ಬೆಟ್ಟದಿಂದ ಕೆಳಗೆ ಹರಿಯುವ ನೀರಿನಿಂದ ಯುವಕನ ಆವಿಷ್ಕಾರ: ಜುಗಾಡ್ ಗ್ರಾಮಸ್ಥರಿಗೆ ಉಚಿತ ವಿದ್ಯುತ್!

ಕಮಿಲ್ ಟೊಪ್ಲೊ ಎಂಜಿನಿಯರ್ ಅಲ್ಲ, ಆದರೂ ಲೊಹರ್ದಗದ ಖರಿಯಾ ತಕುರೈನ್ ಡೆರಾ ಗ್ರಾಮದ ಗ್ರಾಮಸ್ಥರು 100 ಅಡಿ ಎತ್ತರದ ಪರ್ವತ ಪ್ರದೇಶದಿಂದ ಕೆಳಗೆ ಬೀಳುವ ನದಿ ನೀರನ್ನು ಬಳಸಿ ವಿದ್ಯುತ್ ತಯಾರಿಸಿ ಗ್ರಾಮದ ಕನಿಷ್ಠ 20 ಮನೆಗಳು ಬೆಳಕುವಂತೆ ಮಾಡಿದ್ದಾರೆ.ದಿನಪೂರ್ತಿ ಗ್ರಾಮಸ್ಥರಿಗೆ ಉಚಿತ ವಿದ್ಯುತ್ ಸಿಗುತ್ತಿದೆ. 
ಕಮಿಲ್ ಟೊಪ್ನೊನ ಯೋಜನೆ
ಕಮಿಲ್ ಟೊಪ್ನೊನ ಯೋಜನೆ

ರಾಂಚಿ: ಕಮಿಲ್ ಟೊಪ್ಲೊ ಎಂಜಿನಿಯರ್ ಅಲ್ಲ, ಆದರೂ ಲೊಹರ್ದಗದ ಖರಿಯಾ ತಕುರೈನ್ ಡೆರಾ ಗ್ರಾಮದ ಗ್ರಾಮಸ್ಥರು 100 ಅಡಿ ಎತ್ತರದ ಪರ್ವತ ಪ್ರದೇಶದಿಂದ ಕೆಳಗೆ ಬೀಳುವ ನದಿ ನೀರನ್ನು ಬಳಸಿ ವಿದ್ಯುತ್ ತಯಾರಿಸಿ ಗ್ರಾಮದ ಕನಿಷ್ಠ 20 ಮನೆಗಳು ಬೆಳಕುವಂತೆ ಮಾಡಿದ್ದಾರೆ.ದಿನಪೂರ್ತಿ ಗ್ರಾಮಸ್ಥರಿಗೆ ಉಚಿತ ವಿದ್ಯುತ್ ಸಿಗುತ್ತಿದೆ. 

ನನಗೆ ಶಿಕ್ಷಕರು ಶಾಲೆಯಲ್ಲಿ ಕಲಿಸಿಕೊಟ್ಟರು ಎನ್ನುತ್ತಾರೆ ಟೊಪ್ನೊ. ಧನ್ ಬಾದ್ ನಲ್ಲಿ ಭಾರತ್ ಕುಕ್ಕಿಂಗ್ ಕೋಲ್ ಲಿಮಿಟೆಡ್(ಬಿಸಿಸಿಎಲ್) ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಟೊಪ್ನೊ, ಜುಗಾಡ್ ನಿಯಮದ ಪ್ರಕಾರ ಮೇಲಿನಿಂದ ಹರಿದುಬರುವ ನೀರಿನಿಂದ ವಿದ್ಯುತ್ ತಯಾರಿಸಿದ್ದಾರೆ. 

ಅದಕ್ಕಾಗಿ ಟೊಪ್ನೊ ಮೊದಲಿಗೆ ರಿಕ್ಷಾ ಚಕ್ರಗಳನ್ನು ಉಪಯೋಗಿಸಿದರು, ನಂತರ ಪೆಲ್ಟಾನ್ ಚಕ್ರವನ್ನು ಬಳಸಿ ಮೇಲಿನಿಂದ ಧುಮ್ಮಿಕ್ಕಿಬರುವ ನೀರಿನಿಂದ ವಿದ್ಯುತ್ ತಯಾರಿಸಿದ್ದಾರೆ.

ಈ ಗ್ರಾಮಕ್ಕೆ ಈ ಮೂಲಕ ವಿದ್ಯುತ್ ಬಂದದ್ದು 2018ರಲ್ಲಿ. ಅದಕ್ಕೂ ಮೊದಲು ಟೊಪ್ನೊ 2013-14ರಲ್ಲಿ ಪ್ರಾಜೆಕ್ಟ್ ನ್ನು ಆರಂಭಿಸಿ ಒಂದು ವರ್ಷವಾದ ಮೇಲೆ ಯಶಸ್ಸು ಕಂಡರು. ಆರಂಭದಲ್ಲಿ ಡೈನಮೊಗೆ ಜೋಡಿಸಿದ ರಿಕ್ಷಾಚಕ್ರವನ್ನು ವಿದ್ಯುತ್ ಉತ್ಪಾದಿಸಲು ಬಳಸುತ್ತಿದ್ದೆ, ಅದು ಅಷ್ಟು ಚೆನ್ನಾಗಿ ಕೆಲಸ ಮಾಡಲಿಲ್ಲ, ನೀರು ಪ್ರವಹಿಸುವ ರೀತಿ ನಿಧಾನವಾಯಿತು, ನಂತರ ನನಗೆ ಸ್ಮಾರ್ಟ್ ಫೋನ್ ಸಿಕ್ಕಿದಾಗ ಪೆಲ್ಟನ್ ಚಕ್ರ ತೆಗೆದುಕೊಂಡು ಬಂದು ಡೈನಮೊ ಜೊತೆ ಸೇರಿಸಿದೆವು. ಇದೀಗ ಇಡೀ ಗ್ರಾಮಕ್ಕೆ ವಿದ್ಯುತ್ ಮೂಲವಾಗಿದೆ ಎಂದು ವಿವರಿಸುತ್ತಾರೆ ಟೊಪ್ನೊ.

ನಾನು ನಿರುದ್ಯೋಗಿಯಾಗಿದ್ದಾಗ ಈ ಆಲೋಚನೆ ಹೊಳೆಯಿತು. ಜನರಲ್ಲಿ ಹಂಚಿಕೊಂಡರೆ ನನ್ನನ್ನು ನೋಡಿ ನಗುತ್ತಾರೆ. ಹಾಗಾಗಿ  ಮೌನವಾಗಿ ಕೆಲಸ ಪ್ರಾರಂಭಿಸಿದೆ, ಮುಂದೆ ಯಶಸ್ವಿಯಾದಾಗ, ಪುಟ್ಟ ಆವಿಷ್ಕಾರವನ್ನು ಹಳ್ಳಿಗರೊಂದಿಗೆ ಬಹಳ ಸಂತೋಷದಿಂದ ಹಂಚಿಕೊಂಡಿದ್ದೇನೆ ಎಂದು ಟೊಪ್ನೊ ಹೇಳಿದರು.

100 ಅಡಿ ಎತ್ತರದಿಂದ ಪರ್ವತ ಪ್ರದೇಶದ ಕಲ್ಲಿನೆಡೆಯಿಂದ ಕೆಳಗೆ ಧುಮುಕುವ ನೀರನ್ನು ಹಳ್ಳಿಗರು ವ್ಯವಸಾಯಕ್ಕೆ ಬಳಸುತ್ತಾರೆ. ಈ ಪ್ರಾಜೆಕ್ಟ್ ಗೆ ಟೊಪ್ನೊ 20 ಸಾವಿರಕ್ಕಿಂತ ಹೆಚ್ಚು ಹಣವನ್ನು ಉಪಯೋಗಿಸಿದ್ದು ತಮ್ಮ ಸ್ವಂತ ದುಡ್ಡನ್ನು ಹಾಕಿದ್ದಾರೆ. ಆರಂಭದಲ್ಲಿ ಎರಡು ಬಾರಿ ಸೋತು 10 ಸಾವಿರ ರೂಪಾಯಿ ಕಳೆದುಕೊಂಡೆ. ಆದರೆ ವಿಶ್ವಾಸ, ಶ್ರಮ ಬಿಡಲಿಲ್ಲ. ಕೊನೆಗೆ 2015ರಲ್ಲಿ ಯಶಸ್ವಿಯಾಯಿತು ಎನ್ನುತ್ತಾರೆ.

ಟೊಪ್ನೊ ಗ್ರಾಮಕ್ಕೆ ಉತ್ತಮ ಕೆಲಸ ಮಾಡಿಕೊಟ್ಟಿದ್ದಾರೆ ಎನ್ನುತ್ತಾರೆ ಡಿಯೊದರಿಯಾ ಪಂಚಾಯತ್ ನ ಮುಖಿಯಾ ಸುಮಿತ್ರ ಲಕ್ರ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಟೊಪ್ನೊನನ್ನು ಶ್ಲಾಘಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com