ಶ್ವಾನಗಳಿಂದ ಕೊರೋನಾ ಸೋಂಕು ಪತ್ತೆ; ಭಾರತೀಯ ಸೇನೆ ತರಬೇತಿ ಹೀಗಿದೆ, ವಿಡಿಯೋ!
ಕೊರೋನಾ ಸೋಂಕು ತಗುಲಿದಿಯಾ ಎಂಬುದನ್ನು ತಿಳಿಯಬೇಕಾದರೆ ಒಂದೆರೆಡು ದಿನ ಕಾಯಬೇಕಾಗುತ್ತದೆ. ಆದರೆ ನಮ್ಮ ಭಾರತೀಯ ಸೇನೆ ಶ್ವಾನಗಳಿಗೆ ನೀಡಿದ ತರಬೇತಿಯಲ್ಲಿ ಕೆಲ ನಿಮಿಷಗಳಲ್ಲೇ ನಿಖರ ವರದಿ ತಿಳಿಯುವ ಸಾಧ್ಯತೆಗಳು ಹೆಚ್ಚಿದೆ.
Published: 10th February 2021 12:11 AM | Last Updated: 10th February 2021 04:31 PM | A+A A-

ಸೇನೆಯ ಶ್ವಾನಗಳು
ನವದೆಹಲಿ: ಕೊರೋನಾ ಸೋಂಕು ತಗುಲಿದಿಯಾ ಎಂಬುದನ್ನು ತಿಳಿಯಬೇಕಾದರೆ ಒಂದೆರೆಡು ದಿನ ಕಾಯಬೇಕಾಗುತ್ತದೆ. ಆದರೆ ನಮ್ಮ ಭಾರತೀಯ ಸೇನೆ ಶ್ವಾನಗಳಿಗೆ ನೀಡಿದ ತರಬೇತಿಯಲ್ಲಿ ಕೆಲ ನಿಮಿಷಗಳಲ್ಲೇ ನಿಖರ ವರದಿ ತಿಳಿಯುವ ಸಾಧ್ಯತೆಗಳು ಹೆಚ್ಚಿದೆ.
ಮನುಷ್ಯನ ಮೂತ್ರ ಮತ್ತು ಬೆವರಿನ ಮಾದರಿ ವಾಸನೆಯ ಮೂಲಕವೇ ಸೋಂಕನ್ನು ಪತ್ತೆ ಹಚ್ಚುವ ತರಬೇತಿಯನ್ನು ಶ್ವಾನಗಳಿಗೆ ನೀಡುತ್ತಿರುವುದಾಗಿ ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕಾಗಿ ಮೂರು ಶ್ವಾನಗಳನ್ನು ಭಾರತೀಯ ಸೇನೆ ಆಯ್ಕೆ ಮಾಡಿಕೊಂಡಿದೆ. ಒಂದು ಶ್ವಾನ ವಿದೇಶಿಯದ್ದಾದರೆ, ಇನ್ನೆರೆಡು ಶ್ವಾನಗಳು ದೇಶೀಯವಾಗಿವೆ. ಎರಡು ವರ್ಷದ ಕಾಸ್ಪರ್, ಒಂದು ವರ್ಷದ ಜಯಾ, ಮಣಿ ಎಂಬ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇವುಗಳ ಪೈಕಿ ಜಯಾ ಮತ್ತು ಕಾಸ್ಪರ್ ಶ್ವಾನಗಳಿಗೆ ತರಬೇತಿ ಪೂರ್ಣಗೊಂಡಿದ್ದು ಮಣಿಗೆ ಇನ್ನು ತರಬೇತಿ ನಡೆಯುತ್ತಿದೆ.
ಕೊರೋನಾ ಪೀಡಿತ ರೋಗಿಗಳ ಬೆವರು ಮತ್ತು ಮೂತ್ರದಿಂದ ಹೊಮ್ಮುವ ನಿರ್ದಿಷ್ಟ ಬಯೋಮಾರ್ಕರ್ ಪರಿಗಣಿಸಿ ತರಬೇತಿ ನೀಡಲಾಗುತ್ತಿದೆ. ತರಬೇತಿ ವೇಳೆ ಶ್ವಾನಗಳಿಂದ 95ರಷ್ಟು ನಿಖರವಾಗಿ ಫಲಿತಾಂಶ ನೀಡಿವೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.