ಟಿಎನ್ಐಇ ಫಲಶ್ರುತಿ: ಕೆಎಎಸ್ ಕನಸು ಕಂಡಿದ್ದ ಬುಡಕಟ್ಟು ಯುವತಿಗೆ ಬೆಂಗಳೂರು ಫೌಂಡೇಶನ್ ನಿಂದ ನೆರವು

ಜಮೀನಿನಲ್ಲಿ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿರುವ ಬುಡಕಟ್ಟು ಯುವತಿಗೆ ಬೆಂಗಳೂರಿನ ಫೌಂಡೇಶನ್ ಒಂದು ನೆರವಿನ ಹಸ್ತ ಚಾಚಿದೆ.

Published: 06th April 2021 12:07 PM  |   Last Updated: 06th April 2021 01:22 PM   |  A+A-


Anuradha, seen along with her mother, at a coaching centre in Mysuru

ಕೋಚಿಂಗ್ ಕೇಂದ್ರಕ್ಕೆ ತಾಯಿಯೊಂದಿಗೆ ತೆರಳಿರುವ ಅನುರಾಧ

Posted By : Manjula VN
Source : The New Indian Express

ಮೈಸೂರು: ಜಮೀನಿನಲ್ಲಿ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿರುವ ಬುಡಕಟ್ಟು ಯುವತಿಗೆ ಬೆಂಗಳೂರಿನ ಫೌಂಡೇಶನ್ ಒಂದು ನೆರವಿನ ಹಸ್ತ ಚಾಚಿದೆ.

ಎಚ್.ಡಿ. ಕೋಟೆ ತಾಲೂಕಿನ ಡಿಬಿ ಕುಪ್ಪೆ ಬಳಿಯ ತಿಮ್ಮನಹೋಸಹಳ್ಳಿ ಕುಗ್ರಾಮದಿಂದ ಬಂದ ಅನುರಾಧ ಅವರು, ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಕೋಚಿಂಗ್ ತರಗತಿಗಳಿಗಾಗಿ ಹಣ ಒಟ್ಟುಗೂಡಿಸಲು ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿತ್ತು. 

ಬೆಂಗಳೂರಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಆ.ರಾಮಕೃಷ್ಣ ಎಂಬುವವರು ಈ ವರದಿಯನ್ನು ಗಮನಿಸಿದ್ದು, ಆರ್'ಆರ್'ಕೆ ಫೌಂಡೇಶನ್ ಮೂಲಕ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಸಂಪರ್ಕಿಸಿದ್ದಾರೆ. ಇದೀಗ ಯುವತಿಗೆ ಫೌಂಡೇಶನ್ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. 

ಯುವತಿಯ ತರಬೇತಿಗೆ ತಗುಲುವ ವೆಚ್ಚ, ಪುಸ್ತಕದ ವೆಚ್ಚ ಹಾಗೂ ಇನ್ನಿತರೆ ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ರಾಮಕೃಷ್ಣ ಅವರು ತಿಳಿಸಿದ್ದಾರೆ. 

ಇದೀಗ ಅನುರಾಧಾ ಅವರು ಮೈಸೂರಿನ ನವೋ ಪ್ರಮತಿ ಇನ್ಸ್'ಸ್ಟಿಟ್ಯೂಟ್ ಆಫ್ ಸಿವಿಲ್ ಸರ್ವಿಸ್ ನಲ್ಲಿ ತರಬೇತಿ ಪಡೆಯಲು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಐಎಎಸ್/ಕೆಎಎಸ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುರಾದಾ ಅವರು ಈ ಸಂಸ್ಥೆಯಲ್ಲಿ ತರಬೇತಿ ಪಡೆಯಲಿದ್ದಾರೆ. ಯುವತಿಯ ಹಾಸ್ಟೆಲ್ ವೆಚ್ಚವನ್ನು ಬುಡಕಟ್ಟು ಕಲ್ಯಾಣ ಇಲಾಖೆ ನೋಡಿಕೊಳ್ಳಲಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಅನುರಾಧ ಅವರು ಸಂಸತಯ ವ್ಯಕ್ತಪಡಿಸಿದ್ದು, ನೆರವು ಸಿಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಇದೀಗ ನನ್ನ ಹೃದಯ ತುಂಬಿ ಬರುತ್ತಿದೆ. ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆಯುತ್ತೇನೆಂದುಕೊಂಡಿರಲಿಲ್ಲ. ಇದೀಗ ಕೆಎಎಸ್ ಅಧಿಕಾರಿಯಾಗಲು ಸಾಕಷ್ಟು ಶ್ರಮಿಸುತ್ತೇನೆ. ಬುಡಕಟ್ಟು ಸಮುದಾಯ ಪ್ರಮುಖವಾಗಿ ಸಮುದಾಯದ ಯುವತಿಯರಿಗೆ ಮಾದರಿಯಾಗುತ್ತೇನೆಂದು ಹೇಳಿದ್ದಾರೆ. 

ಅನುರಾಧ ತಾಯಿ ಗೀತಾ ಅವರು ಮಾತನಾಡಿ, ಇದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಕೋಚಿಂಗ್ ಕ್ಲಾಸ್'ಗೆ ತೆರಳುವುದೇ ಒಂದು ರೀತಿಯ ಕನಸಾಗಿತ್ತು ಎಂದು ತಿಳಿಸಿದ್ದಾರೆ. 

ಆರ್‌ಆರ್‌ಕೆ ಫೌಂಡೇಶನ್ ದೀನದಲಿತರನ್ನು, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರನ್ನು ಬೆಂಬಲಿಸುತ್ತಾ ಬಂದಿದ್ದು, ಸಾಕಷ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದೆ. 

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp