ವಿಶ್ವ ಅಂಚೆ ದಿನ: ದೂರದ ಜನರೊಂದಿಗೂ ಸಂವಹನದ ಸಾಧ್ಯತೆಯನ್ನು ತೋರಿಸಿಕೊಟ್ಟ ಅಂಚೆಯಣ್ಣನ ನೆನೆಯೋಣ

ಮಾನವ ಸಂವಹನದ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾದ ಅಂಚೆ ಸೇವೆಪ್ರಪಂಚದಾದ್ಯಂತ ಸಂದೇಶಗಳನ್ನು ಕಳುಹಿಸಲು ಸಹಾಯ ಮಾಡಿವೆ, ಅತ್ಯಂತ ದೂರದ ಸ್ಥಳಗಳಲ್ಲಿದ್ದೂ ಮಾನವರು ಪರಸ್ಪರ ಸಂವಹನ ನಡೆಸಲು ಅಂಚೆ ಸೇವೆ ನೆರವಾಗಿದೆ.
ವಿಶ್ವ ಅಂಚೆ ದಿನ: ದೂರದ ಜನರೊಂದಿಗೂ ಸಂವಹನದ ಸಾಧ್ಯತೆಯನ್ನು ತೋರಿಸಿಕೊಟ್ಟ ಅಂಚೆಯಣ್ಣನ ನೆನೆಯೋಣ

ಮಾನವ ಸಂವಹನದ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾದ ಅಂಚೆ ಸೇವೆ ಪ್ರಪಂಚದಾದ್ಯಂತ ಸಂದೇಶಗಳನ್ನು ಕಳುಹಿಸಲು ಸಹಾಯ ಮಾಡಿವೆ, ಅತ್ಯಂತ ದೂರದ ಸ್ಥಳಗಳಲ್ಲಿದ್ದೂ ಮಾನವರು ಪರಸ್ಪರ ಸಂವಹನ ನಡೆಸಲು ಅಂಚೆ ಸೇವೆ ನೆರವಾಗಿದೆ. ಈ ವಿಶೇಷ ಸೇವಾ ವಲಯವನ್ನು ಗುರುತಿಸಿ ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ  ಅಂಚೆ ದಿನವಾಗಿ ಆಚರಿಸಲಾಗುತ್ತದೆ.

ಇದನ್ನು ಏಕೆ ಆಚರಿಸಲಾಗುತ್ತದೆ?

1874 ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪ್ರಾರಂಭವಾದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್  (ಯುಪಿಯು) ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಅಂಚೆ ದಿನವನ್ನು ಆಚರಿಸಲಾಗುತ್ತದೆ.

ಈ ದಿನವನ್ನು ಟೋಕಿಯೊದಲ್ಲಿ 1969 ರ ಯುನಿವರ್ಸಲ್ ಪೋಸ್ಟಲ್ ಕಾಂಗ್ರೆಸ್ ಘೋಷಿಸಿತ್ತು.ಇದು 1874 ರಲ್ಲಿ ಯುಪಿಯು ವಾರ್ಷಿಕ ದಿನವನ್ನು ಸ್ಮರಿಸುತ್ತದೆ.

ಈ ವರ್ಷ ಇದು ಇನ್ನಷ್ಟು ವಿಶೇಷವೇಕೆಂದರೆ  ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಮೊದಲ ಬಾರಿಗೆ ಕೋವಿಡ್ 19 ಬಿಕ್ಕಟ್ಟನ್ನು ಆಧರಿಸಿ ಈ ವಿಶೇಷ ದಿನಾಚರಣೆ ಮಾಡುತ್ತಿದೆ.

ಯುಪಿಯು ಮಹಾನಿರ್ದೇಶಕ ಬಿಷರ್ ಹುಸೇನ್ ಈ ಸಂದರ್ಭದಲ್ಲಿ ತಮ್ಮ ವಿಶೇಷ ಸಂದೇಶದಲ್ಲಿ, "ಜಾಗತಿಕ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಂಚೆ ನಿರ್ವಾಹಕರು ಮತ್ತು ಅವರ ಸಿಬ್ಬಂದಿ ಮಾಡಿದ  ಮಹಾನ್ ತ್ಯಾಗದ ಬಗ್ಗೆ ನಾವೆಲ್ಲರೂ ಧನ್ಯವಾದ ಸೂಚಿಸಬೇಕಾಗಿದೆ," ಎಂದು ಹೇಳಿದರು.

ಅತ್ಯಗತ್ಯವೆಂದು ಪರಿಗಣಿಸಲ್ಪಟ್ಟ ಕೋವಿಡ್ 19 ರ ಅಪಾಯದ ಹೊರತಾಗಿಯೂ ಅಂಚೆ ಸೇವೆಗಳು  ಅಬಾಧಿತವಾಗಿ ಮುಂದುವರಿದಿದೆ,

ವಿಶ್ವ ಅಂಚೆ ದಿನದ ಬಗ್ಗೆ  ಕೆಲವು ಸಂಗತಿಗಳು:

  • ಪ್ರತಿ ವರ್ಷ ವಿಶ್ವ ಅಂಚೆ ದಿನವನ್ನು 9 ನೇ ಅಕ್ಟೋಬರ್ ನಂದು ಆಚರಿಸಲಾಗುತ್ತದೆ
  • ವಿಶ್ವ ಅಂಚೆ ದಿನವನ್ನು 1969ರಿಂಡ ಆಚರಿಸಿಕೊಂಡು ಬರಲಾಗುತ್ತಿದೆ
  • ಯುನಿವರ್ಸಲ್ ಪೋಸ್ಟಲ್ ಯೂನಿಯನ್ 1874ರಲ್ಲಿ  ಸ್ಥಾಪನೆಯಾಯಿತು
  • ಯುಪಿಯುನ ಮುಖ್ಯ ಕಚೇರಿ ಬರ್ನ್ (ಸ್ವಿಟ್ಜರ್ಲೆಂಡ್) ನಲ್ಲಿದೆ.
  • ವಿಶ್ವದ ಅತಿ ಹೆಚ್ಚು ಅಂಚೆ ಕಚೇರಿ ಹಿಕ್ಕಿಮ್ (ಹಿಮಾಚಲ ಪ್ರದೇಶ)ದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com