ಮೊದಲ ಸಿಖ್ ಮಹಿಳಾ ಪೊಲೀಸ್ ಅಧಿಕಾರಿಯ 50ನೇ ವರ್ಷಾಚರಣೆ ಆಚರಿಸಿದ ಸ್ಕಾಟ್ ಲ್ಯಾಂಡ್ ಯಾರ್ಡ್!

ದಕ್ಷಿಣ ಏಷ್ಯಾದ ಮೊದಲ ಹಾಗೂ ಸಿಖ್ ಮಹಿಳಾ ಪೊಲೀಸ್ ಅಧಿಕಾರಿ ಕಾರ್ಪಲ್ ಕೌರ್ ಸಂಧು ಸೇವೆಗೆ ಸೇರ್ಪಡೆಯಾದ 50ನೇ ವರ್ಷಾಚರಣೆಯನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ನಲ್ಲಿ ಸೋಮವಾರ ಆಚರಿಸಲಾಯಿತು. 

Published: 02nd February 2021 08:44 PM  |   Last Updated: 02nd February 2021 08:44 PM   |  A+A-


Karpal_Kaur_Sandhu1

ಕಾರ್ಪಲ್ ಕೌರ್ ಸಂಧು

Posted By : Nagaraja AB
Source : The New Indian Express

ಲಂಡನ್: ದಕ್ಷಿಣ ಏಷ್ಯಾದ ಮೊದಲ ಹಾಗೂ ಸಿಖ್ ಮಹಿಳಾ ಪೊಲೀಸ್ ಅಧಿಕಾರಿ ಕಾರ್ಪಲ್ ಕೌರ್ ಸಂಧು ಸೇವೆಗೆ ಸೇರ್ಪಡೆಯಾದ 50ನೇ ವರ್ಷಾಚರಣೆಯನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ನಲ್ಲಿ ಸೋಮವಾರ ಆಚರಿಸಲಾಯಿತು. 

1971 ಮತ್ತು 1973ರ ನಡುವೆ ಲಂಡನ್ ನ ಮೆಟ್ರೋ ಪಾಲಿಟನ್ ಪೊಲೀಸ್ ನಲ್ಲಿ ಸಂದು ಪೊಲೀಸ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸುವ ಮೂಲಕ ಇಂಗ್ಲೆಂಡ್ ನಾದ್ಯಂತ ಪೊಲೀಸ್ ಪಡೆಯ ನಿಜವಾದ ಪ್ರವರ್ತಕಿ ಎಂದೇ ಬಣ್ಣಿಸಲಾಗುತ್ತದೆ.

ಪೊಲೀಸ್ ಕಾನ್ಸ್ ಟೇಬಲ್  ಕಾರ್ಪಾಲ್ ಕೌರ್ ಸಂಧು ನಿಜವಾದ ಪ್ರವರ್ತಕರು .1971 ರಲ್ಲಿ ಮೆಟ್ರೋಪಾಲಿಟನ್ ಪೊಲೀಸ್ ಸೇರ್ಪಡೆಗೊಳ್ಳುವ ಅವರ ನಿರ್ಧಾರ ಎದೆಗಾರಿಕೆಯುಳ್ಳವಂತರದ್ದು, ತಮ್ಮ ಸೇವೆಯುದ್ದಕ್ಕೂ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ ಎಂದು ಸಹಾಯಕ ಆಯುಕ್ತ ಹೆಲೆನ್ ಬಾಲ್ ಹೇಳಿದ್ದಾರೆ.

ಬ್ರಿಟನ್ ಮಚ್ಚು ಮೆಟ್ರೋ ಪಾಲಿಟನ್ ನ ಮೊದಲ ಏಷ್ಯಾದ ಮಹಿಳಾ ಅಧಿಕಾರಿಯಾಗಿ ಕಾರ್ಪಲ್ , 1971ರಿಂದ ಹಲವು ಮಂದಿಗೆ ದಾರಿ ತೋರಿಸಿದ್ದಾರೆ.  ಸಂಧು ಮೆಟ್ರೋ ಪಾಲಿಟನ್  ಪೊಲೀಸ್ ಗೆ ಸೇರ್ಪಡೆಯಾಗಿ 50 ವರ್ಷ ತುಂಬಿದ ದಿನದಂದು ಅವರ ಜೀವನ, ವೃತ್ತಿಯನ್ನು ನೆನಪು ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್ ನ ಮೊದಲ ಸಿಖ್ ಪೊಲೀಸ್ ಅಧಿಕಾರಿ ಕಾರ್ಪಾಲ್  ಕೌರ್ ಪೊಲೀಸ್ ಸೇವೆಗೆ ಸಲ್ಲಿಸಿರುವ ವಿಶೇಷ ಕೊಡುಗೆಯನ್ನು ಮೆಟ್ರೋ ಪಾಲಿಟನ್ ಪೊಲೀಸ್ ಸಿಖ್ ಅಸೋಸಿಯೇಷನ್,  ಮೆಟ್ರೋ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿಶ್ವದಾದ್ಯಂತ ಇರುವ ಸಿಖ್ ಸಮುದಾಯ ಒಗ್ಗಟ್ಟಾಗಿ ನೆನಪು ಮಾಡಿಕೊಳ್ಳುತ್ತಿರುವುದಾಗಿ ಮೆಟ್ರೊ ಪಾಲಿಟನ್ ಪೊಲೀಸ್ ಸಿಖ್ ಅಸೋಸಿಯೇಷನ್ ಮುಖ್ಯಸ್ಥ ರಾಜೀವ್ ಗುಪ್ತಾ ಹೇಳಿದರು.

ಪೂರ್ವ ಆಫ್ರಿಕಾದ ಜಾಂಜಿಬಾರ್ ನಲ್ಲಿ ಸಿಖ್ ಕುಟುಂಬದಲ್ಲಿ 1943ರಲ್ಲಿ ಜನಿಸಿದ ಪಿಸಿ ಸಂಧು, 1962ರಲ್ಲಿ ಇಂಗ್ಲೆಂಡ್ ಬಂದು, ಚೇಸ್ ಫಾರ್ಮ್ ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗಕ್ಕೆ ಸೇರಿಕೊಂಡಿದ್ದರು. 1971ರಲ್ಲಿ 27 ನೇ ವಯಸ್ಸಿನಲ್ಲಿ ಮೆಟ್ರೋ ಪಾಲಿಟನ್ ಪೊಲೀಸ್ ಗೆ ಸೇರ್ಪಡೆಯಾದರು.

ಸಿಖ್ ಕುಟುಂಬ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ತಾಯಿಯಾಗಿರುವುದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ.  ಆಕೆ ಸೇವೆಗೆ ಸೇರಿ 50 ವರ್ಷ ತುಂಬಿರುವುದು ಆಶ್ಚರ್ಯವಾಗಿದೆ. ಮೆಟ್ರೋ ಪಾಲಿಟನ್ ಪೊಲೀಸ್ ಸೇವೆಗೆ ಸೇರಬಯಸುವ ಯುವ ಜನಾಂಗಕ್ಕೆ ಅವರು ಸ್ಪೂರ್ತಿಯಾಗಿದ್ದಾರೆ ಎಂದು ಕಾರ್ಪಲ್ ಕೌರ್ ಸಂಧು ಪುತ್ರಿ ರೊಮಿ ಸಂಧು ಸಂತಸ ವ್ಯಕ್ತಪಡಿಸಿದ್ದಾರೆ.

1973 ನವೆಂಬರ್ ನಲ್ಲಿ ಕಾರ್ಪಲ್ ಕೌರ್ ಸಂಧು ದುರಂತ ಘಟನೆಯಲ್ಲಿ ಸಾವನ್ನಪ್ಪಿದದ್ದು,ದು:ಖಕರ ಸಂಗತಿ. ಉಜ್ವಲ ಭವಿಷ್ಯವನ್ನು ಹೊಂದಿದ್ದ ಭರವಸೆಯ ಅಧಿಕಾರಿಯನ್ನು ಪೊಲೀಸ್ ಪಡೆ ಕಳೆದುಕೊಂಡಿತ್ತು ಎಂದು ಮೆಟ್ರೋ ಪಾಲಿಟನ್ ಪೊಲೀಸ್  ಹೇಳಿದೆ. 
ಸಂಧು ವೃತ್ತಿ ಜೀವನ ವಿರೋಧಿಸುತ್ತಿದ್ದ ಆಕೆಯ ಪತಿಯೇ  30ನೇ ವಯಸ್ಸಿನಲ್ಲಿಯೇ ಕಾರ್ಪಲ್ ಕೌರ್ ಸಂಧು ಅವರನ್ನು ಹತ್ಯೆ ಮಾಡುತ್ತಾನೆ. ನಂತರ 1974ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. 


Stay up to date on all the latest ವಿಶೇಷ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp