'ಗೋ ಕೊರೋನಾ ಗೋ': ಕೇರಳದ ಈ ಹಳ್ಳಿಯಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ಇಲ್ಲ!

ಶ್ರೀಮಂತ ವನ್ಯಜೀವಿ ಮತ್ತು ಪರಿಸರ-ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕೇರಳದ  ಸಣ್ಣ ಅರಣ್ಯ ಗ್ರಾಮವಾದ 'ಗವಿ' ಈ ಬಾರಿ ಬೇರೆ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ: ಈ ಸಮಯದಲ್ಲಿ ಇದು ಒಂದೇ ಕೋವಿಡ್ ಪ್ರಕರಣವನ್ನು ಹೊಂದಿಲ್ಲ
ಗವಿ ಗ್ರಾಮದ ವೈದ್ಯ ಡಾ.ಕ್ಸೇವಿಯರ್
ಗವಿ ಗ್ರಾಮದ ವೈದ್ಯ ಡಾ.ಕ್ಸೇವಿಯರ್

ಪಟ್ಟಣಮ್ತಿತ್ತ: ಶ್ರೀಮಂತ ವನ್ಯಜೀವಿ ಮತ್ತು ಪರಿಸರ-ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕೇರಳದ  ಸಣ್ಣ ಅರಣ್ಯ ಗ್ರಾಮವಾದ 'ಗವಿ' ಈ ಬಾರಿ ಬೇರೆ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ: ಈ ಸಮಯದಲ್ಲಿ ಇದು ಒಂದೇ ಕೋವಿಡ್ ಪ್ರಕರಣವನ್ನು ಹೊಂದಿಲ್ಲ.

ಸೀತಾತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 1 ಸಾವಿರ ಜನ ವಾಸವಿದ್ದಾರೆ., ಅದರಲ್ಲಿ 163 ಮಂದಿ ಟ್ರೈಬಲ್ಸ್ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಶ್ರೀಲಂಕಾ ತಮಿಳಿಯನ್ನರಿದ್ದಾರೆ.

ಗ್ರಾಮದ ಜನರು ಕಟ್ಟು ನಿಟ್ಟಾಗಿ ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ ಎಂದು ಸೀತಾತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ವಿನ್ಸೆಂಟ್ ಕ್ಸೇವಿಯರ್ ಹೇಳಿದ್ದಾರೆ.

ಫೇಸ್ ಮಾಸ್ಕ್, ಸಾಮಾಜಿಕ ಅಂತರ, ಹಾಗೂ ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಯಾರೋಬ್ಬರು ಇನ್ನೊಬ್ಬರ ಮನೆಗೆ ಹೋಗದೇ ತಮ್ಮ ಮನೆಯಲ್ಲಿಯೇ ತಾವಿರುತ್ತಾರೆ, ಇದೊಂದು ಅರಣ್ಯ ಗ್ರಾಮವಾಗಿರುವುದರಿಂದ ಪಟ್ಟಣಕ್ಕಾಗಲಿ ಅಥವಾ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಕ್ಸೇವಿಯರ್ ಕಳೆದ 19 ವರ್ಷದಿಂದ ಗವಿ ಗ್ರಾಮದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದು, ಪ್ರತಿ ವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿನ ಜನರಿಗೆ ಚೆಕ್ ಅಪ್ ಮಾಡುತ್ತಿರುತ್ತಾರೆ, ಸದ್ಯದ ಪರಿಸ್ಥಿತಿಯಲ್ಲಿ ಅವರೆಲ್ಲರೂ ಕ್ಷೇಮವಾಗಿದ್ದಾರೆ.

ದೇಶ ಮತ್ತು ರಾಜ್ಯದಲ್ಲಿ ಸದ್ಯ ಉಂಟಾಗಿರುವ ಕೋವಿಡ್ ಪರಿಸ್ಥಿತಿ ಈ ಗ್ರಾಮದ ಜನರಿಗೆ ತಿಳಿದಿಲ್ಲ, ನಮ್ಮ ಬಳಿ ಟಿವಿಯಿಲ್ಲ, ನೆಟ್ ರ್ಕ್ ಇರದ ಕಾರಣ ಮೊಬೈಲ್ ಕೂಡ ನಾವು ಬಳಸುವುದಿಲ್ಲ, ಇಲ್ಲಿನ ಪ್ರಾಥಮಿಕ ಆರೋಗ್ಯಾಧಿಕಾರಿ ಅವರು ನಮಗೆ ನೀಡಿದ ಮಾಹಿತಿ ಅನ್ವಯ ಅವರು ಹೇಳಿದ ಮುಂಜಾಗ್ರತೆ ಕ್ರಮ ಅನುಸರಿಸುತ್ತೇವೆ ಎಂದು ಶ್ರೀಲಂಕಾ ತಮಿಳು ಕುಟುಂಬದ ಯುವಕನೊಬ್ಬ ಹೇಳಿದ್ದಾನೆ.

ಈ ಹಿಂದೆ ಗವಿಯಲ್ಲಿ 700 ಲಂಕನ್ ತಮಿಳು ಕುಟುಂಬಗಳು ಇದ್ದವು ಮತ್ತು ಈಗ ಅವರ ಸಂಖ್ಯೆ 360 ಕುಟುಂಬಗಳಿಗೆ ಇಳಿದಿದೆ. ಈ ಮೊದಲು ಲಂಕಾಕ್ಕೆ ಹೋಗಿದ್ದ ತಮಿಳರನ್ನು 1964 ರಲ್ಲಿ ಉಭಯ ದೇಶಗಳ ನಡುವೆ ಮಾಡಿಕೊಂಡ ಒಪ್ಪಂದದ ಭಾಗವಾಗಿ ಮೊದಲು ಭಾರತಕ್ಕೆ ಕರೆತರಲಾಯಿತು.

ಶ್ರೀಲಂಕಾದ ತಮಿಳರು 70 ರ ದಶಕದಲ್ಲಿ ಗವಿಯಲ್ಲಿ ನೆಲೆಸಲು ಪ್ರಾರಂಭಿಸಿದರು ಮತ್ತು ಕಾಡಿನ ಒಂದು ಭಾಗವನ್ನು ತೆರವುಗೊಳಿಸುವ ಮೂಲಕ ಕೃಷಿಯನ್ನು ಪ್ರಾರಂಭಿಸಿದರು. ಪ್ರಸ್ತುತ, ಲಂಕಾ ತಮಿಳು ಕುಟುಂಬಗಳು ಕೇರಳ ಅರಣ್ಯ ಅಭಿವೃದ್ಧಿ ನಿಗಮದ ಏಲಕ್ಕಿ ತೋಟಗಳಲ್ಲಿ ಮತ್ತು ಗವಿ ಪರಿಸರ ಪ್ರವಾಸೋದ್ಯಮ ಯೋಜನೆಯಲ್ಲಿ ಕೆಲಸ ಮಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com