ಮ್ಯಾನ್ಮಾರ್ ಗಡಿಯಲ್ಲಿ ಭಾರತದ ಕೊನೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ: ನೃತ್ಯ ಮಾಡಿ, ಹಬ್ಬ ಆಚರಿಸಿ ಸಂಭ್ರಮಿಸಿದ ಗ್ರಾಮಸ್ಥರು!

ನೋಕಿಯಾಂಗ್‌ ಗೆ ಇಂದು ಕನಸೊಂದು ನನಸಾದ ದಿನ. ತನ್ನ ಪಠ್ಯಪುಸ್ತಕಗಳನ್ನು ವಿದ್ಯುತ್ ಬಲ್ಬ್‌ನ ಬೆಳಕಿನಲ್ಲಿ ಓದುವ ಒಂದು ಹೊಸ ಅನುಭವಕ್ಕೆ ಸಾಕ್ಷಿಯಾಗಿದ್ದಾನೆ. ಇದು ಅವರ ತಂದೆಗೆ ಎಂದಿಗೂ ಸಾಧ್ಯವಾಗಿರಲಿಲ್ಲ.. 

Published: 20th February 2021 09:15 PM  |   Last Updated: 20th February 2021 09:16 PM   |  A+A-


Posted By : Raghavendra Adiga
Source : The New Indian Express

ಗುವಾಹಾಟಿ: ನೋಕಿಯಾಂಗ್‌ ಗೆ ಇಂದು ಹೊಸ ಬೆಳಕು ಮೂಡಿದ ದಿನ. ತನ್ನ ಪಠ್ಯಪುಸ್ತಕಗಳನ್ನು ವಿದ್ಯುತ್ ಬಲ್ಬ್‌ನ ಬೆಳಕಿನಲ್ಲಿ ಓದುವ ಒಂದು ಹೊಸ ಅನುಭವಕ್ಕೆ ಸಾಕ್ಷಿಯಾಗಿದ್ದಾನೆ. ಇದು ಅವರ ತಂದೆಗೆ ಎಂದಿಗೂ ಸಾಧ್ಯವಾಗಿರಲಿಲ್ಲ.. 

ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಶಿನ್ಯು ವಿನ ಮೂರನೇ ತಲೆಮಾರಿನ 10 ವರ್ಷದ ಮಗು ನೋಕಿಯಾಂಗ್‌ ಮತ್ತು ಅವರಂತಹ ಅನೇಕ ಮಕ್ಕಳು ಸಂಜೆ ವೇಳೆ ವಿದ್ಯುತ್ ದೀಪಗಳಿಂದ ಗ್ರಾಮವು ಬೆಳಗುವುದನ್ನು ಕಣ್ತುಂಬಿಕೊಂಡಿದ್ದಾರೆ. "ಮೊದಲು ಹೊರಹೋಗಲು ಕೇವಲ ಬಿದಿರಿನ ಟಾರ್ಚ್ ಮಾತ್ರವೇ ಇತ್ತು. ಈಗಹಲವಾರು ಸಾಧ್ಯತೆಗಳಿವೆ, ”ಎಂದು ನೋಕಿಯಾಂಗ್ ಅವರ ತಂದೆ ಚೆಮಾಂಗ್  ಹೇಳಿದ್ದಾರೆ.

ಕೃಷಿಕರಾದ ಚೆಮಾಂಗ್ ಹಾಗೂ ಇತರೆ ಗ್ರಾಮಸ್ಥರು ಹೊಲಗಳಿಂದ ದೂರ ಉಳಿದು ದಿನವಿಡೀ ನೃತ್ಯ ಮಾಡುವ ಮೂಲಕ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿದ ಸಭ್ರಮವನ್ನು ಆಚರಿಸಿದ್ದಾರೆ.

ಗ್ರಾಮದಲ್ಲಿ 60 ಮನೆಗಳು, ಒಂದು ಪ್ರಾಥಮಿಕ ಶಾಲೆ, ಅತಿಥಿ ಗೃಹ, ಸಮುದಾಯ ಭವನ ಮತ್ತು ಚರ್ಚ್ ಇದೆ. ಇದನ್ನು 1977 ರಲ್ಲಿ ಸ್ಥಾಪಿಸಲಾಯಿತು ಆದರೆ 2002 ರಲ್ಲಿ ರಾಜ್ಯ ಸರ್ಕಾರವು ಮಾನ್ಯತೆ ನೀಡಿತು.

ಸರಿಯಾದ ರಸ್ತೆ ಮೂಲಸೌಕರ್ಯಗಳ ಅನುಪಸ್ಥಿತಿಯಲ್ಲಿ, ಗ್ರಾಮವು ಕಷ್ಟದ ದಿನಗಳಿಗೆ ಸಾಕ್ಷಿಯಾಗಿತ್ತು.ಸಮೀಪದ ಗ್ರಾಮವಾದ ಯೋಂಗ್ಖಾವೊ 25 ಕಿ.ಮೀ ದೂರದಲ್ಲಿದೆ ಮತ್ತು ಹತ್ತಿರದ ಪಟ್ಟಣವಾದ ಟೋಬು ತಲುಪಲು 58 ಕಿಮೀ ಪ್ರಯಾಣಿಸಬೇಕು. ಚಳಿಗಾಲದಲ್ಲಿ ಕಾರಿನ ಮೂಲಕ ಪಟ್ಟಣವನ್ನು ತಲುಪಲು ನಾಲ್ಕೈದು ಗಂಟೆಗಳ ಸಮಯ ಹಿಡಿದರೆ ಬೇಸಿಗೆಯಲ್ಲಿ ಪ್ರಯಾಣದ ಸಮಯ ದ್ವಿಗುಣಗೊಳ್ಳುತ್ತದೆ.

ಮೋನ್ ಜಿಲ್ಲೆಯ ಈ ಗ್ರಾಮ್ದ ಎಲ್ಲಾ ಮನೆಗಳನ್ನು ಸೌರಶಕ್ತಿ ಬಳಸಿ ವಿದ್ಯುದೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತವಸೀಳನ್ ಕೆ ಹೇಳಿದರು.ಹಿಮಾಲಯನ್ ಗ್ಲೋಬಲ್ ಎಕ್ಸ್ಪೆಡಿಶನ್ ಜಿಲ್ಲಾಡಳಿತದೊಂದಿಗೆ ಸಹಭಾಗಿತ್ವ ವಹಿಸಿ 23 ಲಕ್ಷ ರೂ.ಗಳ ಯೋಜನೆಯನ್ನು ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಪೂರೈಸಿದೆ.

“ಸೌರ ದೀಪಗಳ ಅಳವಡಿಕೆಯು ಜನರ ಜೀವನವನ್ನು ಆಶಾದಾಯಕವಾಗಿ ಪರಿವರ್ತಿಸುತ್ತದೆ. ಹಿಮಾಲಯನ್ ಗ್ಲೋಬಲ್ ಎಕ್ಸ್ಪೆಡಿಶನ್  ದೂರದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ  ಸೌರಶಕ್ತಿಯ ಮೂಲಕ ಶುದ್ಧ ಇಂಧನ ಜಾಗವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ”ಎಂದು ಅವರು ಹೇಳಿದ್ದಾರೆ.

2013-14ರಲ್ಲಿ, ರಾಜ್ಯದ ವಿದ್ಯುತ್ ಇಲಾಖೆಯು ಗ್ರಾಮವನ್ನು ವಿದ್ಯುದ್ದೀಕರಿಸುವ ಪ್ರಯತ್ನವನ್ನು ಮಾಡಿತು ಆದರೆ ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಅದನ್ನು ಕೈಬಿಡಲಾಯಿತು.

74 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯ ಮುಖ್ಯ ಶಿಕ್ಷಕ ಜಾನ್ ಖಾಂಗ್ನ್ಯು, ಫೆಬ್ರವರಿ 16 ಗ್ರಾಮದ ಪಾಲಿಗೆ ಐತಿಹಾಸಿಕ ದಿನವಾಗಿ ಉಳಿಯಲಿದೆ ಎಂದರು. “ಯೋಜನೆಯ ಸ್ಥಾಪನೆಗೆ ಎಂಜಿನಿಯರ್‌ಗಳು ಸೇರಿದಂತೆ ಹತ್ತು ಜನರು ಬಂದಿದ್ದರು. ಎರಡು ದಿನಗಳ ನಂತರ ಇಬ್ಬರು ಹಿಂತಿರುಗಿದರೆ ಉಳಿದ ಎಂಟು ಜನರು ಐದು ದಿನಗಳ ಕಾಲ ಇದ್ದರು. ಅವರ ಆಹಾರ ಮತ್ತು ವಸತಿ ಸೌಕರ್ಯವನ್ನು ಸ್ಥಳೀಯರು ಏರ್ಪಡಿಸಿದ್ದಾರೆ ”ಎಂದು ಟೋಬು ಮೂಲದ ಖಾಂಗ್ನ್ಯು ಹೇಳಿದರು. “ಸ್ಥಳೀಯರು ಮೊದಲು ಕತ್ತಲೆಯಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಮನೆಗಳನ್ನು ಬೆಳಗಿಸಲು ಬಿದಿರಿನ ಟಾರ್ಚ್‌ಗಳನ್ನು ಬಳಕೆ ಮಾಡುತ್ತಿದ್ದರು.. ಈಗ, ಅವರು ಮನೆಯಲ್ಲಿ ಟೆಲಿವಿಷನ್ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ, ”ಅವರು ಹೇಳಿದರು.

ಇಡೀ ಹಳ್ಳಿಯಲ್ಲಿ ಮೂರು ನಾಲ್ಕು ಮೊಬೈಲ್ ಫೋನ್‌ಗಳಿವೆ ಆದರೆ ನೆಟ್ ವರ್ಕ್ ಅನಿಶ್ಚಿತವಾಗಿರುತ್ತದೆ.ಈ ಮೊದಲು ಸೌರ ಫಲಕಗಳನ್ನು ಸ್ಥಾಪಿಸಿದ ಮನೆಯಲ್ಲಿ ಫೋನ್‌ಗಳನ್ನು ಚಾರ್ಜ್ ಮಾಡಲಾಗುತ್ತದೆ.

Stay up to date on all the latest ವಿಶೇಷ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp