ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಗಿರೀಶ್ ಭಾರದ್ವಾಜ್: 130 ತೂಗುಸೇತುವೆಗಳ ಸರದಾರನಾಗಿದ್ದು ಹೇಗೆ?

70 ವರ್ಷದ ಗಿರೀಶ್ ಭಾರದ್ವಾಜ್  ಬ್ರಿಡ್ಜ್ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದಾರೆ. ದೋಣಿಯ ತಳ ತೂತಾಗಿದ್ದ ಕಾರಣದಿಂದಾಗಿ ಅವರು ಸೇತುವೆ ನಿರ್ಮಿಸುವ ಕೆಲಸದಲ್ಲಿ ತೊಡಗಿಕೊಂಡರು.
ಗಿರೀಶ್ ನಿರ್ಮಿಸಿರುವ  ಸೇತುವೆ
ಗಿರೀಶ್ ನಿರ್ಮಿಸಿರುವ ಸೇತುವೆ

ಮಂಗಳೂರು: ಅವರು ಮೂಲತಃ ಮೆಕ್ಯಾನಿಕಲ್ ಇಂಜಿನೀಯರ್, ಅವರ ಜೀವನದಲ್ಲಿ ನಡೆದ ಒಂದು ಆಕಸ್ಮಿಕ ಘಟನೆಯಿಂದಾಗಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು, ಇತ್ತೀಚೆಗೆ ತೆಲಂಗಾಣದಲ್ಲಿ ಒಂದು ಸೇತುವೆ ನಿರ್ಮಾಣ ಮಾಡಿದ್ದು, ಇದುವರೆಗೂ ಸುಮಾರು 130 ಸೇತುವೆ ನಿರ್ಮಿಸಿದ್ದಾರೆ.

70 ವರ್ಷದ ಗಿರೀಶ್ ಭಾರದ್ವಾಜ್  ಬ್ರಿಡ್ಜ್ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದಾರೆ. ದೋಣಿಯ ತಳ ತೂತಾಗಿದ್ದ ಕಾರಣದಿಂದಾಗಿ ಅವರು ಸೇತುವೆ ನಿರ್ಮಿಸುವ ಕೆಲಸದಲ್ಲಿ ತೊಡಗಿಕೊಂಡರು.

ದಶಕಗಳವರೆಗೆ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ದೂರದ ಹಳ್ಳಿಯಾದ ಅರಂಬೂರಿನ ಬಡ ಜನರು ತಮ್ಮ ಎಲ್ಲಾ ಕೆಲಸಗಳಿಗಾಗಿ ಬೇರೆ ಪ್ರದೇಶಗಳಿಗೆ ತಲುಪಲು ಪಯಸ್ವಿನಿ ನದಿಯನ್ನು ದಾಟಲು ನಾಡ ದೋಣಿಯನ್ನು ಅವಲಂಬಿಸಿದ್ದರು.

ಆದರೆ ಈ ದೋಣಿ ಒಮ್ಮೆ ತೂತು ಬಿದ್ದರೆ ಮತ್ತೊಂದು ದೋಣಿ ಸಿದ್ಧವಾಗುವವರೆಗೂ ಜನರು ತಮ್ಮ ಎಲ್ಲಾ ಕೆಲಸಗಳನ್ನು ಮಾಡದೇ ನಿಲ್ಲಿಸುತ್ತಿದ್ದರು. 1989 ರಲ್ಲಿ ಈ ಗ್ರಾಮಸ್ಥರು ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದರು. ಯುವ ಎಂಜಿನೀಯರಿಂಗ್ ಪದವೀಧರ ಗಿರೀಶ್ ಭಾರದ್ವಾಜ್ ಅವರನ್ನು ಸಂಪರ್ಕಿಸಿದರು. ಆ ವೇಳೆ ಗಿರೀಶ್ ಫ್ಯಾಭ್ರಿಕೇಷನ್ ಘಟಕ ನಡೆಸುತ್ತಿದ್ದರು, ತಮ್ಮ ಸಮಸ್ಯೆಗೆ ಪರಿಹಾರ ನೀಡುವಂತೆ ಫುಟ್ ಬ್ರಿಡ್ಜ್ ನಿರ್ಮಿಸುವಂತೆ ಮನವಿ ಮಾಡಿದರು.

ಎಲ್ಲಾ ಎಂಜಿನೀಯರ್ ಗಳು  ಸೇತವೆ ನಿರ್ಮಿಸಬಹುದು ಎಂದು ನಂಬಿದ್ದ ಗ್ರಾಮಸ್ಥರ ಮುಗ್ಧತೆ ಕಂಡು ಗಿರೀಸ್ ನಕ್ಕರು, ಮೆಕ್ಯಾನಿಕಲ್ ಎಂಜಿನೀಯರ್ ಸೇತುವೆ ನಿರ್ಮಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಸಲು ಪ್ರಯತ್ನ ಪಟ್ಟ ಅವರು, ತಮ್ಮ ಎಂಜಿನೀಯರ್ ಸ್ನೇಹಿತರೊಂದಿಗೆ ಸೇರಿ ಹಾಗೂ ಪುಸ್ತಕಗಳನ್ನು ಓದಿ ಕಡಿಮೆ ಬೆಲೆಯಲ್ಲಿ ತೂಗು ಸೇತುವೆ ನಿರ್ಮಿಸಲು ನಿರ್ಧರಿಸಿದರು, ಇದಕ್ಕೆ ಹೆಚ್ಚಿನ ಜನರನ್ನು ಸೇರಿಸಿ ಮಾಡಬಹುದಾದ ಯೋಜನೆಯಾಗಿದ್ದು, ಕೆಲ ಗ್ರಾಮಸ್ಥರು ಶ್ರಮದಾನಕ್ಕೆ ಮುಂದಾದರು.

ಕಾರ್ಮಿಕ ವೆಚ್ಚ ಹೊರತು ಪಡಿಸಿ ಸೇತುವೆ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗೆ ಸುಮಾರು 2 ಲಕ್ಷ ರು ವೆಚ್ಚ ತಗುಲಿತು. ಸೇತುವೆ ಹೊಸ ಜೀವನಕ್ಕೆ ಕಾಲಿಟ್ಟಿದ್ದರಿಂದ ಗ್ರಾಮಸ್ಥರು ಅಪಾರ ಸಂತೋಷಪಟ್ಟರು. 

ಕೆಲ ತಿಂಗಳುಗಳ ನಂತರ, ಆರ್ಥಿಕ ಸೇತುವೆಯು ಕೆಲಸದ ಮೇಲೆ ಬೆಂಗಳೂರಿನಿಂದ ಮಂಗಳೂರಿಗೆ ಬಂದ ಹಿರಿಯ ಸರ್ಕಾರಿ ಅಧಿಕಾರಿಯ ಗಮನ ಸೆಳೆಯಿತು ಮತ್ತು ಅವರು ಗಿರೀಶ್ ರನ್ನು ಕರೆದರು.

ಸೇತುವೆ ವಿನ್ಯಾಸದ ನೋಡಿದ ನಂತರ, ಮಲೆನಾಡು ಮತ್ತು ಕರಾವಳಿ ಪ್ರದೇಶದ ಹಲವಾರು ಪ್ರತ್ಯೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ   ಭಾರದ್ವಾಜ್ ಅವರನ್ನು ಅಧಿಕಾರಿ ವಿನಂತಿಸಿದರು.

ಹೀಗೆ ಪ್ರಾರಂಭವಾದ ಪ್ರಯಾಣವು ಕರ್ನಾಟಕದ ವಿವಿಧ ಭಾಗಗಳು ಮತ್ತು ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾಗೆ ಕರೆದೊಯ್ಯಿತು,  30 ವರ್ಷಗಳಲ್ಲಿ 130 ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಮಿಸಿದರು ಮತ್ತು ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ ಆಗಿ ಜನಪ್ರಿಯರಾದರು. ಗ್ರಾಮೀಣ ಸಬಲೀಕರಣಕ್ಕೆ ಅವರ ಕೊಡುಗೆಯನ್ನು ಸರ್ಕಾರ ಗುರುತಿಸಿ ಅವರಿಗೆ 2017 ರಲ್ಲಿ ಪದ್ಮಶ್ರೀ ನೀಡಲಾಯಿತು.

ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆ ಮತ್ತು ಜಪಾನ್‌ನ ಅಕಾಶಿ ಕೈಕ್ಯೊ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ, ಎರಡೂ ತೂಗು ಸೇತುವೆಗಳು ಮತ್ತು ಆಧುನಿಕ ಎಂಜಿನಿಯರಿಂಗ್‌ನ ಅದ್ಭುತಗಳನ್ನು ಪರಿಗಣಿಸಲಾಗಿದೆ ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಅದನ್ನು ಸರಳೀಕರಿಸಲಾಗಿದೆ ಎಂದು ಭಾರದ್ವಾಜ್ ಹೇಳಿದ್ದಾರೆ. 

ಸಾಂಪ್ರಾದಾಯಿಕವಾದ ಸೇತುವೆಗಳಿಗೆ ಹೋಲಿಸಿದರೇ ಇವರ ಸೇತುವೆಗಳ ವೆಚ್ಚ ಕಡಿಮೆಯಾಗಿದೆ.ಅವುಗಳನ್ನು 10-20 ವರ್ಷಗಳ ಕಾಲ ತಾತ್ಕಾಲಿಕ ಪರಿಹಾರದ ನಿರ್ಮಿಸಿದ್ದರೂ ಅವುಗಳಲ್ಲಿ ಹಲವು ಇನ್ನೂ ಉತ್ತಮ ಸ್ಥಿತಿಯಲ್ಲಿವೆ ಎಂದು ತಿಳಿಸಿದ್ದಾರೆ.

ತಮ್ಮ ಕೆಲಸದಿಂದ, ಭರದ್ವಾಜ್ ಹಲವಾರು ಗ್ರಾಮಸ್ಥರ ಹೃದಯದಲ್ಲಿ ಸೇತುವೆಗಳನ್ನು ನಿರ್ಮಿಸಿದ್ದಾರೆ, ಏಕೆಂದರೆ ಅವರನ್ನು ಅವರ ಮೆಸ್ಸೀಯ ಎಂದು ಪರಿಗಣಿಸಿ ಅವರ ದುಃಖದಿಂದ ಅವರನ್ನು ಮೇಲೆತ್ತಿದ್ದರು.

ಹೆಚ್ಚಿನ ಕೆಲಸದ ತಾಣಗಳಲ್ಲಿ, ಅವರು ಮತ್ತು ಅವರ 30-40 ಕಾರ್ಮಿಕರ ತಂಡವು 3-6 ತಿಂಗಳುಗಳ ಕಾಲ  ಕೆಲಸ ಮಾಡಿದೆ. ಬಹುಪಾಲು ಸೇತುವೆಗಳು ಸರ್ಕಾರಿ ಪ್ರಾಯೋಜಿತವಾಗಿದ್ದರೆ, ಕೆಲವು ಗ್ರಾಮಸ್ಥರಿಂದ ಸಂಗ್ರಹಿಸಲ್ಪಟ್ಟ ಹಣದಿಂದ ನಿರ್ಮಿಸಲ್ಪಟ್ಟಿವೆ. ಅಂತಹ ಯೋಜನೆಗಳಿಗೆ ಅವರು ಉಚಿತವಾಗಿ ಕೆಲಸ ಮಾಡಿದ್ದಾರೆ. ಇನ್ನೂ ಕೆಲವು ಸೇತುವೆ ನಿರ್ಮಾಣ ಕೆಲಸಗಳು ಹಣದ ಕೊರತೆಯಿಂದ ಕೆಲಸ ಅರ್ಧಕ್ಕೆ ನಿಂತ ವೇಳೆ ಭಾರದ್ವಾಜ್ ಅವರೇ ತಮ್ಮ ಸ್ವಂತ ಹಣದಲ್ಲಿ ಸೇತುವೆ ಪೂರ್ಣಗೊಳಿಸಿದ್ದಾರೆ.

ಸ್ವಚ್ಛ ಭಾರತ್‌ಗೆ ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಪತ್ರವೊಂದನ್ನು ಬರೆದಾಗ ಭಾರದ್ವಾಜ್ ಅವರು ಖುಷಿಪಟ್ಟರು, ಇದರಲ್ಲಿ ಅವರು ಬಡ ಗ್ರಾಮಸ್ಥರನ್ನು ಸಬಲೀಕರಣಗೊಳಿಸುವ ಅವರ ‘ಸೇತು ಬಂಧು’ ಕಾರ್ಯವನ್ನು ಗುರುತಿಸಿದರು ಜಗತ್ತಿಗೆ ತಿಳಿಸಿದ್ದಾರೆ.

ನಾಲ್ಕು ಚಕ್ರಗಳ ವಾಹನಗಳಿಗೆ ಜನರು ದೊಡ್ಡ ಆರ್‌ಸಿಸಿ ರಚನೆಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಫುಟ್‌ಬ್ರಿಡ್ಜ್‌ಗಳ ಬೇಡಿಕೆ ಈಗ ಬಹುತೇಕ ಇಲ್ಲ ಎಂದು ಭಾರದ್ವಾಜ್ ಹೇಳುತ್ತಾರೆ. ಸದ್ಯ ಗಿರೀಶ್ ಅವರ ಪುತ್ರ ಪತಂಜಲಿ ಭಾರದ್ವಾಜ್ ಎಂಟೆಕ್ ಪದವೀಧರರಾಗಿದ್ದು ಅವರ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

1970 ರ ದಶಕದ ಮಧ್ಯಭಾಗದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನಿಂದ ಎಂಜಿನಿಯರಿಂಗ್ ಮುಗಿಸಿದ ನಂತರ, ಭಾರದ್ವಾಜ್ ಕೆಲವು ಕಾರ್ಖಾನೆಯ ಎಂಡಿ ಆಗಬೇಕೆಂಬ ಕನಸು ಕಂಡಿದ್ದರು, ಆದರೆ ರೈತರಾಗಿದ್ದ ಅವರ ತಂದೆ, ಬೇರೋಬ್ಬರ ಕೈಕೆಳಗೆ ಕೆಲಸ ಮಾಡುವ ಬದಲಾಗಿ ಹಲವು ಜನರಿಗೆ ಉದ್ಯೋಗ ಕೊಡುವಂತ ನೌಕರಿ ಸೇರಬೇಕೆಂದು ಬಯಸಿದರು. ಹೀಗಾಗಿ ಸುಳ್ಯದಲ್ಲಿ ಅವರು ಫ್ಯಾಬ್ರಿಕೇಷನ್ ಕೆಲಸ ಆರಂಭಿಸಿದ್ದರು.

ಕರ್ನಾಟಕದಲ್ಲಿ 95 ಸೇತುವೆ ನಿರ್ಮಿಸಿರುವ ಭಾರದ್ವಾಜ್, ಕೇರಳದಲ್ಲಿ 32, ತೆಲಂಗಾಣದಲ್ಲಿ 5, ಒಡಿಸ್ಸಾದಲ್ಲಿ 3 ಈಗ ಮತ್ತೆ ತೆಲಂಗಾಣದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಹಂತದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com