ಬೆಂಗಳೂರು ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆ ಪತ್ತೆ!

ಬೆಂಗಳೂರಿನ ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆಯನ್ನು ಪ್ರಾಣಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಸ್ಪೆರೋಥೆಕಾ ಎಂದು ನಾಮಕರಣ ಮಾಡಿದ್ದಾರೆ. 

Published: 28th November 2020 07:25 AM  |   Last Updated: 28th November 2020 12:37 PM   |  A+A-


The new species of burrowing frog discovered near Bengaluru

ಹೊಸ ಪ್ರಭೇದದ ಬಿಲಗಪ್ಪೆ

Posted By : Manjula VN
Source : The New Indian Express

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆಯನ್ನು ಪ್ರಾಣಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಸ್ಪೆರೋಥೆಕಾ ಎಂದು ನಾಮಕರಣ ಮಾಡಿದ್ದಾರೆ. 

ಹೊಸ ಪ್ರಭೇದವನ್ನು ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ದೀಪಕ್ ಮತ್ತು ತಂಡ ಪತ್ತೆ ಮಾಡಿದೆ. ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಉಭಯಚರಿಗಳನ್ನು ಪತ್ತೆ ಮಾಡಲಾಗುತ್ತದೆ. ಆದರೆ, ಬೆಂಗಳೂರಿನ ಹೊರವಲಯದಲ್ಲಿ ಉಭಯಚರಿಗಳನ್ನು ದಾಖಲಿಸುವ ಪ್ರಯತ್ನದಲ್ಲಿ ಹೊಸ ಜಾತಿಯ ಬಿಲಗಪ್ಪೆ ಪತ್ತೆಯಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನ ಗೌರವಾರ್ಥವಾಗಿ ಈ ಹೌಸ ಪ್ರಭೇದಕ್ಕೆ ಸ್ಪೆರೋಥೆಕಾ ಬೆಂಗಳೂರುಎಂದು ನಾಮಕರಣ ಮಾಡಲಾಗಿದೆ. 

ಈ ಹೊಸ ಪ್ರಭೇದವನ್ನು ದಕ್ಷಿಣ ಏಷ್ಯಾದಾದ್ಯಂತ ಕಂಡು ಬರುವ ಸ್ಪೆರೋಥಿಕಾ ಪ್ರಭೇದದ ಕಪ್ಪೆಗಳೊಂದಿಗೆ ಬಾಹ್ಯವಿಜ್ಞಾನ ಮತ್ತು ಅನುವಂಶಿಕ ವ್ಯತ್ಯಾಸಗಳ ಆಧಾರದ ಮೇಲೆ ವಿವರಿಸಲಾಗಿದೆ. ಪತ್ತೆಯಾಗಿರುವ ಬಿಲಗಪ್ಪೆಯ ಬಗ್ಗೆ ಅಂತರಾಷ್ಟ್ರೀಯ ಜರ್ನಲ್ ಆದ ನ್ಯೂಜಿಲ್ಯಾಂಡಿನ ಝೋಟಾಕ್ಸಾ ದಲ್ಲಿ ಪ್ರಕಟಿಸಲಾಗಿದೆ. 

ಬೆಂಗಳೂರು ನಗರೀಕರಣದ ಹೆಚ್ಚಳದಿಂದ ಇಲ್ಲಿನ ಜಲಮೂಲ ಮಲಿನಗೊಂಡಿರುವ ಪರಿಣಾಮ ಕಪ್ಪೆಗಳು ನಗರ ಪ್ರದೇಶಗಳಲ್ಲಿ ವಿನಾಶದ ಹಾದಿ ಹಿಡಿದಿವೆ. ಸ್ಪೆರೋಥೆಕಾ ಬೆಂಗಳೂರು ಕಪ್ಪೆಯ ವಾಸದ ವಿಸ್ತರಣಾ ವ್ಯಾಪ್ತಿ ಮತ್ತು ಸಂತಾನೋತ್ಪತ್ತಿ, ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ಭಾರತೀಯ ಪ್ರಾಣಿ ಸಂಸ್ಥಾನದ ವಿಜ್ಞಾನಿ ಡಾ,ದಿನೇಶ್ ತಿಳಿಸಿದ್ದಾರೆ. 

ಹೊಸ ಪ್ರಭೇದದ ಪತ್ತೆಯನ್ನು ಪಿ.ದೀಪಕ್ ಅವರು, ಫ್ರಾನ್ಸ್'ನ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ವಿಜ್ಞಾನಿ ಡಾ.ಅನ್ನೆಮರಿ ಓಹ್ಲರ್, ಐಐಎಸ್ಸಿ ಪ್ರೊಫೆಸರ್ ಡಾ.ಕಾರ್ತಿಕ್ ಶಂಕರ್, ಭಾರತೀಯ ಪ್ರಾಣಿ ಸಂಸ್ಥಾನದ ವಿಜ್ಞಾನಿಗಳಾದ ಡಾ.ದಿನೇಶ್, ಡಾ.ಬಿ.ಹೆಚ್.ಚನ್ನಕೇಶವಮೂರ್ತಿ, ಮೈಸೂರು ಯುವರಾಜ ಕಾಲೇಜಿನ ಪ್ರೊ.ಜೆ.ಎಸ್.ಆಶಾದೇವಿಯವರೊಂದಿಗೆ ಮಾಡಿದ್ದಾರೆ. 

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp