ವಿಶ್ವಸಂಸ್ಥೆಯ ಹೆಚ್2021 ಜಲ ಶೃಂಗಸಭೆ: ಕಥೆ ಹೇಳುವ ಸ್ಪರ್ಧೆಯಲ್ಲಿ ಕೊಡಗಿನ ಕುವರಿಗೆ ಗೆಲುವು

ನಮ್ಮ ತಾತ, ಮುತ್ತಾತಂದಿರು ಸೇವಿಸಿದ ಶುದ್ಧವಾದ ಗಾಳಿ, ಜೀವಿಸಿದ ಆರೋಗ್ಯಕರ ಪರಿಸರ ನಮಗೆ ಬೇಕು ಎಂದು ಮಾನವತಿರ ಯಶ್ಮಿ ಡೆಚಮ್ಮ ಎಂಬ 9ನೇ ತರಗತಿ ವಿದ್ಯಾರ್ಥಿನಿಯ ಕಾಳಜಿ, ಆಶಯ ವಿಶ್ವಸಂಸ್ಥೆ ಗುರುತಿಸುವಂತೆ ಮಾಡಿದೆ. 

Published: 01st April 2021 01:25 PM  |   Last Updated: 01st April 2021 02:19 PM   |  A+A-


Manavattira Yashmi Dechamma

ಮಾನವತಿರ ಯಶ್ಮಿ ಡೆಚಮ್ಮ

Posted By : Sumana Upadhyaya
Source : The New Indian Express

ಮಡಿಕೇರಿ: ಪರಿಸರ ಈಗಾಗಲೇ ಸಾಕಷ್ಟು ಕೆಟ್ಟು ಹೋಗಿದ್ದು ನಾಳೆ ನಮ್ಮ ಮಕ್ಕಳಿಗೆ ಅದುವೇ ಮುಂದುವರಿದುಕೊಂಡು ಹೋಗುತ್ತದೆ. ನಮ್ಮ ತಾತ, ಮುತ್ತಾತಂದಿರು ಸೇವಿಸಿದ ಶುದ್ಧವಾದ ಗಾಳಿ, ಜೀವಿಸಿದ ಆರೋಗ್ಯಕರ ಪರಿಸರ ನಮಗೆ ಬೇಕು ಎಂದು ಮಾನವತಿರ ಯಶ್ಮಿ ಡೆಚಮ್ಮ ಎಂಬ 9ನೇ ತರಗತಿ ವಿದ್ಯಾರ್ಥಿನಿಯ ಕಾಳಜಿ, ಆಶಯ ವಿಶ್ವಸಂಸ್ಥೆ ಗುರುತಿಸುವಂತೆ ಮಾಡಿದೆ.

ಯಶ್ಮಿ ಡೆಚಮ್ಮ ಕೊಡಗಿನ ವಿದ್ಯಾರ್ಥಿನಿ. ನೀರು ಪವಿತ್ರ ಎಂಬ ವಿಷಯವನ್ನು ಇಟ್ಟುಕೊಂಡು ಯಶ್ಮಿ ಸಾಕ್ಷ್ಯಚಿತ್ರ ವಿಡಿಯೊವನ್ನು ತಯಾರಿಸಿದ್ದಳು. ವಿಶ್ವಸಂಸ್ಥೆಯ ಸಾಗರ ದಶಕ ಶೃಂಗಸಭೆ 13ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳ ಹೆಚ್2021 ನೀರಿನ ಶೃಂಗಸಭೆ ಕಥೆ ಹೇಳುವ ಸ್ಪರ್ಧೆಯಲ್ಲಿ ಯಶ್ಮಿ ಆಯ್ಕೆಯಾಗಿದ್ದಾಳೆ.

ಕೊಡಗು ಜಿಲ್ಲೆಯ ನೇಲಾಜಿ ಗ್ರಾಮದ ಯಶ್ಮಿ ಮೈಸೂರಿನ ಆಚಾರ್ಯ ವಿದ್ಯಾಕುಲದಲ್ಲಿ ಓದುತ್ತಿದ್ದಾಳೆ. ಲಾಕ್ ಡೌನ್ ಸಮಯದಲ್ಲಿ ಎಲ್ಲ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ವರ್ಚುವಲ್ ಮೂಲಕ ಅಭ್ಯಾಸ ಮಾಡುತ್ತಿದ್ದಾಗ ಯಶ್ಮಿ ವಿಶ್ವಸಂಸ್ಥೆ ಸಾಗರ ದಶಕ ಶೃಂಗಸಭೆಗೆ ಪರಿಚಿತಳಾದಳು. ಅಲ್ಲಿಯ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗಿಯಾದಳು.

ಹವಾಮಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ, ಇದರಿಂದ ಭೂಮಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಭೂಮಿ, ಪರಿಸರಕ್ಕೆ ಯಾವ ರೀತಿ ಅಪಾಯವಿದೆ ಎಂದೆಲ್ಲ ಕೇಳುತ್ತಿದೆ, ಈ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾದ ನಂತರ ಸ್ಪಷ್ಟತೆ ಸಿಕ್ಕಿತು. ವರ್ಚುವಲ್ ಮೀಟಿಂಗ್ ನ ಪ್ರತಿ ಭಾಗ ಕೂಡ ಒಂದು ವಿಷಯವನ್ನಿಟ್ಟುಕೊಂಡಿತ್ತು. ಅದರಲ್ಲಿ ಬಂದ ನೀರು ಸಂಪತ್ತು ಎಂಬ ವಿಷಯ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು, ಕೊಡವ ಸಮುದಾಯದ ನಾವು ಕಾವೇರಿ ನದಿಯನ್ನು ಭಕ್ತಿಯಿಂದ ಪೂಜಿಸುತ್ತೇವೆ ಎನ್ನುತ್ತಾಳೆ ಯಶ್ಮಿ.

ಕೊಡಗಿಗೆ ನಂತರ ಭೇಟಿ ನೀಡಿದ ಯಶ್ಮಿ ಕಾವೇರಿ ನದಿ ತೀರದಲ್ಲಿ ಕೆಲವು ಸುಂದರ ಕ್ಷಣಗಳನ್ನು, ಸುಂದರ ದೃಶ್ಯಗಳನ್ನು ಸೆರೆ ಹಿಡಿದಳು. ವಿಡಿಯೊದ ಹಿನ್ನೆಲೆಗೆ ಕೊಡವ ಹಾಡನ್ನು ಹಾಕಿ ಇಂದು ನದಿಯ ದೀನ ಸ್ಥಿತಿಯ ಬಗ್ಗೆ ವಿವರಿಸಿದಳು. ಮಾಲಿನ್ಯಕ್ಕೆ ಕಾವೇರಿ ನದಿ ಸಿಕ್ಕಿ ಹೇಗೆ ನಲುಗಿ ಹೋಗುತ್ತಿದೆ ಎಂದು ವಿವರಿಸಿದಳು. ಇಂದಿನ ಯುವಜನತೆ ನದಿಗಳ ಪುನರುಜ್ಜೀವನಕ್ಕೆ ಯಾವ ರೀತಿ ಸಹಾಯ ಮಾಡುತ್ತಿದ್ದಾರೆ ಎಂದು ವಿವರಿಸಿ ನಾವೆಲ್ಲರೂ ನೀರನ್ನು ಮಾಲಿನ್ಯದಿಂದ ರಕ್ಷಿಸೋಣ ಎಂದು ಕರೆ ನೀಡಿರುವ ವಿಡಿಯೊ ವಿಶ್ವಸಂಸ್ಥೆಯ ಕಾರ್ಯಕ್ರಮ ಆಯೋಜಕರನ್ನು ಹಿಡಿಸಿ ಯಶ್ಮಿ ಪ್ರಶಸ್ತಿ ಗೆದ್ದಿದ್ದಾಳೆ. 

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp