ಬಾಲಾ ದೇವಿ ಹಾದಿ ಎಲ್ಲಾ ಭಾರತೀಯ ಫುಟ್ ಬಾಲ್ ಆಟಗಾರರಿಗೆ ಸ್ಫೂರ್ತಿ: ಗುರ್ಪ್ರೀತ್ ಸಿಂಗ್ ಸಂಧು

ಬಾಲಾ ದೇವಿ ಅವರ ಪಯಣದ ಹಾದಿ ಕೇವಲ ಮಹಿಳಾ ಫುಟ್ ಬಾಲ್ ಆಟಗಾರರಿಗೆ ಮಾತ್ರವಲ್ಲದೇ ದೇಶದ ಪುರುಷ ಆಟಗಾರರಿಗೂ ಸ್ಫೂರ್ತಿಯಾಗಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಗುರ್ಪ್ರೀತ್ ಸಿಂಗ್ ಸಂಧು ಅಭಿಪ್ರಾಯ ಪಟ್ಟಿದ್ದಾರೆ. 
ಬಾಲಾ ದೇವಿ
ಬಾಲಾ ದೇವಿ

ನವದೆಹಲಿ: ಬಾಲಾ ದೇವಿ ಅವರ ಪಯಣದ ಹಾದಿ ಕೇವಲ ಮಹಿಳಾ ಫುಟ್ ಬಾಲ್ ಆಟಗಾರರಿಗೆ ಮಾತ್ರವಲ್ಲದೇ ದೇಶದ ಪುರುಷ ಆಟಗಾರರಿಗೂ ಸ್ಫೂರ್ತಿಯಾಗಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಗುರ್ಪ್ರೀತ್ ಸಿಂಗ್ ಸಂಧು ಅಭಿಪ್ರಾಯಪಟ್ಟಿದ್ದಾರೆ. 

ಬಾಲಾದೇವಿ ಅವರು ರೇಂಜರ್ಸ್ ವುಮೆನ್ ಫುಟ್ ಬಾಲ್ ಕ್ಲಬ್ ನಲ್ಲಿ ತಮ್ಮ ಆಟ ಆರಂಭಿಸಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಸರಿಯಾದ ಉದಾಹರಣೆಯಾಗಿದೆ, ಆಕೆಯ ಪಯಣದ ಹಾದಿ ಕೇವಲ ಹೆಮ್ಮೆಯ ಕ್ಷಣ ಮಾತ್ರವಲ್ಲದೇ ಮಹಿಳಾ ಆಟಗಾರರ ಜೊತೆಗೆ ಪುರುಷ ಕ್ರೀಡಾ ಪಟುಗಳು ಆಕೆಯಿಂದ ಸ್ಪೂರ್ತಿ ಪಡೆದು ತಮ್ಮ ಟಾರ್ಗೆಟ್ ತಲುಪಲು ಸಾಧನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿರುವ ಸ್ಕಾಟಿಷ್‌ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಸೋಮವಾರ ಅವರು ರೇಂಜರ್ಸ್‌ ಎಫ್‌ಸಿ ಆಟಗಾರ್ತಿಯಾಗಿ ಕಣಕ್ಕಿಳಿದರು.

ಕೊರೋನಾ ಸೋಂಕು ಆರಂಭವಾಗುತ್ತಿದ್ದ ವೇಳೆಯೇ ಬಾಲಾ ರೇಂಜರ್ಸ್ ವುಮೆನ್ ಎಫ್ ಸಿ ಗೆ ಸೇರಿದರು. ಈ ಮೊದಲು ಬಾಲಾ ದೇವಿ ಫ್ರೆಂಡ್ಲಿ ಗೇಮ್ ನಲ್ಲಿ ಭಾಗವಹಿಸಿದ್ದರು. ಸ್ಪಾರ್ಟನ್ನರ ವಿರುದ್ಧ ಗೆಲುವು ಸಾಧಿಸುವ ಮೂಲಕ ಲೀಗ್ ಪ್ರಾರಂಭಿಸಿದ್ದಾರೆ.

ರೇಂಜರ್ಸ್ ಪಂದ್ಯವನ್ನು 1-0 ಗೋಲುಗಳಿಂದ ಗೆದ್ದುಕೊಂಡಿತು, ಇದುವರೆಗಿನ ಎರಡರಿಂದ ಗರಿಷ್ಠ ಆರು ಅಂಕಗಳನ್ನು ಗಳಿಸಿದೆ.

ಇದುವರೆಗೆ ಯುರೋಪ್ ಲೀಗ್‌ನಲ್ಲಿ ಆಡಿದ ಏಕೈಕ ಭಾರತೀಯ ಫುಟ್‌ಬಾಲ್ ಆಟಗಾರ ಗುರ್‌ಪ್ರೀತ್, 2014 ರಲ್ಲಿ ನಾರ್ವೇಜಿಯನ್ ಉನ್ನತ ವಿಭಾಗದ ಕ್ಲಬ್‌ನ ಸ್ಟೇಬೆಕ್‌ಗೆ ಸೇರಿಕೊಂಡರು ಮತ್ತು ಎರಡು ವರ್ಷಗಳ ನಂತರ, ಅವರು ಜೂನ್ 30, 2016 ರಂದು ಯುರೋಪ್ ಲೀಗ್ ಅರ್ಹತಾ ಪಂದ್ಯದಲ್ಲಿ ಕಾಣಿಸಿಕೊಂಡರು.

ಬಾಲಾದೇವಿ ಅವರ ಈ ಗೆಲುವಿನ ಹಾದಿ ಮಹಿಳಾ ಫುಟ್ ಬಾಲ್ ಆಟಗಾರ್ತಿಯರಲ್ಲಿ ಜಾಗೃತಿ ಮೂಡಿಸಿ ದೇಶದ ಇನ್ನೂ ಹೆಚ್ಚಿನ ಯುವತಿಯರಿಗೆ ಸ್ಫೂರ್ತಿ ನೀಡಿ ಆ ಮೂಲಕ ಈ ಸುಂದರವಾದ ಆಟವಾಡುವ ಮೂಲಕ ಸಾಧನೆ ಮಾಡಲು ನೆರವಾಗುತ್ತದೆ ಎಂದು ಗುರ್ಪ್ರೀತ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ಫುಟ್‌ಬಾಲ್‌ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ರೀತಿಯ ಒಂದು ಕ್ಷಣ ಮಹಿಳಾ ಫುಟ್‌ಬಾಲ್‌ನ ಸುತ್ತ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com