'ತಿರುಕ್ಕುರಳ್' ಕೃತಿಯ ಇಪ್ಪತ್ತು ಜೋಡಿಸಾಲನ್ನು ಹೇಳಿದರೆ ಒಂದು ಲೀಟರ್ ಪೆಟ್ರೋಲ್ ಉಚಿತ!

ದೇಶದ ಹಲವಾರು ಭಾಗಗಳಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆ ಮಧ್ಯಮ ವರ್ಗದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ತಮಿಳುನಾಡಿನ ಕರೂರ್‌ನಲ್ಲಿರುವ ಪೆಟ್ರೋಲ್ ಬಂಕ್ ಗ್ರಾಹಕರಿಗೆ ಉಚಿತ ಪೆಟ್ರೋಲ್ ನೀಡುವ ಆಫರ್ ಘೋಷಿಸಿದೆ! 

Published: 17th February 2021 02:53 PM  |   Last Updated: 17th February 2021 03:05 PM   |  A+A-


ಉಚಿತ ಪೆಟ್ರೋಲ್ ನೀಡುತ್ತಿರುವ ಪೆಟ್ರೋಲ್ ಬಂಕ್

Posted By : Raghavendra Adiga
Source : The New Indian Express

ಕರೂರ್ (ತಮಿಳುನಾಡು): ದೇಶದ ಹಲವಾರು ಭಾಗಗಳಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆ ಮಧ್ಯಮ ವರ್ಗದವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ತಮಿಳುನಾಡಿನ ಕರೂರ್‌ನಲ್ಲಿರುವ ಪೆಟ್ರೋಲ್ ಬಂಕ್ ಗ್ರಾಹಕರಿಗೆ ಉಚಿತ ಪೆಟ್ರೋಲ್ ನೀಡುವ ಆಫರ್ ಘೋಷಿಸಿದೆ! ತಮಿಳುನಾಡಿನ ಪಾರಂಪರಿಕ ಸಾಹಿತ್ಯವಾದ ತಮಿಳು ಕವಿ ಮತ್ತು ಸಂತ ತಿರುವಳ್ಳುವರ್ ಅವರ "ತಿರುಕ್ಕುರಳ್" ನ ಸಾಲುಗಳನ್ನು ಹೇಳುವ ಮಗುವಿನ ಪಾಲಕರಿಗೆ ಉಚಿತ ಪೆಟ್ರೋಲ್ ನೀಡುತ್ತಿದೆ.

ಒಂದು ಮಗುವಿಗೆ ತಿರುಕ್ಕುರಳ್ ನ 10 ಜೋಡಿ ಸಾಲುಗಳನ್ನು ಪಠಿಸಲು ಸಾಧ್ಯವಾದರೆ, ಅರ್ಧ ಲೀಟರ್ ಪೆಟ್ರೋಲ್, 20 ಜೋಡಿ ಸಾಲನ್ನು ಪಠಿಸಬಹುದಾದವರಿಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ.

ವಿಶೇಷವೆಂದರೆ, ಜನವರಿ 16 ರಂದು ತಿರುವಳ್ಳುವರ್ ದಿನಾಚರಣೆಯ ಗುರುತಾಗಿ ಈ ಪ್ರಯತ್ನ ಮಾಡಲಾಗಿತ್ತು.ಈ ಯೋಜನೆಯನ್ನು ಪರಿಚಯಿಸಿದಾಗಿನಿಂದ 176 ಜನರಿಗೆ ಉಚಿತ ಇಂಧನವನ್ನು ನೀಡಲಾಗಿದೆ. ಮಕ್ಕಳು ಪ್ರತಿ ಬಾರಿಯೂ ತಿರುವಳ್ಳುವರ್ ಅವರ ಕಾವ್ಯದ ವಿಭಿನ್ನ ಸಾಲುಗಳನ್ನು ಪಠಿಸಲು ಸಾಧ್ಯವಾದರೆ ಈ ರೀತಿಯ ಉಚಿತ ಪೆಟ್ರೋಲ್ ಅನ್ನು ಹೆಚ್ಚು ಹೆಚ್ಚು ಬಾರಿ ಪಡೆಯಬಹುದು. ಇನ್ನು . 1 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ಮಕ್ಕಳು ಏಪ್ರಿಲ್ 30 ರವರೆಗೆ ಮಾನ್ಯವಾಗಿರುವ ಈ ಆಫರ್ ಪಡೆಯಲು ಅವಕಾಶವಿದೆ

ಈ ಉಪಕ್ರಮದ ಮೂಲಕ, ಪೆಟ್ರೋಲ್ ಬಂಕ್ ಮಾಲೀಕರಾದ ಕೆ ಸೆಂಗುತ್ತುವನ್ ತಿರುಕ್ಕುರಳ್ ನ ಮಹತ್ವವನ್ನು ಕಲಿಸಲು ಮತ್ತು ಅರ್ಥಮಾಡಿಕೊಳ್ಳಲು ಮಕ್ಕಳನ್ನು ಪ್ರೇರೇಪಿಸುವ ಉದ್ದೇಶ ಹೊಂದಿದ್ದಾರೆ.

"ಪೆಟ್ರೋಲ್ ಬೆಲೆ ಪ್ರತಿ ಲೀ. ಗೆ 90 ರೂ.ಗಳನ್ನು ಮೀರಿದೆ, ಆದರೆ ಮಕ್ಕಳು ತಿರುಕ್ಕುರಳ್ ಪಠಿಸುವ ಮೂಲಕ ತಮ್ಮ ಹೆತ್ತವರ ಆರ್ಥಿಕ ಹೊರೆ ಇಳಿಸಲು ಸಾಧ್ಯವಾಗುವ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ನಾವು ಬಯಸಿದ್ದೇವೆ. ಈ ಯೋಜನೆಯು ಪೋಷಕರ ಗಮನವನ್ನು ಸೆಳೆಯುತ್ತದೆ, ಅವರು ತಮ್ಮ ಮಕ್ಕಳು ತಿರುಕ್ಕುರಳ್ಅನ್ನು ಉಚಿತ ಪೆಟ್ರೋಲ್ ಗಾಗಿ ಕಲಿಯುತ್ತಿದ್ದಾರೆಎಂದು ಖಚಿತಪಡಿಸಿಕೊಳ್ಳುತ್ತಾರೆ. ತಿರುಕ್ಕುರಳ್ ಕಡೆಗೆ ಮಕ್ಕಳಲ್ಲಿ ಆಸಕ್ತಿಯನ್ನು ಬೆಳೆಸುವುದು ನಮ್ಮ ಉದ್ದೇಶವಾಗಿತ್ತು ”ಎಂದು .ಸೆಂಗುತ್ತುವನ್ ಹೇಳಿದ್ದಾರೆ.

ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು 'ತಿರುಕ್ಕುರಳ್ ಜೀವನ ವಿಧಾನವನ್ನು ರೂಪಿಸುವ ದೃಷ್ಟಿಕೋನಕ್ಕಾಗಿ ನಾನು ನನ್ನ ಒಡೆತನದ ಒಡೆತನದ ಕರೂರಿನ ವಲ್ಲುವಾರ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ಗಮನಕ್ಕೂ ತರುತ್ತೇನೆ ಎಂದು ಅವರು ಹೇಳಿದ್ದಾರೆ. 

Stay up to date on all the latest ವಿಶೇಷ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp