ನಾಸಾ ಸ್ಪರ್ಧೆಯಲ್ಲಿ ಗೆದ್ದ ಒಡಿಶಾ, ಬೆಂಗಳೂರಿನ ವಿದ್ಯಾರ್ಥಿಗಳು ತಯಾರಿಸಿದ್ದ ಲ್ಯಾಂಡ್ ರೋವರ್!

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಆಯೋಜಿಸಿದ್ದ ಸ್ಪರ್ಧೆಯನ್ನು ಭಾರತೀಯ ವಿದ್ಯಾರ್ಥಿಗಳಿದ್ದ ತಂಡ ಗೆದ್ದಿದೆ. 
ನಾಸಾ ಸ್ಪರ್ಧೆಯಲ್ಲಿ ಗೆದ್ದ ಒಡಿಶಾ, ಬೆಂಗಳೂರಿನ ವಿದ್ಯಾರ್ಥಿಗಳು ತಯಾರಿಸಿದ್ದ ಲ್ಯಾಂಡ್ ರೋವರ್!
ನಾಸಾ ಸ್ಪರ್ಧೆಯಲ್ಲಿ ಗೆದ್ದ ಒಡಿಶಾ, ಬೆಂಗಳೂರಿನ ವಿದ್ಯಾರ್ಥಿಗಳು ತಯಾರಿಸಿದ್ದ ಲ್ಯಾಂಡ್ ರೋವರ್!

ಒಡಿಶಾ: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಆಯೋಜಿಸಿದ್ದ ಸ್ಪರ್ಧೆಯನ್ನು ಭಾರತೀಯ ವಿದ್ಯಾರ್ಥಿಗಳಿದ್ದ ತಂಡ ಗೆದ್ದಿದೆ. 

ಕೋವಿಡ್-19 ಕಾರದಿಂದಾಗಿ ಬೆಂಗಳೂರಿನಿಂದ ಅವರ ಊರುಗಳಿಗೆ ವಾಪಸ್ಸಾಗಿದ್ದ ಭುವನೇಶ್ವರದ ವೆಲ್ಡಿಂಗ್ ಶಾಪ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ರೀನಾ ಬಘಾ, ಮಯೂರ್ ಭಂಜ್ ನಲ್ಲಿ ಸೈಕಲ್ ಮೆಕಾನಿಕ್ ಆಗಿದ್ದ 18 ವರ್ಷದ ಕೈಲಾಶ್ ಬರಿಕ್, ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿರುವ ದಂಡ ಪಾಣಿ ಪಾತ್ರ ಈ ವಿದ್ಯಾರ್ಥಿಗಳ ತಂಡದ ಭಾಗವಾಗಿದ್ದರು ಎಂಬುದು ಮತ್ತೊಂದು ಗಮನಾರ್ಹ ಸಂಗತಿ. 

ನಾಸಾದ ನಾಸಾ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ 2021 ಎಂಬ ಪ್ರೌಢಶಾಲೆ ಮಟ್ಟದ ಸ್ಪರ್ಧೆಯಲ್ಲಿ  10 ವಿದ್ಯಾರ್ಥಿಗಳ ನವೋನ್ಮೆಶ್ ಪ್ರಸಾರ್ ವಿದ್ಯಾರ್ಥಿ ಖಗೋಳವಿಜ್ಞಾನ ತಂಡ (NaPSAT) ಮೂರನೇ ಸ್ಥಾನ ಗಳಿಸಿದ್ದು, ಈ ತಂಡವನ್ನು ಎಂಜಿನಿಯರ್ ಮತ್ತು ಶಿಕ್ಷಕ ಅನಿಲ್ ಪ್ರಧಾನ್ ಆಯ್ಕೆ ಮಾಡಿದ್ದರು. 

ಭವಿಷ್ಯದ ಯೋಜನೆ ಮತ್ತು ಸಿಬ್ಬಂದಿ ಸಹಿತ ಬಾಹ್ಯಾಕಾಶ ಯಾನಗಳಿಗಾಗಿ ಹೊಸ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ನಾಸಾ ಈ ಸ್ಪರ್ಧೆಯನ್ನು ನಡೆಸಿತ್ತು. 

ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿರುವ ತಂಡ, ಬಾಹ್ಯಾಕಾಶ ಪರಿಶೋಧನೆಗಾಗಿ ಇತರ ಗ್ರಹಗಳ ಮೇಲೆ ಇಳಿಯಬಹುದಾದ ಮತ್ತು ವಿವಿಧ ರೀತಿಯ ಭೂಪ್ರದೇಶಗಳಲ್ಲಿ ಸಂಚರಿಸಬಹುದಾದ NaPSAT 1.0 ಎಂಬ ರೋವರ್ ನ್ನು ತಯಾರಿಸಿದೆ.

"ಆರ್ಥಿಕ ಸಮಸ್ಯೆಯ ಕಾರಣಗಳಿಂದಾಗಿ ನಾನು ಶಾಲೆಯ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದರೆ ವಿಜ್ಞಾನದೆಡೆಗೆ ಇದ್ದ ಆಸಕ್ತಿ ಕಮರಲಿಲ್ಲ. ವಿಶ್ವದ ಶ್ರೇಷ್ಠ ಬಾಹ್ಯಾಕಾಶ ಸಂಸ್ಥೆ ನಡೆಸಿದ್ದ ಸ್ಪರ್ಧೆಯಲ್ಲಿ ಗೆದ್ದಿರುವುದು ನನ್ನ ಜೀವಮಾನದ ಸಾಧನೆ ಎಂದು ರೀನಾ ಹೇಳಿದ್ದಾರೆ. 

ಕನುರಿ ವರ್ಷಿಣಿ, ನಿತೇಶ್ ಪಟ್ನಾಯಕ್, ಅಂಕನ್ ಮೊಂಡಾಲ್, ಅಂಜಿಶ್ನು ಪಟ್ನಾಯಕ್, ಶ್ರೇಯಾನ್ಶ್ ವಿಕಾಶ್ ಮಿಶ್ರಾ, ತನ್ವಿ ಮಲ್ಲಿಕ್ ಮತ್ತು ರಿಷಿಕೇಶ್ ನಾಯಕ್ ಸ್ಪರ್ಧೆಯ ವಿಜೇತರಾದ ಇತರ ವಿದ್ಯಾರ್ಥಿಗಳಾಗಿದ್ದು ರಾಜ್ಯದ ವಿವಿಧ ಶಾಲೆಗಳಲ್ಲಿ ಓದುತ್ತಿರುವ 17-18 ರ ವಿದ್ಯಾರ್ಥಿಗಳಾಗಿದ್ದಾರೆ. ನಾಸಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಪ್ರೌಢಶಾಲಾ ತಂಡವೂ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com