ಸುಮಾರು 1,200 ಕಿ.ಮೀ ದೂರದಲ್ಲಿರುವ ಬಿಹಾರದ ಬೆಗುಸರೈನಲ್ಲಿರುವ ಬರಿಯಾರ್‌ಪುರದವರಾದ ಅವರ ಊರಾಗಿತ್ತು. ಅವರು ನಜಫಘರ್ ಪ್ರದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಯಾವುದೇ ಸಾರ್ವಜನಿಕ ಸಾರಿಗೆಯ ಅನುಪಸ್ಥಿತಿಯಲ್ಲಿ, ದೇಶಾದ್ಯಂತ ಸಾವಿರಾರು ಇತರ ವಲಸಿಗರಂತೆ ಕಾಲ್ನಡಿಗೆಯಲ್ಲೇ ಮನೆಗೆ ತೆರಳಲುಅವರು ಪ್ರಾರಂಭಿಸಿದ್ದಾರೆ.ಬ್ರಿಡ್ಜ್ ನಲ್ಲಿದ್ದ ಪೋಲೀಸರು ಅವರನ್ನು ಹೋಗಲು ಬಿಡದ ಕಾರಣ ಅವರ ಪ್ರಯಾಣ  ಅಲ್ಲಿಗೆ ಮುಕ್ತಾವಾಗಿತ್ತು. ನಾನು ಹೋಗುವ ಮೂರು ದಿನಗಳ ಮುಂಚಿನಿಂದಲೇ ಅವರು ಇದೇ ಬ್ರಿಡ್ಜ್ ಮೇಲೆ ದಿನಗಳೆದಿದ್ದರು.ನಾನು ಅವನಿಗೆ ಬಿಸ್ಕತ್ತು ಮತ್ತು ಸ್ವಲ್ಪ ನೀರು ನೀಡಿದೆ. ಹಾಗೂ ಧೈರ್ಯ ತುಂಬಲು ಪ್ರಯತ್ನಿಸಿದೆ. ಆದರೆ ತನ್ನ ಮಗನನ್ನು ಮತ್ತೆ ನೋಡುವುದಿಲ್ಲ ಎಂಬ ಭಯ ಅವರಲ್ಲಿತ್ತು. ಆದ ಕಾರಣ ನನ್ನ ಸಮಾಧಾನದ ಮಾತುಗಳು ಅವರ ಮನಸ್ಸಿಗೆ ನಾಟುವುದಿಲ್ಲ? 

"ಈ ವ್ಯಕ್ತಿಯನ್ನು ಅವನ ದುಃಖದಿಂದ ದೂರಮಾಡಲು  ನಾನು ತೀವ್ರವಾಗಿ ಬಯಸಿದ್ದೆ ಮತ್ತು ಸುತ್ತಮುತ್ತಲಿನ ಪೊಲೀಸ್ ಸಿಬ್ಬಂದಿಯನ್ನು ಈ ಬಗ್ಗೆ ವಿಚಾರಿಸಿದೆ. ಗಡಿ ದಾಟಲು ಅವಕಾಶ ನೀಡುವಂತೆ ವಿನಂತಿಸಿದೆ.ಪೋಲೀಸರಿಗೆ ಇದು ಇಷ್ಟವಾಗಿಲ್ಲ. ಆದರೆ ಮಾದ್ಯಮದವನಾಗಿದ್ದ ನನ್ನಿಂದ ಇಂತಹಾ ನಂತಿಯು ಬಂದಿದ್ದರಿಂದ ಅವರು ಮನೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದಾಗಿ ತಿಳಿಸಿದ್ದರು,ನಾನು ಶೀಘ್ರದಲ್ಲೇ ಮನೆಗೆ ತಲುಪಿದೆ, ಮತ್ತು ನಾನು ಅವನ ಹೆಸರು ಅಥವಾ ಅವನ ಫೋನ್ ಸಂಖ್ಯೆಯನ್ನು ಪಡೆದಿಲ್ಲ ಎಂದು ನೆನಪಾಗಿತ್ತು. ಅವರು  ಮನೆಗೆ ತಲುಪಲು ಯಶಸ್ವಿಯಾಗಿದ್ದಾರೆಯೆ? ಪುತ್ರನನ್ನು ನೋಡಿದರೆ? ಮಗ ಆರೋಗ್ಯವಿದ್ದಾನೆಯೆ? ಇದೆಲ್ಲವನ್ನು ನಾನು ತಿಳಿಯಬೇಕಿತ್ತು.

"ಪಿಟಿಐನಲ್ಲಿ ನಾನು ತೆಗೆದಿದ್ದ ಛಾಯಾಚಿತ್ರವನ್ನು ಮಾದ್ಯಮಗಳಲ್ಲಿ ಹರಿಯಬಿಟ್ಟೆ. ಅದು ವೈರಲ್ ಆಗಿತ್ತು. ಹಲವಾರು ಪತ್ರಿಕೆಗಳು ಅವರ ಕಥೆಯನ್ನು ಪ್ರಕಟಿಸಿದವು, ಬಳಿಕ ನಾನು ಅವರ ಹೆಸರು ರಾಂಪುಕರ್ ಪಂಡಿತ್ ಎಂಬುದನ್ನು ಅರಿತೆ. ಅದಲ್ಲದೆ ಅವರು ಅವರ ಪುತ್ರನನ್ನು ಕಳೆದುಕೊಂಡರೆನ್ನುವ ಸಂಗತಿ ಸಹ ತಿಳಿದುಕೊಂಡೆ. ನನ್ನ ಹೃದಯ ದುಃಖದಿಂದ ಮುದುಡಿ ಹೋಗಿತ್ತು." 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com