ಕೊಪ್ಪಳ: ಸಂಗೀತಗಾರನ ಮಗಳ ಮದುವೆಗೆ ಹಣ ಸಂಗ್ರಹಿಸಲು ಗ್ರಾಮಸ್ಥರಿಂದ ನಾಟಕ ಪ್ರದರ್ಶನ
ಎರಡು ಬಾರಿ ಕೋವಿಡ್ ಲಾಕ್‌ಡೌನ್ ನಿಂದಾಗಿ ಗಾಯಕರು, ಸಂಗೀತಕಾರರು ಸೇರಿದಂತೆ ಗ್ರಾಮೀಣ ಭಾಗದ ಹಲವು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಕೊಪ್ಪಳ ಜಿಲ್ಲೆಯ ವಡಗನಾಳ್ ಗ್ರಾಮಸ್ಥರು ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ
Published: 08th December 2021 03:04 PM | Last Updated: 08th December 2021 04:48 PM | A+A A-

ಶಿವರಾಜ್ ಹೂಗಾರ್ ಗೌರವ ಸಲ್ಲಿಸುತ್ತಿರುವುದು
ಕೊಪ್ಪಳ: ಎರಡು ಬಾರಿ ಕೋವಿಡ್ ಲಾಕ್‌ಡೌನ್ ನಿಂದಾಗಿ ಗಾಯಕರು, ಸಂಗೀತಕಾರರು ಸೇರಿದಂತೆ ಗ್ರಾಮೀಣ ಭಾಗದ ಹಲವು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಕೊಪ್ಪಳ ಜಿಲ್ಲೆಯ ವಡಗನಾಳ್ ಗ್ರಾಮಸ್ಥರು ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ ಸಂಕಷ್ಟದಲ್ಲಿದ್ದ ಸಂಗೀತಗಾರ ಶಿವರಾಜ್ ಎಚ್.ಹೂಗಾರ್ ಅವರಿಗೆ ನೆರವು ನೀಡಿದ್ದಾರೆ.
ಲಾಕ್‌ಡೌನ್‌ಗಳಿಂದ ಥಿಯೇಟರ್ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಬಂದ್ ಮಾಡಿದ್ದರಿಂದ, ಹೆಚ್ಚಿನ ನಾಟಕ ಕಂಪನಿಗಳು ತೀವ್ರ ಸಂಕಷ್ಟ ಎದುರಿಸಿದವು.
ನಾಟಕಗಳಿಗೆ ಹಾರ್ಮೋನಿಯಂ ಮಾಸ್ಟರ್ ಆಗಿ, ನಾಟಕಗಳ ನಿರ್ದೇಶಕರಾಗಿ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದ
ವಡಗನಾಳ್ ಗ್ರಾಮದ ಶಿವರಾಜ್ ಹೂಗಾರ ಅವರು ಲಾಕ್‌ಡೌನ್ ನಂತರ ತಮ್ಮ ಮಗಳ ಮದುವೆ ಮಾಡಲು ಆರ್ಥಿಕ ಸಮಸ್ಯೆ ಎದುರಾಗಿತ್ತು.
ಇದನ್ನು ಅರಿತ ಗ್ರಾಮಸ್ಥರು ಶಿವರಾಜ್ ಅವರ ಮಗಳ ಮದುವೆಗೆ ಹಣ ಸಂಗ್ರಹಿಸಲು ಗ್ರಾಮಸ್ಥರು ತಮ್ಮದೇ ಖರ್ಚಿನಲ್ಲಿ ‘ಮೈದುನ ತಂದ ಮಾಂಗಲ್ಯ’ ಎಂಬ ನಾಟಕವನ್ನು ಪ್ರದರ್ಶಿಸಲು ಮುಂದೆ ಬಂದರು. ಡಿಸೆಂಬರ್ 7 ರ ರಾತ್ರಿ ನಾಟಕವನ್ನು ಆಯೋಜಿಸಲಾಗಿದೆ. ನಾಟಕಕ್ಕೆ ಪ್ರವೇಶ ಉಚಿತವಾಗಿದ್ದರೂ, ಸಂಘಟಕರು ಈ ಕಾರಣಕ್ಕಾಗಿ ಕೊಡುಗೆ ನೀಡುವಂತೆ ಮನವಿ ಮಾಡಿದರು ಮತ್ತು ಪರೋಪಕಾರಿಗಳನ್ನು ಆಹ್ವಾನಿಸಿದರು.
ನಾಟಕಕಾರ ಬಸವರಾಜ ಸವದತ್ತಿ ಅವರು ಚಿತ್ರಕಥೆ ಬರೆದಿದ್ದು, ಈ ನಾಟಕಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೇ ಪ್ರದರ್ಶನದಲ್ಲಿ ಸುಮಾರು 11 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, 12 ಮಂದಿ ರಂಗಭೂಮಿ ಕಲಾವಿದರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದು, ತಲಾ 3000 ರೂಪಾಯಿಗಳನ್ನು ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಥಳೀಯ ಜಿ.ಪಂ.ಸದಸ್ಯ ತೊಮ್ಮನಗೌಡ ಮಾತನಾಡಿ, ಶಿವರಾಜ್ ಹೂಗಾರ್ ಅವರು ತಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಮಾತಾಗಿದ್ದಾರೆ. ವಾಸ್ತವವಾಗಿ, ಕಾರ್ಯಕ್ರಮಕ್ಕೆ ವ್ಯಾಪಕ ಆಫ್‌ಲೈನ್ ಮತ್ತು ಆನ್‌ಲೈನ್ ಪ್ರಚಾರವನ್ನು ಖಾತ್ರಿಪಡಿಸಿದ್ದರಿಂದ ನೆರೆಯ ಗದಗ ಮತ್ತು ಬಳ್ಳಾರಿ ಜಿಲ್ಲೆಯಿಂದಲೂ ಪ್ರೇಕ್ಷಕರು ಬಂದರು. ತಮ್ಮ ತಮ್ಮ ಜಿಲ್ಲೆಗಳಲ್ಲೂ ಪ್ರದರ್ಶನಕ್ಕೆ ಕೋರಿದ್ದಾರೆ ಎಂದು ತಿಳಿಸಿದರು.
ಗ್ರಾಮಸ್ಥರು ಶಿವನರಾಜ್ ಅವರನ್ನು ಕೋವಿಡ್ ಸಂಕಷ್ಟದಿಂದ ಪಾರು ಮಾಡಿ ಅವರ ಮಗಳ ಮದುವೆ ಮಾಡಲು ಬಯಸಿದ್ದರು. ಉತ್ತರ ಕರ್ನಾಟಕದ ರಂಗ ಪ್ರೇಮಿಗಳಲ್ಲಿ ಇಂದಿಗೂ ಔದಾರ್ಯ ಜೀವಂತವಾಗಿದೆ ಎಂಬುದಕ್ಕೆ ಇದು ನಿದರ್ಶನ ಎಂದಿದ್ದಾರೆ.
ಇನ್ನೂ ಶಿವರಾಜ್ ಹೂಗಾರ ಮಾತನಾಡಿ, ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರಂಗ ಪ್ರೇಮಿಗಳಿಗೆ ನಾನು ಚಿರರುಣಿ ಎಂದಿದ್ದಾರೆ.