'ಗ್ಲೋಬಲ್ ಟೀಚರ್ಸ್ ಪ್ರೈಜ್-2020' ಟಾಪ್ 10 ಶಿಕ್ಷಕರ ಅಂತಿಮ ಪಟ್ಟಿಯಲ್ಲಿ ಮಹಾರಾಷ್ಟ್ರದ ಶಿಕ್ಷಕನಿಗೆ ಸ್ಥಾನ!

ವಾರ್ಷಿಕ ಗ್ಲೋಬಲ್ ಟೀಚರ್ಸ್ ಪ್ರಶಸ್ತಿ 2020, 10 ಲಕ್ಷ ಅಮೆರಿಕ ಡಾಲರ್ ಮೊತ್ತದ ಟಾಪ್ 10 ಶಿಕ್ಷಕರ ಅಂತಿಮ ಸುತ್ತಿಗೆ  ಮಹಾರಾಷ್ಟ್ರ ರಾಜ್ಯದ ಹಳ್ಳಿಯೊಂದರ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಆಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕ ರಂಜಿತ್ ಸಿನ್ಹ್
ಶಾಲೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕ ರಂಜಿತ್ ಸಿನ್ಹ್

ಲಂಡನ್: ವಾರ್ಷಿಕ ಗ್ಲೋಬಲ್ ಟೀಚರ್ಸ್ ಪ್ರಶಸ್ತಿ 2020, 10 ಲಕ್ಷ ಅಮೆರಿಕ ಡಾಲರ್ ಮೊತ್ತದ ಟಾಪ್ 10 ಶಿಕ್ಷಕರ ಅಂತಿಮ ಸುತ್ತಿಗೆ  ಮಹಾರಾಷ್ಟ್ರ ರಾಜ್ಯದ ಹಳ್ಳಿಯೊಂದರ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಆಯ್ಕೆಯಾಗಿದ್ದಾರೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಮತ್ತು ಕ್ಯುಆರ್ ಕೋಡ್ ಪಠ್ಯಪುಸ್ತಕ ಕ್ರಾಂತಿಯನ್ನು ಭಾರತದಲ್ಲಿ ಮಾಡಿರುವುದನ್ನು ಪರಿಗಣಿಸಿ ಇವರನ್ನು ಆಯ್ಕೆ ಮಾಡಲಾಗಿದೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಗೆ ಶಿಕ್ಷಕನಾಗಿ ರಂಜಿತ್ ಸಿನ್ಹ(31ವ) 2009ರಲ್ಲಿ ಬಂದಿದ್ದರು. ಆಗ ಶಾಲೆ ತೀವ್ರ ದುಃಸ್ಥಿತಿಯಲ್ಲಿತ್ತು. ರಂಜಿತ್ ಸಿನ್ಹ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಪಠ್ಯಪುಸ್ತಕ ಸಿಗುವಂತೆ ಮಾಡಿದರು. ಅಷ್ಟೇ ಅಲ್ಲದೆ ವಿಶಿಷ್ಟ ಕ್ಯುಆರ್ ಕೋಡ್ ಗಳೊಂದಿಗೆ ವಿದ್ಯಾರ್ಥಿಗಳಿಗೆ ಆಡಿಯೊ ಪದ್ಯ, ವಿಡಿಯೊ ಉಪನ್ಯಾಸ, ಕಥೆಗಳು ಮತ್ತು ಪಠ್ಯಗಳು ಸಿಗುವಂತೆ ಮಾಡಿದರು.

10 ವರ್ಷಗಳಲ್ಲಿ ಇವರು ಮಾಡಿದ ಸತತ ಕೆಲಸ, ನಿಷ್ಠೆಯಿಂದಾಗಿ ಇಂದು ಗ್ರಾಮದಲ್ಲಿ ಹೆಣ್ಣುಮಕ್ಕಳ ಬಾಲ್ಯ ವಿವಾಹ ನಿಂತಿದೆ, ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಶೇಕಡಾ 100ರಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com