ಸಾಮಾಜಿಕ ಕಾರ್ಯ: ನಿರ್ಗತಿಕರಿಗೆ ಆಕ್ಸಿಮೀಟರ್ ಒದಗಿಸಲು 2 ಲಕ್ಷ ರೂ. ಸಂಗ್ರಹಿಸಿದ 10ನೇ ತರಗತಿ ಮಕ್ಕಳು!
ನಿರ್ಗತಿಕ ವರ್ಗದ ಜನರಿಗೆ ವಿತರಣೆ ಮಾಡಲು 300 ನಾಡಿಮಿಡಿತ ಆಕ್ಸಿಮೀಟರ್ ಗೆ ಕೇವಲ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಸಹಾಯ ಮಾಡಿದ್ದಾರೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಸ್ನೇಹ ರಾಘವನ್ ಮತ್ತು ಶ್ಲೋಕ ಅಶೋಕ್. ಇವರು ನಗರದ ಗ್ರೀನ್ ವುಡ್ ಹೈ ಇಂಟರ್ ನಾಷನಲ್ ಶಾಲೆಯ ವಿದ್ಯಾರ್ಥಿಗಳು.
Published: 29th April 2021 09:28 AM | Last Updated: 29th April 2021 03:32 PM | A+A A-

ಶ್ಲೋಕಾ ಅಶೋಕ್
ಬೆಂಗಳೂರು: ನಿರ್ಗತಿಕ ವರ್ಗದ ಜನರಿಗೆ ವಿತರಣೆ ಮಾಡಲು 300 ನಾಡಿಮಿಡಿತ ಆಕ್ಸಿಮೀಟರ್ ಗೆ ಕೇವಲ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಸಹಾಯ ಮಾಡಿದ್ದಾರೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಸ್ನೇಹ ರಾಘವನ್ ಮತ್ತು ಶ್ಲೋಕ ಅಶೋಕ್. ಇವರು ನಗರದ ಗ್ರೀನ್ ವುಡ್ ಹೈ ಇಂಟರ್ ನಾಷನಲ್ ಶಾಲೆಯ ವಿದ್ಯಾರ್ಥಿಗಳು.
ಇವರು ಆಕ್ಸಿಮೀಟರ್ ಗಳನ್ನು ಬೆಂಗಳೂರು ಮೂಲದ ಸಂಪರ್ಕ ಎಂಬ ಎನ್ ಜಿಒಗೆ ದಾನ ಮಾಡಲಿದ್ದು ಸಮಾಜದ ನಿರ್ಗತಿಕ ವರ್ಗದವರ ಏಳಿಗೆಗೆ ಶ್ರಮಿಸುತ್ತದೆ. ಬೆಂಗಳೂರಿನ ಕೊಳಗೇರಿ ಪ್ರದೇಶದ ಮತ್ತು ಕೊಪ್ಪಳ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಆಕ್ಸಿಮೀಟರ್ ಗಳನ್ನು ವಿತರಿಸಲಾಗುತ್ತದೆ.
ಹಣ ಹೇಗೆ ಸಂಗ್ರಹಿಸಿದರು?: ಕೊರೋನಾ ಸಂಕಷ್ಟ ಕಾಲದಲ್ಲಿ ಸಮಾಜದಲ್ಲಿರುವ ಬಡವರು, ನಿರ್ಗತಿಕರಿಗೆ ಕೈಲಾದವರು ಏನಾದರೊಂದು ರೀತಿಯಲ್ಲಿ ಸಹಾಯ ಮಾಡಿದರೆ ಅದು ನಿಜಕ್ಕೂ ಉಪಕಾರವಾಗುತ್ತದೆ. ಇಬ್ಬರೂ ಪೋಸ್ಟರ್ ಗಳನ್ನು ವಿನ್ಯಾಸ ಮಾಡಿ ಗಿವ್ ಇಂಡಿಯಾ ವೆಬ್ ಸೈಟ್ ನಲ್ಲಿ ಹಣ ಸಂಗ್ರಹಿಸುವುದಾಗಿ ಪ್ರಕಟಿಸಿದರು. ಹಲವು ಆಕ್ಸಿಮೀಟರ್ ತಯಾರಕರನ್ನು ಸಂಪರ್ಕಿಸಿದರು. ಐವರು ಆಕ್ಸಿಮೀಟರ್ ಉತ್ಪಾದಕರನ್ನು ಸಂಪರ್ಕಿಸಿದೆವು. ಅವರು ಪೂರೈಕೆ ಕೊರತೆಯಿಂದಾಗಿ ಹೆಚ್ಚು ಹಣ ಕೇಳಿದರು. ನಾವಿಬ್ಬರೂ 2 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದೆವು, ಇನ್ನೂ 14 ಸಾವಿರ ರೂಪಾಯಿ ಹೆಚ್ಚು ಸಂಗ್ರಹವಾಯಿತು. ಆಗ ಆಕ್ಸಿಮೀಟರ್ ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಿದೆವು ಎಂದು ಶ್ಲೋಕಾ ಹೇಳುತ್ತಾಳೆ.
ಸೋಷಿಯಲ್ ಪ್ರಾಜೆಕ್ಟ್ ಭಾಗವಾಗಿ ಹಣ ಸಂಗ್ರಹಿಸುತ್ತೀರಾ ಎಂದು ಸಾಮಾಜಿಕ ಕಾರ್ಯಕರ್ತೆ ಅನುಪಮ ಪರೇಖ್ ಈ ವಿದ್ಯಾರ್ಥಿನಿಯರಲ್ಲಿ ಕೇಳಿ ಕೊರೋನಾ ಸಮಯದಲ್ಲಿ ಆಕ್ಸಿಮೀಟರ್ ಗೆ ಹಣ ಸಂಗ್ರಹಿಸಿ ಎಂದು ಕೇಳಿದರಂತೆ. ವಾರದ ಹಿಂದೆಯಷ್ಟೇ ಆರಂಭ ಮಾಡಿದ ಈ ಯೋಜನೆಗೆ ಎರಡೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಂತೆ. ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ನೋಡಿ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಮಾಜಿಕ ಕಾಳಜಿಯ ಕೆಲಸಗಳನ್ನು ಮಾಡಲು ನಮಗೆ ಪ್ರೇರಣೆ ಸಿಕ್ಕಿದೆ ಎನ್ನುತ್ತಾಳೆ ಸ್ನೇಹಾ.
ನಮ್ಮ ಬೋರ್ಡ್ ಪರೀಕ್ಷೆ ರದ್ದಾಗಿರುವುದರಿಂದ ಈ ಕೊರೋನಾ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಕೆಲಸಗಳಿಗೆ ನಮಗೆ ಸಾಕಷ್ಟು ಸಮಯ ಸಿಗುತ್ತಿದೆ. ಕೊರೋನಾ ಸಾಂಕ್ರಾಮಿಕ ಮತ್ತು ಲಸಿಕೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ನಾನು ಪೋಸ್ಟರ್ ತಯಾರು ಮಾಡುತ್ತಿದ್ದೇನೆ, ಇದು ಬಹಳ ಮುಖ್ಯವಾಗಿದೆ ಎಂದು ಶ್ಲೋಕಾ ಹೇಳುತ್ತಾಳೆ. ಇವರಿಬ್ಬರೂ ಅನುಪಮಾ ಪರೇಖ್ ಜೊತೆ ಇಂತಹ ಸಾಮಾಜಿಕ ಕೆಲಸಗಳಲ್ಲಿ ಕೈಜೋಡಿಸುತ್ತಾರೆ.