ಅಂಧತ್ವ ಮೆಟ್ಟಿ ನಿಂತು ಉನ್ನತ ಶಿಕ್ಷಣ ಪೂರೈಸಿದ ಯುವತಿ: 2 ಚಿನ್ನದ ಪದಕ ಗಳಿಸಿದ ಸಾಧಕಿ

 2 ವರ್ಷ ವಯಸ್ಸಿನಲ್ಲಿದ್ದಾಗಲೇ ರೆಟಿನೋಬ್ಲಾಸ್ಟೋಮಾ ಎಂಬ ಸಮಸ್ಯೆಯಿಂದಾಗಿ ದೃಷ್ಟಿ ಕಳೆದುಕೊಂಡ ಕಾವ್ಯ ಎಸ್ ಭಟ್ ಉನ್ನತ ಶಿಕ್ಷಣ ಪಡೆದು ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಕಾವ್ಯಾ ಎಸ್ ಭಟ್
ಕಾವ್ಯಾ ಎಸ್ ಭಟ್

ಮೈಸೂರು:  2 ವರ್ಷ ವಯಸ್ಸಿನಲ್ಲಿದ್ದಾಗಲೇ ರೆಟಿನೋಬ್ಲಾಸ್ಟೋಮಾ ಎಂಬ ಸಮಸ್ಯೆಯಿಂದಾಗಿ ದೃಷ್ಟಿ ಕಳೆದುಕೊಂಡ ಕಾವ್ಯ ಎಸ್ ಭಟ್ ಉನ್ನತ ಶಿಕ್ಷಣ ಪಡೆದು ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ.

ಸೋಮವಾರ ಮೈಸೂರಿನಲ್ಲಿ ನಡೆದ ಶತಮಾನೋತ್ಸವ ಸಮಾವೇಶದಲ್ಲಿ ಭಾಗವಹಿಸಿದ್ದರು. ವೇದಿಕೆ ಮೇಲೆ ತೆರಳಿದ ಕಾವ್ಯ ಎರಡು ಚಿನ್ನದ ಪದಕ ನಗದು ಪುರಸ್ಕಾರ ಪಡೆದಿದ್ದಾರೆ, ರಾಜ್ಯಶಾಸ್ತ್ರದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ್ದಾರೆ.

ಇತರ ವಿಕಲಾಂಗ ಮಕ್ಕಳಂತೆಯೇ ಸಣ್ಣ ವಯಸ್ಸಿನಿಂದಲೂ ಅಂಧ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ಪದವಿ ಪಡೆದುಕೊಂಡರು, ತಮ್ಮ ತಾಯಿ ರವಿಕಲಾ ಭಟ್ ಮತ್ತು ತಂದೆ ಶ್ರೀನಿವಾಸ್ ಭಟ್ ತನ್ನ ಸಾಧನೆಗೆ ಸಹಾಯ ಮಾಡಿದ್ದನ್ನು ಕಾವ್ಯ ಸ್ಮರಿಸಿದ್ದಾರೆ.

ಮೈಸೂರು ವಿವಿಯ ಪಿಜಿ ಕಾರ್ಯಕ್ರಮಕ್ಕೆ ಸೇರಿಕೊಂಡ ಕಾವ್ಯ ಗಣಕೀಕೃತ ಪರೀಕ್ಷೆ ತೆಗೆದುಕೊಳ್ಳಲು ಮುಂದಾದರು, ಆದರೆ ಹಲವು ಸಿಬ್ಬಂದಿ ಕಾವ್ಯ ನಿರ್ಧಾರವನ್ನು ವಿರೋಧಿಸಿದರು. ಆದರೆ ವಿಶ್ವಾಸ ಕಳೆದುಕೊಳ್ಳದ ಕಾವ್ಯ ನಾಲ್ಕು ಸೆಮಿಸ್ಟರ್ ಪರೀಕ್ಷೆಯನ್ನು ಬರೆದರು.

ಯಾರ ನೆರವು ಇಲ್ಲದೆ ಗಣಕೀಕೃತ ಪರೀಕ್ಷೆಗಳನ್ನು ಬರೆದ ಮೊದಲ ವ್ಯಕ್ತಿ ನಾನು, ನನ್ನ ಪರೀಕ್ಷೆಯನ್ನು ನಾನೇ ಬರೆಯಲು ಬಯಸಿದ್ದೆ. ಹಾಗಾಗಿ ಎಲ್ಲಾ ನಾಲ್ಕು ಸೆಮಿಸ್ಟರ್ ‌ಗಳಿಗೆ ಗಣಕೀಕೃತ ಪರೀಕ್ಷೆಗೆ ವಿನಂತಿಸಿದೆ ಎಂದು ಕಾವ್ಯಾ ತಿಳಿಸಿದ್ದಾರೆ.

‘ಸಂಗೀತ ಕ್ಷೇತ್ರದಲ್ಲೂ ನಾನು ಸಾಧನೆ ಮಾಡಬೇಕೆಂಬುದು ಅಪ್ಪನ ಆಸೆಯಾಗಿತ್ತು. ಅದರಂತೆ ಸಂಗೀತದಲ್ಲೂ ಜೂನಿಯರ್ ಹಾಗೂ ಸೀನಿಯರ್‌ ಪೂರೈಸಿದ್ದೇನೆ. ಉಪನ್ಯಾಸಕಿ ಆಗಬೇಕೆಂಬುದು ನನ್ನ ಗುರಿ ಎಂದು ಹೇಳಿದ್ದಾರೆ.

ನಾವು ಸ್ವತಂತ್ರ್ಯರಾಗಿರಬೇಕು, ಜೊತೆಗೆ ಹೆಚ್ಚು ಫರ್ಪೆಕ್ಟ್ ಆಗಿರಬೇಕು ಎಂದು ನಾನು ಬಯಸಿದ್ದೆ ಹೀಗಾಗಿ ನಾನು ನನ್ನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು, ನಮ್ಮ ಪ್ರತಿಯೊಂದು ನಿರ್ಧಾರಗಳನ್ನು ಬೆಂಬಲಿಸಲು ಮತ್ತು ವಿರೋಧಿಸಲು ಜನರಿದ್ದಾರೆ, ಆದರೆ ನಮ್ಮ ನಿರ್ಧಾರ ದೃಢವಾಗಿರಬೇಕು ಎಂದು ಕಾವ್ಯ ಅಭಿಪ್ರಾಯಪಟ್ಟಿದ್ದಾರೆ. ಎರಡು ಪದಕಗಳನ್ನು ಪಡೆದುಕೊಂಡ ಕಾವ್ಯ ತನ್ನ ಸಂತೋಷವನ್ನು ಹಂಚಿಕೊಳ್ಳಲು ತನ್ನ ತಂದೆಯಿಲ್ಲ, ಎರಡು ವಾರಗಳ ಹಿಂದೆ ಅನಾರೋಗ್ಯದಿಂದ ಕಾವ್ಯಾ ತಂದೆ ನಿಧನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com