ಪ್ರಾಣವನ್ನೇ ಪಣಕ್ಕಿಟ್ಟು ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ 7ರ ಬಾಲಕ!
ತನ್ನ ಊರಿನ ಮೂರು ವರ್ಷದ ಮಗುವೊಂದು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಏಳು ವರ್ಷದ ಬಾಲಕ ಮಗುವನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿದೆ. ಕ್ಯಾಲಿಕಟ್ ನ ಎಳಾಯಡಂ ನ ನಿವಾಸಿಯಾದ ಮುಹಮ್ಮದ್ ಲತೀಫ್(7) ಹೀಗೆ ಸಾಹಸ ಮೆರೆದ ಬಾಲಕ.
Published: 19th September 2020 01:50 PM | Last Updated: 21st October 2020 02:32 PM | A+A A-

ಮುಹಮ್ಮದ್ ಲತೀಫ್
ಕ್ಯಾಲಿಕಟ್: ತನ್ನ ಊರಿನ ಮೂರು ವರ್ಷದ ಮಗುವೊಂದು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಏಳು ವರ್ಷದ ಬಾಲಕ ಮಗುವನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿದೆ. ಕ್ಯಾಲಿಕಟ್ ನ ಎಳಾಯಡಂ ನ ನಿವಾಸಿಯಾದ ಮುಹಮ್ಮದ್ ಲತೀಫ್(7) ಹೀಗೆ ಸಾಹಸ ಮೆರೆದ ಬಾಲಕ.
ನಾಡಾಪುರಂನ ಸಿರಾಜುಲ್ ಹುದಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿಯಾಗಿರುವ ಲತೀಫ್ ತನ್ನ ಪಕ್ಕದ ಮನೆಯ ರಾಜ್ ಎಂಬ ಮೂರು ವರ್ಷದ ಮಗು ಕಾಲುವೆಯ ನೀರಲ್ಲಿ ಮುಳುಗುವುದನ್ನು ಕಂಡಿದ್ದಾನೆ.
“ತಾಯಿ ಕಾಲುವೆಯ ಬದಿಯಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಮಗು ಅಲ್ಲೇ ಆಟವಾಡುತ್ತಿತ್ತು. ತಾಯಿ ಒದ್ದೆ ಬಟ್ಟೆಯನ್ನು ಒಣಗಿಸಲು ಹೋಗಿದ್ದಾಗ ಮಗು ಜಾರಿ ನೀರಿಗೆ ಬಿದ್ದಿದೆ. " ಲತೀಫ್ ಹೇಳಿದ್ದಾನೆ. ಆ ವೇಳೆ ತನ್ನ ಸಂಬಂಧಿಕ ಬಾಲಕನೊಂದಿಗೆ ಆಟವಾಡುತ್ತಿದ್ದ ಲತೀಫ್ ತಾನೂ ಸಹ ನೀರಿಗೆ ಜಿಗಿದ್ದಾನೆ.
"ನಮ್ಮ ಮಗ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವಿನ ಜೀವ ಉಳಿಸಿದ್ದ. ಬಗ್ಗೆ ನಮಗೆ ಸಂತೋಷವಾಗಿದೆ" ಎಂದು ಲತೀಫ್ ತಂದೆ ಹೇಳಿದ್ದಾರೆ.