22 ವರ್ಷಗಳ ಬಳಿಕ ಮಗನನ್ನು ಪೋಷಕರ ಮಡಿಲು ಸೇರಿಸಿದ ಕೊರೋನಾ!

ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಬರೋಬ್ಬರಿ 22 ವರ್ಷಗಳ ಹಿಂದೆ ಅಪ್ಪ-ಅಮ್ಮನ್ನು ತೊರೆದು ಹೋಗಿದ್ದ ಯುವಕನೋರ್ವ ಇದೀಗ ಕೊರೋನಾ ಕಾರಣದಿಂದಾಗಿ ವಾಪಸ್ ಮನೆಗೆ ಸೇರಿದ್ದಾನೆ.
ತಂದೆ ತಾಯಿ ಜೊತೆಗಿರುವ ಶೇಖರ್
ತಂದೆ ತಾಯಿ ಜೊತೆಗಿರುವ ಶೇಖರ್

ಹಾಸನ: ವಿಶ್ವದಾದ್ಯಂತ ಮಹಾಮಾರಿ ಕೊರೋನಾ ಸಾಕಷ್ಟು ಜನರ ಬದುಕನ್ನೇ ಕಸಿದುಕೊಳ್ಳುತ್ತಿದೆ. ಹಲವು ಪೋಷಕರಿಂದ ಮಕ್ಕಳನ್ನು, ಮಕ್ಕಳಿಂದ ಪೋಷಕರನ್ನೂ ಕಿತ್ತುಕೊಂಡಿದೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಬರೋಬ್ಬರಿ 22 ವರ್ಷಗಳ ಹಿಂದೆ ಅಪ್ಪ-ಅಮ್ಮನ್ನು ತೊರೆದು ಹೋಗಿದ್ದ ಯುವಕನೋರ್ವ ಇದೀಗ ಕೊರೋನಾ ಕಾರಣದಿಂದಾಗಿ ವಾಪಸ್ ಮನೆಗೆ ಸೇರಿದ್ದಾನೆ. 

ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮದ ರಾಜೇಗೌಡ ಹಾಗೂ ಅಕ್ಕಯಮ್ಮ ದಂಪತಿ ಮಗನಾದ 38 ವರ್ಷದ ಶೇಖರ್ ಕೊರೋನಾದಿಂದಾಗಿ ಇದೀಗ ಪೋಷಕರನ್ನು ಸೇರಿರುವ ವ್ಯಕ್ತಿಯಾಗಿದ್ದಾನೆ. 

ಈತ ತನ್ನ 16ನೇ ವಯಸ್ಸಿನಲ್ಲೇ ಅಪ್ಪ-ಅಮ್ಮನ್ನು ತೊರೆದು ಊರೂರು ಸುತ್ತಿದ್ದ. 16ನೇ ವಯಸ್ಸಿನಲ್ಲಿದ್ದಾಗ ಓದು ತಲೆಗೆ ಹತ್ತಲಿಲ್ಲ. ಹಾಗಾಗಿ ಬೇಸರಗೊಂಡು ಮುಂಬೈ ಬಸ್ ಹತ್ತಿದ್ದಾರೆ. ಇತ್ತ ಮಗ ನಾಪತ್ತೆಯಾದ ಬಳಿಕ ಸಾಕಷ್ಟು ಹುಡುಕಾಡಿದ್ದಾರೆ. ವರ್ಷಗಳಾದರೂ ಮಗ ದೊರಕದ ಹಿನ್ನೆಲೆಯಲ್ಲಿ ಪೋಷಕರು ಸತ್ತುಹೋಗಿರಬೇಕೆಂದು ತಿಳಿಸಿದ್ದಾರೆ.

ಇನ್ನು ಮುಂಬೈ ಸೇರಿದ ಶೇಖರ್, ಬಳಿಕ ಅಲ್ಲಿ ಇಲ್ಲಿ ಹೋಟೆಲ್ ಗಳಲ್ಲಿ ಕೆಲಸ ಮಾಡಿಕೊಂಡು ದಿನ ದೂಡಿದ್ದಾರೆ. ನಂತರ ಅಷ್ಟು ಇಷ್ಟೂ ಅಡುಗೆ ಕೆಲಸ ಕಲಿತುಕೊಂಡು, ಪಾನಿಪೂರಿ, ಗೋಬಿ... ಹೀಗೆ ಹಲವು ಚಾಟ್ಸ್ ಗಳನ್ನು ಮಾಡುವುದನ್ನು ಚೆನ್ನಾಗಿ ಕಲಿತುಕೊಂಡು ಜೀವನ ಸಾಗಿಸಿದ್ದಾರೆ. 

ಅಷ್ಟೋ ಇಷ್ಟೋ ಸಂಪಾದಿಸಿದ ಹಣದಲ್ಲಿ ಹೋಟೆಲ್ ವ್ಯವಹಾರ ಆರಂಭಿಸಿದ್ದಾರೆ. ಕೆಲ ದಿನಗಳ ಬಳಿಕ ನಷ್ಟ ಎದುರಾಗಿದೆ. ಕೊರೋನಾ ಸಾಂಕ್ರಾಮಿಕ ಆರಂಭವಾದ ಬಳಿಕವಂತೂ ವ್ಯವಹಾರ ಮತ್ತಷ್ಟು ಹದಗೆಟ್ಟಿದೆ. ಬಳಿಕ ಎರಡನೇ ಕೊರೋನಾ ಅಲೆ ಆರಂಭವಾದಾಗ ಮತ್ತಷ್ಟು ಕಷ್ಟ ಎದುರಾಗಿದ್ದು, ಪೋಷಕರ ಮಡಿಲ ಸೇರಲು ಶೇಖರ್ ಇಚ್ಚಿಸಿ ಹಾಸನಕ್ಕೆ ಮರಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com