ಕಲಾವಿದನ ಪೆನ್-ಪೆನ್ಸಿಲ್ ನಲ್ಲಿ ಮೂಡುವ ಚಿತ್ತಾರ: ಉಡುಪಿಯ ಕಣ್ಮಣಿ ಈ ಶಿವರಾಜ್!

2017ರಲ್ಲಿ ಒಂದು ಬಾರಿ ಲಕ್ಷ್ಮಿ ರಾಥೋಡ್ ದೇವಸ್ಥಾನದ ಜಾತ್ರೆಗೆ ಹೋಗಿದ್ದಾಗ ಪೆನ್ನಿನ ಪ್ಯಾಕೆಟ್ ಒಂದು ಆಕೆಯ ಗಮನ ಸೆಳೆದಿತ್ತು. ಹಿರಿಯರ ಒತ್ತಾಯದ ಮೇರೆಗೆ ತನ್ನ 12 ವರ್ಷದ ಮಗ ಶಿವರಾಜ್ ಗೆ ಆ ಪೆನ್ನಿನ ಪ್ಯಾಕೆಟ್ ನ್ನು ಖರೀದಿಸಿ ತಂದು ಕೊಟ್ಟಿದ್ದರು....
ಕಲಾವಿದ ಶಿವರಾಜ್
ಕಲಾವಿದ ಶಿವರಾಜ್

ಉಡುಪಿ: 2017ರಲ್ಲಿ ಒಂದು ಬಾರಿ ಲಕ್ಷ್ಮಿ ರಾಥೋಡ್ ದೇವಸ್ಥಾನದ ಜಾತ್ರೆಗೆ ಹೋಗಿದ್ದಾಗ ಪೆನ್ನಿನ ಪ್ಯಾಕೆಟ್ ಒಂದು ಆಕೆಯ ಗಮನ ಸೆಳೆದಿತ್ತು. ಹಿರಿಯರ ಒತ್ತಾಯದ ಮೇರೆಗೆ ತನ್ನ 12 ವರ್ಷದ ಮಗ ಶಿವರಾಜ್ ಗೆ ಆ ಪೆನ್ನಿನ ಪ್ಯಾಕೆಟ್ ನ್ನು ಖರೀದಿಸಿ ತಂದು ಕೊಟ್ಟಿದ್ದರು. ಕೇವಲ 5 ರೂಪಾಯಿ ಕೊಟ್ಟು ತಂದ ಪೆನ್ನಿನ ಪ್ಯಾಕೆಟ್ ನಿಂದ ಮಗನ ಭವಿಷ್ಯವೇ ಬದಲಾಗುತ್ತದೆ ಎಂದು ಆ ತಾಯಿ ಲಕ್ಷ್ಮಿಗೆ ಅಂದು ಒಂದು ಚೂರೂ ಅನಿಸಿರಲಿಲ್ಲ.

ಇಂದು ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಶಿವರಾಜ್ ಹವಾ ಸೃಷ್ಟಿಸಿದ್ದಾನೆ. ಕೇವಲ ಒಂದು ವರ್ಷದಲ್ಲಿ 53 ಸಾವಿರ ವೀಕ್ಷಕರನ್ನು ಆತ ಸಂಪಾದಿಸಿದ್ದಾನೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ತನ್ನ ಶಿವರಾಜ್ ದ ಆರ್ಟಿಸ್ಟ್ ಪೇಜ್ ನಡಿ 106 ರೀಲ್ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದ. ಇದು ಸಾಕಷ್ಟು ಜನಪ್ರಿಯತೆ ಪಡೆಯಿತು.

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಕಲ್ಯ ಪ್ರದೇಶದಲ್ಲಿ ಹಸಿರು ಪ್ರಕೃತಿಯ ನಡುವೆ ಇರುವ ತನ್ನ ಮನೆಯೇ ಆತನಿಗೆ ಪ್ರೋತ್ಸಾಹದಾಯಕವಾಗಿದೆ. ಪ್ರಕೃತಿಯೊಂದಿಗೆ ಬೆರೆತು ಅದನ್ನು ಮರುಸೃಷ್ಟಿಸುವತ್ತ ಆತನ ಆಸಕ್ತಿ ಹೊಳೆಯಿತು. ಆತ ರೇಖಾಚಿತ್ರಗಳನ್ನು ರಚಿಸುತ್ತಾನೆ ಮತ್ತು ಹಲವಾರು ವಿಧದ ಅಂಗರಚನಾಶಾಸ್ತ್ರದ ಸರಿಯಾದ ಚಿತ್ರಗಳನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿದ್ದಾನೆ.

ಹೇಗೆ ತನ್ನ ಕಲೆಯನ್ನು ಅಭಿವ್ಯಕ್ತಿಗೊಳಿಸುತ್ತಾನೆ?: ರಾತ್ರಿ ಹೊತ್ತಿನಲ್ಲಿ ಚಿತ್ರದ ಮೂಲ ಪ್ರಾಥಮಿಕ ಹಂತದ ರೇಖೆಗಳನ್ನು ಬಿಡಿಸಿ ಹಗಲು ಹೊತ್ತಿನಲ್ಲಿ ಅದಕ್ಕೆ ವಿವರವಾಗಿ ಶೇಡ್ ಗಳನ್ನು ಬಿಡಿಸುತ್ತಾನೆ. ಪೆನ್ನು ಬಳಸಿ ಒಂದು ಭಾಗದ ಕಲೆಯನ್ನು ಪೂರ್ಣಗೊಳಿಸಲು ಮೂರು ಗಂಟೆ ತೆಗೆದುಕೊಳ್ಳುವ ಶಿವರಾಜ್ ಪೆನ್ಸಿಲ್ ಸ್ಕೆಚ್ ಗೆ ಮತ್ತೊಂದು ಅಷ್ಟು ಹೊತ್ತು ತೆಗೆದುಕೊಳ್ಳುತ್ತಾನೆ.

''ಪೆನ್ನು ಬಳಸುವಾಗ ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿ ಚಿತ್ರ ಮೂಡುತ್ತದೆ, ಪೆನ್ಸಿಲ್ ಅಳಿಸಲು ಮತ್ತು ಪುನಃ ಚಿತ್ರಿಸಲು ನನಗೆ ಅವಕಾಶವನ್ನು ನೀಡುತ್ತದೆ, ಆದ್ದರಿಂದ ರೇಖಾಚಿತ್ರದ ಪ್ರಕ್ರಿಯೆಯು ದೀರ್ಘವಾಗುತ್ತದೆ ಎನ್ನುತ್ತಾನೆ. 8ನೇ ತರಗತಿಯಲ್ಲಿ ಕಾಪುವಿನ ಆನಂದತೀರ್ಥ ಹೈಸ್ಕೂಲ್ ನಲ್ಲಿ ಓದುವಾಗ ಅವನೊಳಗಿದ್ದ ಕಲೆ ಅನಾವರಣಗೊಂಡಿತು. ಅದು ಒಂದೆರಡು ದಿನಗಳಲ್ಲಿ ಆದದ್ದಲ್ಲ. ಮೊದಲ ಪೆನ್ಸಿಲ್ ಸ್ಕೆಚ್ ಮುಗಿಸಲು ವಾರ ಹಿಡಿಯಿತು. ಆರಂಭದಲ್ಲಿ ಪೆನ್ ಮತ್ತು ಪೆನ್ಸಿಲ್ ಸ್ಕೆಚ್ ಮಾಡಲು ನನ್ನಷ್ಟಕ್ಕೆ ಆರಂಭಿಸಿದರೂ ಕೂಡ ನಂತರ ಕಲೆ ಮತ್ತು ಡ್ರಾಯಿಂಗ್ ಕ್ಲಾಸ್ ಗೆ ಸೇರಿಕೊಂಡೆ ಎಂದು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಶಿವರಾಜ್ ಹೇಳುತ್ತಾನೆ.

ಶಿವರಾಜ್ 2019ರ ನವೆಂಬರ್ ನಲ್ಲಿ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿದ ಡ್ರಾಯಿಂಗ್ ಗ್ರೇಡ್ ಲೋವರ್ ಪರೀಕ್ಷೆಗೆ ಹಾಜರಾಗಿದ್ದನು, 600 ಅಂಕಗಳಲ್ಲಿ 504 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ. ಶಿವರಾಜ್ ಮುಂದೆ ಡ್ರಾಯಿಂಗ್ ಹೈ ಗ್ರೇಡ್ ಪರೀಕ್ಷೆಯನ್ನು ಬರೆಯುವ ಯೋಜನೆ ಹೊಂದಿದ್ದಾನೆ.

ಇಲ್ಲಿಯವರೆಗೆ, ಶಿವರಾಜ್ ಪೆನ್ ಅಥವಾ ಪೆನ್ಸಿಲ್ ಬಳಸಿ 200 ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಾನೆ. ಆತನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹ್ಯಾಂಡಲ್  ಶಿವರಾಜ್ 003157 ಕಲಾಕೃತಿಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ತಾನು ಈಗ ಪ್ರಕೃತಿಯತ್ತ ಗಮನ ಹರಿಸುತ್ತೇನೆ ಎಂದು ಶಿವರಾಜ್ ಹೇಳುತ್ತಿದ್ದಾನೆ. ಯಾವುದೇ ಉಲ್ಲೇಖಿತ ಛಾಯಾಚಿತ್ರಗಳಿಲ್ಲದೆ, ನಾನು ಪ್ರಕೃತಿಯನ್ನು ದೃಶ್ಯೀಕರಿಸಬಹುದು ಮತ್ತು ಅದನ್ನು ನನ್ನ ರೇಖಾಚಿತ್ರಗಳಲ್ಲಿ ಪುನರಾವರ್ತಿಸಬಹುದು ಎನ್ನುತ್ತಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com