"ಚ್ಯೂಯಿಂಗಮ್ ಜಗಿಯಿರಿ ಕೊರೋನಾ ತಡೆಯಿರಿ" ಎನ್ನುತ್ತಿದ್ದಾರೆ ಸಂಶೋಧಕರು! 

ಕೋವಿಡ್-19 ಪ್ರಸರಣ ತಡೆಗೆ ಸಂಶೋಧಕರು ಹೊಸ ಮದ್ದು ಕಂಡುಹಿಡಿದಿದ್ದಾರೆ.
ಕೋವಿಡ್-19 (ಸಂಗ್ರಹ ಚಿತ್ರ)
ಕೋವಿಡ್-19 (ಸಂಗ್ರಹ ಚಿತ್ರ)

ನವದೆಹಲಿ: ಕೋವಿಡ್-19 ಪ್ರಸರಣ ತಡೆಗೆ ಸಂಶೋಧಕರು ಹೊಸ ಮದ್ದು ಕಂಡುಹಿಡಿದಿದ್ದಾರೆ. ಪೆನ್ಸ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್ ನ ಹೆನ್ರಿ ಡೇನಿಯಲ್ ಹಾಗೂ ಇನ್ನಿತರ ಸಂಸ್ಥೆಗಳು ಜೊತೆಗೂಡಿ ಅಭಿವೃದ್ಧಿಪಡಿಸಲಾಗಿರುವ ಚ್ಯೂಯಿಂಗಮ್ ನಿಂದಾಗಿ ಕೊರೋನಾ ತಡೆಯಬಹುದಾಗಿದೆ. 

ಚ್ಯೂಯಿಂಗ್ ಗಮ್ ಜೊತೆಗೆ ಸಸ್ಯದಿಂದ ಬೆಳೆದ ಪ್ರೋಟೀನ್ ನ್ನು ಸೇರಿಸಲಾಗಿದ್ದು, ಇದು SARS-CoV-2 ವೈರಾಣುವಿಗೆ ಟ್ರ್ಯಾಪ್ ರೀತಿಯಲ್ಲಿ ಕೆಲಸ ಮಾಡುತ್ತದೆಯಷ್ಟೇ ಅಲ್ಲದೇ ಅದರ ಪ್ರಸರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಈ ಸಂಬಂಧ ನಡೆದಿರುವ ಅಧ್ಯಯನ ವರದಿಯನ್ನು ಮಾಲಿಕ್ಯುಲರ್ ಥೆರೆಪಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. 

ಲಾಲಾರಸ ಗ್ರಂಥಿಗಳಲ್ಲಿ SARS-CoV-2 ವೈರಾಣು ಪುನರಾವರ್ತನೆಯಾಗುತ್ತದೆ (ದ್ವಿಗುಣಗೊಳ್ಳುತ್ತದೆ) ಮತ್ತು ಈಗಾಗಲೇ ನಮಗೆ ತಿಳಿದಿರುವಂತೆ ಕೋವಿಡ್-19 ಸೋಂಕಿತ ವ್ಯಕ್ತಿ ಕೆಮ್ಮಿದರೆ ಅಥವಾ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದರೆ ಅವರಿಗೂ ಕೋವಿಡ್-19 ಸೋಂಕು ಹರಡುತ್ತದೆ.
 
ಆದರೆ ಈ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಲಾಲಾರಸದಲ್ಲಿನ ವೈರಾಣುಗಳು ಸಾವನ್ನಪ್ಪುತ್ತವೆ. ಈ ಮೂಲಕ ಸೋಂಕು ಪ್ರಮಾಣವನ್ನು ತಡೆಗಟ್ಟಬಹುದು ಎಂದು ಹೆನ್ರಿ ಡೇನಿಯಲ್ ಹೇಳಿದ್ದಾರೆ. 

ಕೋವಿಡ್-19 ಲಸಿಕೆಗಳಿಂದ ಸಾಂಕ್ರಾಮಿಕದ ಹಾದಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗಿದೆ. ಆದರೆ ಪ್ರಸರಣಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗಿಲ್ಲ. ಪೂರ್ಣಪ್ರಮಾಣದಲ್ಲಿ ಲಸಿಕೆ ಪಡೆದ ಹೊರತಾಗಿಯೂ ಕಡಿಮೆ ತೀವ್ರತೆಯಲ್ಲಿ ಕೋವಿಡ್-19 ಸೋಂಕು ಬಾಧಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com