ಮೈಸೂರು: ರಾಷ್ಟ್ರಮಟ್ಟದ ಕಲಾ ಉತ್ಸವದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯ ಕಲೆಗೆ ಪುರಸ್ಕಾರ!
ಕೋವಿಡ್-19 ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುವುದೆಂದು ಬಹುತೇಕ ಮಕ್ಕಳಿಗೆ ಸಮಸ್ಯೆಯಾದರೆ ಈ ವಿರಾಮದ ಸಮಯವನ್ನೇ ಮೈಸೂರಿನ ವಿದ್ಯಾರ್ಥಿನಿಯೊಬ್ಬಳು ಸದುಪಯೋಗಪಡಿಸಿಕೊಂಡು ಹೆಸರು ಗಳಿಸಿದ್ದಾಳೆ.
Published: 12th February 2021 12:47 PM | Last Updated: 12th February 2021 01:10 PM | A+A A-

ತನ್ನ ಶಿಕ್ಷಕಿಯೊಂದಿಗೆ ಚಂದನಾ
ಮೈಸೂರು: ಕೋವಿಡ್-19 ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುವುದೆಂದು ಬಹುತೇಕ ಮಕ್ಕಳಿಗೆ ಸಮಸ್ಯೆಯಾದರೆ ಈ ವಿರಾಮದ ಸಮಯವನ್ನೇ ಮೈಸೂರಿನ ವಿದ್ಯಾರ್ಥಿನಿಯೊಬ್ಬಳು ಸದುಪಯೋಗಪಡಿಸಿಕೊಂಡು ಹೆಸರು ಗಳಿಸಿದ್ದಾಳೆ.
ಇತ್ತೀಚೆಗೆ ರಾಷ್ಟ್ರಮಟ್ಟದ ಕಲಾ ಸ್ಪರ್ಧೆಯಲ್ಲಿ ತಿರುಳಿನಲ್ಲಿ ವಿವಿಧ ಕಲೆ ಮಾಡಿ ಬಹುಮಾನ ಗಳಿಸಿ ತನ್ನ ಪೋಷಕರಿಗೆ, ಊರಿಗೆ ಹೆಸರು ತಂದಿದ್ದಾಳೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಸರಗೂರು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚಂದನಾ ಎ, ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷ ಅಭಿಯಾನ ಕಾರ್ಯಕ್ರಮದಡಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಲಾ ಉತ್ಸವದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಸ್ವದೇಶಿ ಆಟಿಕೆಗಳು ಮತ್ತು ಆಟಗಳು ವಿಭಾಗದಡಿ ಚಂದನಾ ಮಾಡಿರುವ ಕರಕುಶಲ ಕಲೆಗೆ ಬಹುಮಾನ ಸಿಕ್ಕಿದೆ.
ಟೈಲರ್ ಒಬ್ಬರ ಮಗಳಾಗಿರುವ ಚಂದನಾಳಲ್ಲಿರುವ ದೃಢ ವಿಶ್ವಾಸ, ಶ್ರದ್ಧೆ, ಆಸಕ್ತಿ ಆಕೆಯನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಆಕೆಯ ಗ್ರಾಮದಲ್ಲಿ ಸರಿಯಾದ ವಿದ್ಯುತ್ ಪೂರೈಕೆಯ ವ್ಯವಸ್ಥೆಯಿಲ್ಲ, ದೊಡ್ಡ ದೊಡ್ಡ ಯಂತ್ರಗಳ ಸಹಾಯವಿಲ್ಲದೆ ತನ್ನ ಕೈಗೆ ಸಿಕ್ಕಿದ ಅಲ್ಪ ಸೌಕರ್ಯದಲ್ಲಿ ಕನಸಿನ ಬೆನ್ನತ್ತಿ ಇಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾಳೆ.
ಇದೇ ಮೊದಲ ಬಾರಿಗೆ ನಾವು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಬಹುಮಾನವನ್ನು ಗೆಲ್ಲಲು ಸಾಧ್ಯವಾಯಿತು ಎಂದು ನಮಗೆ ಸಂತೋಷವಾಗಿದೆ. ಸ್ಪರ್ಧೆಗೆ ತಯಾರಿ ಮಾಡಲು ನಮಗೆ ಬಹಳ ಕಡಿಮೆ ಸಮಯವಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ನಮಗೆ ಕಷ್ಟಕರವಾಗಿತ್ತು. ಇದಲ್ಲದೆ, ಚಂದನಾ ಅವರ ಹಳ್ಳಿಯಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಉಂಟಾಗುತ್ತಿತ್ತು, ಹಾಗಾಗಿ ನಾನು ಅವಳನ್ನು ಮೈಸೂರಿನ ನನ್ನ ನಿವಾಸಕ್ಕೆ ಕರೆದೊಯ್ದು ಅವಳು ನನ್ನೊಂದಿಗೆ ಮೂರು ದಿನಗಳ ಕಾಲ ಇದ್ದಳು ಎಂದು ಚಂದನಾರ ಕಲಾ ಶಿಕ್ಷಕಿ ಕೆ ಸಂಗೀತ ಹೇಳುತ್ತಾರೆ.
ತನ್ನ ಗೆಲುವಿಗೆ ಶಿಕ್ಷಕಿ ಕಾರಣ ಎಂದು ಚಂದನಾ ಹರ್ಷ ವ್ಯಕ್ತಪಡಿಸುತ್ತಾಳೆ, ನನ್ನಲ್ಲಿರುವ ಕಲೆಯ ಕೌಶಲ್ಯಕ್ಕೆ ಶಿಕ್ಷಕಿ ಪ್ರೋತ್ಸಾಹ ನೀಡಿದರು.ಜನರು ನನ್ನನ್ನು ಗುರುತಿಸಲು ಆರಂಭಿಸಿದ್ದಾರೆ ಎನ್ನುವ ಚಂದನಾಗೆ ಮುಂದೆ ವೈದ್ಯೆಯಾಗುವ ಕನಸಿದೆ.
ಶಾಲೆಯ ಮತ್ತೊಬ್ಬ ವಿದ್ಯಾರ್ಥಿನಿ ಐಶ್ವರ್ಯಾ ಜಿ ರಾಜ್ಯಮಟ್ಟದ ವಿಷುವಲ್ ಆರ್ಟ್ಸ್ 3-ಡಿ ಕ್ಲೇ ಮಾಡೆಲಿಂಗ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.