ಸೇನೆಗೆ ಮತ್ತಷ್ಟು ಮಹಿಳೆಯರು: ಮಿಲಿಟರಿ ಪೊಲೀಸ್ ದಳದಲ್ಲಿ ತರಬೇತಿ ಮುಗಿಸಿದ 100 ಮಹಿಳೆಯರ ಮೊದಲ ತಂಡ

ಮಿಲಿಟರಿ ಪೊಲೀಸರ ದಳ(ಸಿಎಂಪಿ)ಯ 100 ಮಹಿಳೆಯರ ಮೊದಲ ತಂಡದ ತರಬೇತಿ ಸರಿಸುಮಾರು ಮುಗಿದಿದ್ದು ತೀವ್ರ ತರಬೇತಿ ನಂತರ ಮೇ 8ರಂದು ಲ್ಯಾನ್ಸ್ ನಾಯಕ್ಸ್ ಆಗಿ ಪದವಿ ಪಡೆಯಲಿದ್ದಾರೆ.

Published: 02nd April 2021 02:00 PM  |   Last Updated: 02nd April 2021 02:10 PM   |  A+A-


The first batch of women cadets in the Corps of Military Police (CMP) take part  in a combat training session at the CMP Centre in Bengaluru

ಬೆಂಗಳೂರಿನ ಸಿಎಂಪಿಯಲ್ಲಿ ತರಬೇತಿ ನಿರತ ಮಹಿಳಾ ತಂಡ

Posted By : Sumana Upadhyaya
Source : The New Indian Express

ಬೆಂಗಳೂರು: ಮಿಲಿಟರಿ ಪೊಲೀಸರ ದಳ(ಸಿಎಂಪಿ)ಯ 100 ಮಹಿಳೆಯರ ಮೊದಲ ತಂಡದ ತರಬೇತಿ ಸರಿಸುಮಾರು ಮುಗಿದಿದ್ದು ತೀವ್ರ ತರಬೇತಿ ನಂತರ ಮೇ 8ರಂದು ಲ್ಯಾನ್ಸ್ ನಾಯಕ್ಸ್ ಆಗಿ ಪದವಿ ಪಡೆಯಲಿದ್ದಾರೆ.

ಇದೇ ಮೊದಲ ಬಾರಿಗೆ ಮಿಲಿಟರಿ ಪೊಲೀಸ್ ದಳ ಲ್ಯಾನ್ಸ್ ನಾಯಕ್ಸ್ ಹುದ್ದೆಗೆ ಮಹಿಳೆಯರನ್ನು ನೇಮಕಾತಿ ಮಾಡಲಾಗಿದೆ ಎಂದು ಕಾರ್ಪ್ಸ್ ಆರ್ಮಿ ಏರ್ ಡಿಫೆನ್ಸ್ ನ ಲೆಫ್ಟಿನೆಂಟ್ ಕರ್ನಲ್ ಜುಲೀ ಸಿಂಗ್ ತಿಳಿಸಿದ್ದಾರೆ. ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇರಿಸಿ ಇನ್ನಷ್ಟು ಪಡೆಯನ್ನು ಬಲಿಷ್ಠಗೊಳಿಸುವುದು ಉದ್ದೇಶವಾಗಿದೆ. 

ಅವರು ಪದವೀಧರರಾದ ನಂತರ, ಸಿಪಾಯಿಗಳು - ತರಬೇತಿ ಲ್ಯಾನ್ಸ್ ನಾಯ್ಕ್ಸ್ ಎಂದು ಕರೆಯಲ್ಪಡುವಂತೆ - ದೇಶಾದ್ಯಂತ 11 ಸ್ಥಳಗಳಲ್ಲಿ ವಿವಿಧ ಹುದ್ದೆಗಳನ್ನು ಅವರಿಗೆ ನಿಯೋಜಿಸಲಾಗುತ್ತದೆ. ಮಿಲಿಟರಿ ಕಾರ್ಯಾಚರಣೆಗಳು, ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಹಿಳೆಯರಿಗೆ ಹೊಡೆಯುವುದು, ಲೈಂಗಿಕ ದೌರ್ಜನ್ಯಗಳಾದ ಅತ್ಯಾಚಾರ, ಕಿರುಕುಳ ಮತ್ತು ಕುಟುಂಬ ಕಿರುಕುಳಗಳಲ್ಲಿ ಲೈಂಗಿಕ ಕಿರುಕುಳದ ತನಿಖೆಯನ್ನು ಲ್ಯಾನ್ಸ್ ನಾಯಕ್ಸ್ ಮಾಡಲಿದ್ದಾರೆ.

ನೇಮಕಾತಿಗೊಂಡವರಲ್ಲಿ 8 ಮಂದಿ ಕರ್ನಾಟಕದವರಾಗಿದ್ದು, 26 ಮಂದಿ ಹರ್ಯಾಣ, 27 ಮಂದಿ ಉತ್ತರ ಪ್ರದೇಶ, ಇಬ್ಬರು ಹಿಮಾಚಲ ಪ್ರದೇಶ, 6 ಮಂದಿ ಕೇರಳಿಗರು, ತಲಾ ಒಬ್ಬರು ದೆಹಲಿ, ಪಂಜಾಬ್ ಮತ್ತು ರಾಜಸ್ತಾನ, ಇಬ್ಬರು ಈಶಾನ್ಯ ಭಾರತದಿಂದ ಹಾಗೂ ಒಂದಿಬ್ಬರು ಬೇರೆ ರಾಜ್ಯದವರಾಗಿದ್ದಾರೆ.

ಹೆಚ್ಚಿನ ಸಿಪಾಯಿಗಳು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ)ನ ಹಿನ್ನೆಲೆ ಹೊಂದಿದ್ದು, 19ರಿಂದ 21 ವರ್ಷದ ನಡುವಿನವರಾಗಿದ್ದಾರೆ. ಎಂಭತ್ತು ಮಹಿಳೆಯರು ಇನ್ನೂ ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳಾಗಿದ್ದು, ಅವರು ಸಿಎಂಪಿ ಕೇಂದ್ರ ಮತ್ತು ಶಾಲೆಯಿಂದ ಪದವಿ ಪಡೆದ ನಂತರ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಅವರಿಗೆ ಅನುಮತಿ ನೀಡಲಾಗುತ್ತದೆ.

ನನ್ನ ತಂದೆ 130 ವಾಯು ರಕ್ಷಣಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ಅದು ನನ್ನನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸಿತು ಎಂದು ದ್ವಿತೀಯ ವರ್ಷದ ಬಿಎಸ್ಸಿ ಪದವಿ ಓದುತ್ತಿರುವ ಜ್ಯೋತಿ ಎಂ ಹಂಚಿನಮನಿ ಹೇಳಿದ್ದಾರೆ. ಇವರು ಬೈಲಹೊಂಗಲದವರಾಗಿದ್ದಾರೆ. ಸೇನೆಯಲ್ಲಿ ನನ್ನ ತಲೆಕೂದಲು ಕತ್ತರಿಸಬೇಕಾಗಿರುವುದರಿಂದ ಊರಿಗೆ ಹೋದಾಗ ಹಲವರು ನನ್ನನ್ನು ಗುರುತು ಹಿಡಿಯುವುದಿಲ್ಲ ಎನ್ನುತ್ತಾರೆ ಜ್ಯೋತಿ.

ಬೆಳಗಾವಿಯ ಕಾಗವಾಡದ ಅರಿತಿ ತಲ್ವರ್ ಕೂಡ ಬಹಳ ಬೇಗನೆ ತರಬೇತಿಗೆ ಸೇರಿದ್ದಾರೆ. ಎನ್ ಸಿಸಿ ತರಬೇತಿಯಿಂದಾಗಿ ನನಗೆ ಶಾರೀರಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸುಲಭವಾಯಿತು ಎನ್ನುತ್ತಾರೆ ಅವರು. ಅಪರಾಧ ತನಿಖಾ ತರಬೇತಿ ತನಗೆ ಇಷ್ಟವಾಯಿತು ಎನ್ನುತ್ತಾರೆ ಅವರು.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp