ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಕರಾದ ಪೋಲೀಸ್ ಅಧಿಕಾರಿ!

ಪ್ರತಿದಿನ ಬೆಳಿಗ್ಗೆ 7 ಗಂಟೆಗೆ, ನಾಗರಬಾವಿಯ ಒಂದು ಭಾಗದಿಂದ  30 ಮಕ್ಕಳು ತಮ್ಮ ಸ್ನೇಹಿತ  30 ವರ್ಷದ ಪೊಲೀಸ್ ಅಧಿಕಾರಿ-ಶಿಕ್ಷಕನಿಂದ ಪಾಠ ಹೇಳಿಸಿಕೊಳ್ಲಲು ಬಯಲು ಪ್ರದೇಶದಲ್ಲಿ ಸೇರುತ್ತಾರೆ.  ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವಾಗ ನೀವು ಯಾವ ರಾಜ್ಯಗಳನ್ನು ಹಾದು ಹೋಗುತ್ತೀರಿ? ಕರ್ನಾಟಕದ ಮುಖ್ಯಮಂತ್ರಿ ಯಾರು? ಈ ಎಲ್ಲಾ ಸಾಮಾನ್ಯ ವಿಷಯಗಳೊಂದಿಗೆ ಲಸೆ ಕಾರ್ಮಿಕರ
ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಕರಾದ ಪೋಲೀಸ್ ಅಧಿಕಾರಿ!

ಬೆಂಗಳೂರು: ಪ್ರತಿದಿನ ಬೆಳಿಗ್ಗೆ 7 ಗಂಟೆಗೆ, ನಾಗರಬಾವಿಯ ಒಂದು ಭಾಗದಿಂದ  30 ಮಕ್ಕಳು ತಮ್ಮ ಸ್ನೇಹಿತ  30 ವರ್ಷದ ಪೊಲೀಸ್ ಅಧಿಕಾರಿ-ಶಿಕ್ಷಕನಿಂದ ಪಾಠ ಹೇಳಿಸಿಕೊಳ್ಲಲು ಬಯಲು ಪ್ರದೇಶದಲ್ಲಿ ಸೇರುತ್ತಾರೆ.  ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವಾಗ ನೀವು ಯಾವ ರಾಜ್ಯಗಳನ್ನು ಹಾದು ಹೋಗುತ್ತೀರಿ? ಕರ್ನಾಟಕದ ಮುಖ್ಯಮಂತ್ರಿ ಯಾರು? ಈ ಎಲ್ಲಾ ಸಾಮಾನ್ಯ ವಿಷಯಗಳೊಂದಿಗೆ ಲಸೆ ಕಾರ್ಮಿಕರ ಮಕ್ಕಳಿಗೆ ಜೀವನ ಕೌಶಲ್ಯ, ಸಾಮಾನ್ಯ ಜ್ಞಾನ ಮತ್ತು ವೇದ  ಪಠಣದ ಪಾಠವನ್ನು ಅನ್ನಪೂರ್ಣೇಶ್ವರಿ ನಗರದ ಉಪವಿಭಾಗ ಠಾಣೆಯ  ಶಾಂತಪ್ಪಜಡೆಮ್ಮವರ ಕಲಿಸುತ್ತಿದ್ದಾರೆ.

"ನನ್ನ ಡ್ಯೂಟಿ ಬೆಳಿಗ್ಗೆ 8.30 ಕ್ಕೆ ಪ್ರಾರಂಭವಾಗುತ್ತದೆ, ಆದ್ದರಿಂದ ನಾನು ಅವರಿಗೆ ಬೆಳಿಗ್ಗೆ 7 ಗಂಟೆಯಿಂದ ಒಂದು ಗಂಟೆ ಪಾಠ ಹೇಳುತ್ತೇನೆ" ಅವರು  ಪತ್ರಿಕೆಗೆ ಹೇಳಿದ್ದಾರೆ. ರುವಾರ ತರಗತಿಗೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌ ಢ ಶಿಕ್ಷಣ ಸಚಿವ  ಎಸ್.ಸುರೇಶ್ ಕುಮಾರ್ ಅವರು ಶಾಂತಪ್ಪ ಅವರ ಕೆಲಸವನ್ನು ಶ್ಲಾಘಿಸಿದರು. 

“ಈ ಮಕ್ಕಳಿಗೆ ಟ್ಯಾಬ್, ಟೆಲಿವಿಷನ್ ಅಥವಾ ಆನ್‌ಲೈನ್ / ದೂರ  ಶಿಕ್ಷಣಕ್ಕೆ ಪ್ರವೇಶವಿಲ್ಲಕುಗ್ರಾಮದಲ್ಲಿರುವ ಕೆಲವು ಕುಟುಂಬಗಳು ಫೀಚರ್ ಫೋನ್ ಅನ್ನು ಹೊಂದಿವೆ, ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿಯೂ ನೆಟ್ ವರ್ಕ್ ಹಾಗೂ ಮೊಬೈಲ್ ಚಾರ್ಜಿಂಗ್ ಮಾಡುವ ಸ್ಥಳದ ಬಗ್ಗೆ ಸಮಸ್ಯೆ ಇದೆ. ಇದಕ್ಕಾಗಿ ಜಗಳವಾಗಿದ್ದೂ ಉಂಟು ಇನ್ನು ಕೆಲವೆಡೆ ವಿದ್ಯುತ್ ಸಂಪರ್ಕವಿಲ್ಲ. " ಶಾಂತಪ್ಪ ಹೇಳಿದ್ದಾರೆ.  ವಿದ್ಯಾರ್ಥಿಗಳಿರುವ ಳಗಳಿಗೆ ಶಿಕ್ಷಕರನ್ನು ಕಳುಹಿಸಬೇಕಾದ ಸರ್ಕಾರದ ವಿದ್ಯಾಗಮ ಯೋಜನೆಯೂ ಇಲ್ಲಿ ವಿಫಲವಾಗಿದೆ. “ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಶಿಕ್ಷಕರು ಮತ್ತು ಮಕ್ಕಳ ನಡುವೆ ಸರಿಯಾದ ಸಮನ್ವಯದ ಕೊರತೆಯಿದೆ. ಶಿಕ್ಷಕರು ಮಕ್ಕಳನ್ನು ಉದ್ಯಾನವನಕ್ಕೆ ಕರೆಯುತ್ತಾರೆ ಮತ್ತು ಯಾವ ಉದ್ಯಾನವನ ಅಥವಾ ಸ್ಥಳಕ್ಕೆ ಹೋಗಬೇಕೆಂದು ಮಕ್ಕಳಿಗೆ ತಿಳಿದಿಲ್ಲ, ”ಎಂದು ಅವರು ಹೇಳಿದರು, ವಿದ್ಯಾರ್ಥಿಗಳು ನಿಯಮಿತ ತರಗತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದ ಶಾಂತಪ್ಪ ಸಚಿವರ ಭೇಟಿಯ ನಂತರ, ಶಾಂತಪ್ಪ ಮಕ್ಕಳ ಶಿಕ್ಷಣದ ಬಗ್ಗೆ ಸ್ವಲ್ಪ ಭರವಸೆಯ ಆಶಾಕಿರಣ ಗೋಚರಿಸುತ್ತಿದೆ ಎಂದಿದ್ದಾರೆ.

"ಕೆಲವರು ಮಕ್ಕಳಿಗೆ ಪುಸ್ತಕಗಳು, ಚೀಲಗಳು ಮತ್ತು ಪೆನ್ನುಗಳನ್ನು ನೀಡಲು ಮುಂದಾಗಿದ್ದಾರೆ" ಎಂದು ಅವರು ಹೇಳಿದರು.

"ಸದ್ಯಕ್ಕೆ, ನಾನು ಅವರ ಹೋಂ ವರ್ಕ್ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಚಾಕೊಲೇಟ್ ಅಥವಾ ಜ್ಯಾಮಿತಿ ಪೆಟ್ಟಿಗೆಯ ಉಡುಗೊರೆ ನೀಡುತ್ತೇನೆ.  ಎಂದು ಅವರು ಹೇಳಿದರು. ಮಕ್ಕಳ ದುಃಸ್ಥಿತಿಯ ಬಗ್ಗೆ ಮಾತನಾಡಿದ ಅವರು, ವಲಸೆ  ಕಾರ್ಮಿಕರ ಕುಟುಂಬಗಳು ಕ್ಕಟ್ಟಾದ ಜಾಗದಲ್ಲಿ ವಿದ್ಯುತ್ ಅಥವಾ ನೀರು ಅಥವಾ ಯಾವುದೇ ಸೌಲಭ್ಯವಿಲ್ಲದೆ ವಾಸಿಸುತ್ತಿದ್ದಾರೆ. ಮಕ್ಕಳ ನಿವಾಸಗಳಿಗೆ ಭೇಟಿ ನೀಡಿದ್ದ ಶಾಂತಪ್ಪ ಅವರು ಮಕ್ಕಳಿಗೆ ಕಲಿಸಲು ಅನುವು ಮಾಡಿಕೊಡಲು ಪೋಷಕರನ್ನು ಮನವೊಲಿಸಬೇಕಾಗಿತ್ತು. 

. "ಅವರ ಮಕ್ಕಳು ಉತ್ತಮ ಜೀವನವನ್ನು ಪಡೆಯಲು ಶಿಕ್ಷಣ ಎಷ್ಟು ಮುಖ್ಯ ಎಂದು ನಾನು ಅವರಿಗೆ ಹೇಳಿದೆ.. ಅದಕ್ಕೆ ಅವರು ಒಪ್ಪಿದ್ದಾರೆ. " ಅವರು ವಿವರಿಸಿದ್ದಾರೆ. ಇನ್ನು ಎರಡು ವರ್ಷದ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡ ಶಾಂತಪ್ಪ ಸಹ ಇದೀಗ ಒಬ್ಬಂಟಿಗರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com