ಖೋ ಖೋ ದಲ್ಲಿ ಕ್ರೀಡಾ ರತ್ನ ಪ್ರಶಸ್ತಿ: ರಾಜ್ಯಕ್ಕೆ ಹೆಮ್ಮೆಯ ಗರಿ ಮೂಡಿಸಿದ ಗ್ರಾಮೀಣ ಪ್ರತಿಭೆ

ಟಿ ನರಸಿಪುರ ತಾಲೂಕಿನ ಕುರುಬೂರು ಗ್ರಾಮದ 20 ವರ್ಷದ ವೀಣಾ ಖೋಖೋದಲ್ಲಿ ಕ್ರೀಡಾ ರತ್ನ ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಬಿಕಾಂ ಪದವೀಧರೆಯಾಗಿರುವ ವೀಣಾ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ  ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಂ.ವೀಣಾ
ಎಂ.ವೀಣಾ

ಮೈಸೂರು: ಟಿ ನರಸಿಪುರ ತಾಲೂಕಿನ ಕುರುಬೂರು ಗ್ರಾಮದ 20 ವರ್ಷದ ವೀಣಾ ಖೋಖೋದಲ್ಲಿ ಕ್ರೀಡಾ ರತ್ನ ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಬಿಕಾಂ ಪದವೀಧರೆಯಾಗಿರುವ ವೀಣಾ ರಾಜ್ಯ ಸರ್ಕಾರ ನೀಡುವ ಕ್ರೀಡಾ ರತ್ನ  ಪ್ರಶಸ್ತಿಗೆ ಭಾಜನರಾಗಿದ್ದಾರೆ,

10 ವರ್ಷದ ಹಿಂದೆ ಅಂದರೆ ವೀಣಾ 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ಖೋಖೋ ಅಭ್ಯಾಸ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಆಕೆ ತಿರುಗಿ ನೋಡಿಲ್ಲ, ಹಲವು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖೋಖೋ ಪಂದ್ಯಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.

ವೀಣಾ ಅಗ್ರ ಶ್ರೇಯಾಂಕದ ಆಲ್ ರೌಂಡ ಪರ್ ಫಾರ್ಮರ್ ಆಗಿದ್ದಾರೆ. 2019-20ನೇ ಸಾಲಿನ ರಾಷ್ಟ್ರೀಯ ಖೋಖೋ 53ನೇ ಹಿರಿಯರ ಚ್ಯಾಂಪಿಯನ್ ಶಿಪ್ ನಲ್ಲಿ ಝಾನ್ಸಿರಾಣಿ ಲಕ್ಷ್ಮಿಭಾಯಿ ಪ್ರಶಸ್ತಿ ಪಡೆದಿದ್ದಾರೆ. ಅಸ್ಸಾಂನಲ್ಲಿ ನಡೆದ 12 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವರು ದೆಹಲಿಯಲ್ಲಿ ನಡೆದ 4 ನೇ ಏಷ್ಯನ್ ಗೇಮ್ಸ್ ಖೋ-ಖೋ ಅಂತರರಾಷ್ಟ್ರೀಯ ಶಿಬಿರದಲ್ಲಿ  ಭಾಗವಹಿಸಿದರು.

ಪ್ರತಿದಿನ ನಾನು 5 ಗಂಟೆಗೂ ಹೆಚ್ಚುಕಾಲ ಪ್ರಾಕ್ಟೀಸ್ ಮಾಡುತ್ತೇನೆ, ಆಟದಿಂದಾಗಿ ನನಗೆ ಹೆಚ್ಚಿನ ಪ್ರಸಿದ್ಧಿ ದೊರೆತಿರುವುದರಿಂದ ನನಗೆ ಸಂತೋಷವಾಗಿದೆ, ಅರ್ಜುನ ಪ್ರಶಸ್ತಿಗಾಗಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಆಸೆಯಿದೆ ಎಂದು ಹೇಳಿರುವ ವೀಣಾ ಖೋಖೋ ಕೋಚ್ ಆಗಿ, ಈ ಆಟವನ್ನು ಮತ್ತಷ್ಟು ಪ್ರಚುರಪಡಿಸಬೇಕೆಂಬ ಆಸೆಯಿದೆ ಎನ್ನುತ್ತಾರೆ.

ನಾವು ಆಟವಾಡಲು ಆರಂಭಿಸಿದಾಗ ನಮಗೆ ಮೈದಾನವೂ ಇರಲಿಲ್ಲ, ತರಬೇತುದಾರರು ಇರಲಿಲ್ಲ,  ಕ್ರೀಡೆ ಬಗ್ಗೆ ನಮಗೆ ಕನಿಷ್ಠ ಜ್ಞಾನವೂ ಇರಲಿಲ್ಲ, ಹಳ್ಳಿಗರ ಮತ್ತು ಕುಟುಂಬಸ್ಥರ ವಿರೋಧದ ಜೊತೆಗೆ ಹಲವು ಸಮಸ್ಯೆಗಳನ್ನು ಎದುರಿಸಿ ತೆಂಗಿನಕಾಯಿ ಫಾರಂ ನಲ್ಲಿ ನಾವು ಖೋಖೋ  ಆರಂಭಿಸಲು ಪ್ರಾರಂಭಿಸಿದೆವು. ನಮ್ಮ ಶಾಲೆಯಲ್ಲಿದ್ದ ಗಣಿತ ಶಿಕ್ಷಕರ ಸಹಾಯದಿಂದ ನಾವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡಲು ಬಂದು ನಿಂತಿದ್ದೇವೆ ಎಂದು ವೀಣಾ ತಮ್ಮ ಹಿಂದಿನ ನೆನಪನ್ನು ಸ್ಮರಿಸಿದ್ದಾರೆ.

2008 ರಲ್ಲಿ ಮಂಜುನಾಥ್ ಕೆಲಸಕ್ಕೆ ಸೇರಿದರು, ಬಿಡುವಿನ ಸಮಯದಲ್ಲಿ ಶಾಲೆ ಆವರಣದಲ್ಲಿ ಒಬ್ಬರನ್ನು ಒಬ್ಬರು ಓಡಿಸಿಕೊಂಡು ಹಿಡಿಯುವುದನ್ನು ಮಾಡುತ್ತಿದ್ದೇವು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಚೆನ್ನಾಗಿ ಆಟವಾಡುವುದನ್ನು ಮಂಜುನಾಥ್ ಗಮನಿಸಿದರು, 12 ವರ್ಷಗಳ ಅವಧಿಯಲ್ಲಿ ಹಲವು ವಿದ್ಯಾರ್ಥಿಗಳು ಖೋಖೋ ಅಭ್ಯಾಸ ಮಾಡಿ ಹಲವು
ಟೂರ್ನಮೆಂಟ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ವೀಣಾ ಅವರ ಸಾಧನೆ ಹಲವರಿಗೆ ಸ್ಫೂರ್ತಿಯಾಗಿದೆ, ನಮ್ಮ ಗ್ರಾಮದ ಇನ್ನೂ ಹೆಚ್ಚಿನ ಮಕ್ಕಳು ಕ್ರೀಡಾ ರತ್ನ ಪ್ರಶಸ್ತಿ ಗಳಿಸಲಿದ್ದಾರೆ ಎಂದು ಮಂಜುನಾಥ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 5 ಮಂದಿ ವಿದ್ಯಾರ್ಥಿಗಳಿಂದ ಆರಂಭಿಸಿದ ತಂಡದಲ್ಲಿ ಇಂದು 85 ಮಂದಿ ಇದ್ದಾರೆ, ನಮ್ಮ ಗ್ರಾಮದ ಮಕ್ಕಳನ್ನು ಹಲವು ಮಂದಿ ಗುರುತಿಸಿ ಅಭಿನಂದಿಸಿದ್ದಾರೆ ಎಂದು ಹೇಳಿದ್ದಾರೆ.

ನಾನು ಖೋ ಖೋ ಆಟಗಾರನಾಗಬೇಕೆಂಬ ಕನಸು ಕಂಡಿದ್ದೆ, ಆದರೆ ಅದು ಈಡೇರಲಿಲ್ಲ, ನನ್ನ ವಿದ್ಯಾರ್ಥಿಗಳ ಮೂಲಕ ನನ್ನ ಕನಸು ನನಸಾಗುತ್ತಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಖೋ ಖೋ ಪ್ರೀಮಿಯರ್ ಲೀಗ್ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com