ಕರೂರು: ಮೂವರು ವಿದ್ಯಾರ್ಥಿಗಳಿಂದ ಅತಿಸಣ್ಣ ಉಪಗ್ರಹ ತಯಾರಿ, ಮುಂದಿನ ವರ್ಷ 'ನಾಸಾ' ಉಡಾವಣೆ

ನಿದ್ದೆ ಮಾಡುವಾಗ ಕಾಣುವುದು ಕನಸಲ್ಲ, ಕನಸೆಂದರೆ ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದು ಎಂಬ ಮಾತು ಈ ಮೂವರು ಯುವಕರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.
ಅತಿಸಣ್ಣ ಉಪಗ್ರಹ ತಯಾರಿಸಿದ ವಿದ್ಯಾರ್ಥಿಗಳು
ಅತಿಸಣ್ಣ ಉಪಗ್ರಹ ತಯಾರಿಸಿದ ವಿದ್ಯಾರ್ಥಿಗಳು

ಕರೂರು: ನಿದ್ದೆ ಮಾಡುವಾಗ ಕಾಣುವುದು ಕನಸಲ್ಲ, ಕನಸೆಂದರೆ ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದು ಎಂಬ ಮಾತು ಈ ಮೂವರು ಯುವಕರಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಕ್ಷಿಪಣಿ ಮನುಷ್ಯ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರಿಂದ ಪ್ರೇರಣೆ ಪಡೆದು ಮೂವರು ವಿದ್ಯಾರ್ಥಿಗಳು ವಿಶ್ವದ ಅತ್ಯಂತ ಸಣ್ಣ ಮತ್ತು ಹಗುರ ತಂತ್ರಜ್ಞಾನ ಸ್ಯಾಟಲೈಟ್ ನ್ನು(ಟಿಡಿಎಸ್) ಅಭಿವೃದ್ಧಿಪಡಿಸಿದ್ದಾರೆ. ಅಮೆರಿಕದ ಅಂತರಿಕ್ಷ ಸಂಸ್ಥೆ ನಾಸಾ ಇವರ ಕನಸುಗಳಿಗೆ ರೆಕ್ಕೆಯನ್ನು ನೀಡಿದ್ದು ಮುಂದಿನ ವರ್ಷ ಈ ಇಂಡಿಯನ್ ಸ್ಯಾಟ್ ಉಪಗ್ರಹವನ್ನು ಉಡಾಯಿಸಲಿದೆ.

ತಮಿಳು ನಾಡಿನ ಕರೂರು ಜಿಲ್ಲೆಯ ಅಂತಿಮ ವರ್ಷದ ಬಿ ಎಸ್ಸಿ ಭೌತಶಾಸ್ತ್ರ ವಿದ್ಯಾರ್ಥಿಗಳಾದ ಎಂ ಅದ್ನಾನ್, ವಿ ಅರುಣ್ ಮತ್ತು ಎಂ ಕೇಶವನ್ ಕೊಯಮತ್ತೂರಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಮಾಡುತ್ತಿದ್ದು ಈ ಸಣ್ಣ ಸ್ಯಾಟಲೈಟ್ ನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅದ್ನಾನ್, ನಾಸಾ ಸಂಸ್ಥೆ ಪ್ರತಿವರ್ಷ ಕ್ಯೂಬ್ಸ್ ಇನ್ ಸ್ಪೇಸ್ (ಸಿಐಎಸ್) ಎಂಬ ಸ್ಪರ್ಧೆಯನ್ನು ಆಯೋಜಿಸುತ್ತದೆ. ಜಗತ್ತಿನ ಎಲ್ಲಾ ದೇಶಗಳಿಂದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ಈ ವರ್ಷ 73ಕ್ಕೂ ಹೆಚ್ಚು ದೇಶಗಳು 25 ಸಾವಿರಕ್ಕೂ ಹೆಚ್ಚು ಪ್ರಾಜೆಕ್ಟ್ ಗಳು ಭಾಗವಹಿಸಿದ್ದವು.

ಇದರಲ್ಲಿ 88 ಪ್ರಾಜೆಕ್ಟ್ ಗಳು ಆಯ್ಕೆಯಾಗಿದ್ದು, ಅದರಲ್ಲಿ ಭಾರತದ ಸ್ಯಾಟ್ ನ್ನು ಮಾತ್ರ ಮುಂದಿನ ವರ್ಷ 2021ರ ಜೂನ್ ತಿಂಗಳಲ್ಲಿ ರಾಕೆಟ್ 7ನಲ್ಲಿ ನಾಸಾ ತನ್ನ ಕಕ್ಷೆಗೆ ಉಡಾಯಿಸುತ್ತದೆ. ಇದೊಂದು ಅತ್ಯಂತ ಸಂತಸದ ಕ್ಷಣ ಎಂದು ಭಾರತದ ಸ್ಯಾಟ್ ನ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ವಿನ್ಯಾಸಕ ಅರುಣ್ ಹೇಳುತ್ತಾರೆ.

ಇವರು ಅಭಿವೃದ್ಧಿಪಡಿಸಿರುವ ಈ ಪುಟ್ಟ ಸ್ಯಾಟಲೈಟ್ 3 ಸೆಂಟಿ ಮೀಟರ್ ಉದ್ದವಿದ್ದು 64 ಗ್ರಾಮ್ ತೂಗುತ್ತದೆ. 13 ಸೆನ್ಸರ್ ಗಳನ್ನು ಅಳವಡಿಸಲಾಗಿದೆ.20 ಪ್ಯಾರಾಮೀಟರ್ ಗಳಿಗಿಂತ ಹೆಚ್ಚು ಲೆಕ್ಕ ಮಾಡಬಹುದು. ಸ್ಯಾಟಲೈಟ್ ತನ್ನದೇ ಆದ ಆರ್ ಎಫ್ ಕಮ್ಯುನಿಕೇಷನ್ ನ್ನು ಟ್ರಾನ್ಸಿಟ್ ಗೆ ಹೊಂದಿದ್ದು ಹೊರಗಿನಿಂದ ಸಿಗ್ನಲ್ ಪಡೆಯುತ್ತದೆ. ಸೋಲಾರ್ ನಿಂದ ವಿದ್ಯುತ್ ಪಡೆಯುತ್ತದೆ ಎಂದು ಇಂಡಿಯನ್ ಸ್ಯಾಟ್ ನ ಟೆಸ್ಟಿಂಗ್ ಎಂಜಿನಿಯರ್ ಕೇಶವನ್ ಹೇಳುತ್ತಾರೆ. ಶಾಲೆಯಲ್ಲಿ ಒಟ್ಟಿಗೆ ಓದುತ್ತಿರುವಾಗಲೇ ಈ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಅದ್ನಾನ್ ಮತ್ತು ಅರುಣ್ ಆರಂಭಿಸಿದ್ದರಂತೆ.

ಸ್ಪೇಸ್ ಕಿಡ್ಜ್ ಇಂಡಿಯನ್ ಆರ್ಗನೈಸೇಷನ್ ನಿಂದ ಇವರಿಗೆ ಮಾರ್ಗದರ್ಶನ ಸಿಕ್ಕಿದೆ. ಕರೂರ್ ಸರ್ಕಾರಿ ಕಲಾ ಕಾಲೇಜು ಮುಖ್ಯ ಪ್ರಾಯೋಜಕರಾಗಿದ್ದು ಶಿವ ಎಜುಕೇಶನ್ ಟ್ರಸ್ಟ್ ಸಹ ಪ್ರಾಯೋಜಕರು. ಅರವಕುರುಚಿ ಶಾಸಕ 1 ಲಕ್ಷ ರೂ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ 2 ಲಕ್ಷ ರೂಪಾಯಿ ಹಣ ಸಹಾಯ ನೀಡಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com