ತಂದೆಯ ಅಪ್ಪಟ ಅಭಿಮಾನಿ 93 ವರ್ಷದ ವಯನಾಡಿನ ಅಜ್ಜಿಯನ್ನು ಮಾತನಾಡಿಸಿದ ರಾಹುಲ್ ಗಾಂಧಿ!

ಕೇರಳ ರಾಜ್ಯದ ವಯನಾಡು ಜಿಲ್ಲೆಯ ಪೂತಡಿ ಸಮೀಪ ಥಜೆಮುಂಡಾದ ಪರಂಬಿಲ್ ಹೌಸ್ ನ 93 ವರ್ಷ ಪ್ರಾಯದ ಅಜ್ಜಿ ಅಣ್ಣಾ ಮಥೈ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಪ್ಪಟ ಅಭಿಮಾನಿ.

Published: 26th February 2021 11:23 AM  |   Last Updated: 26th February 2021 11:23 AM   |  A+A-


Rahul Gandhi helps Anna Mathai put on her facemask in front of her house near Poothadi in Wayanad on Monday

ತನ್ನ ಮನೆಯ ಮುಂದೆ ರಾಹುಲ್ ಗಾಂಧಿ ಜೊತೆ 93 ವರ್ಷದ ಅಜ್ಜಿ

Posted By : Sumana Upadhyaya
Source : The New Indian Express

ಕಲ್ಪೆಟ್ಟ: ಕೇರಳ ರಾಜ್ಯದ ವಯನಾಡು ಜಿಲ್ಲೆಯ ಪೂತಡಿ ಸಮೀಪ ಥಜೆಮುಂಡಾದ ಪರಂಬಿಲ್ ಹೌಸ್ ನ 93 ವರ್ಷ ಪ್ರಾಯದ ಅಜ್ಜಿ ಅಣ್ಣಾ ಮಥೈ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅಪ್ಪಟ ಅಭಿಮಾನಿ.

ಅವರ ಪುತ್ರ ವಯನಾಡು ಸಂಸದ ರಾಜೀವ್ ಗಾಂಧಿ ಊರಿಗೆ ಕಾರ್ಯಕ್ರಮವೊಂದಕ್ಕೆ ಬರುತ್ತಿದ್ದಾರೆ ಎಂದು ಗೊತ್ತಾಗಿ ಹೇಗಾದರೂ ಮಾಡಿ ರಾಹುಲ್ ಗಾಂಧಿಯನ್ನು ನೋಡಬೇಕೆಂದು ಈ ಅಜ್ಜಿ ಮನಸ್ಸಿನಲ್ಲಿ ಭಾರೀ ಆಸೆ ಇಟ್ಟುಕೊಂಡಿದ್ದರು. ಅವರ ಆಸೆಯಂತೆ ರಾಹುಲ್ ಗಾಂಧಿಯನ್ನು ಕಾಣುವುದು ಮಾತ್ರವಲ್ಲದೆ ಅವರೊಡನೆ 10 ನಿಮಿಷ ಕಳೆಯಲು ಸಿಗುತ್ತದೆ ಎಂದಾದರೆ ಎಷ್ಟು ಖುಷಿಯಾಗಲಿಕ್ಕಿಲ್ಲ?

ಪೂತಡಿ ಪಂಚಾಯತ್ ನ ಕುಡುಂಬಶ್ರೀ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ರಾಹುಲ್ ಗಾಂಧಿ ಹಿಂತಿರುಗುತ್ತಿದ್ದರು. ಮನೆಯ ಮುಂದೆ ರಾಹುಲ್ ಗಾಂಧಿಯನ್ನು ಕಂಡಿದ್ದೇ ತಡ ಮನೆಗೆ ಬರುತ್ತೀರಾ ಎಂದು ಕೇಳಿಯೇ ಬಿಟ್ಟರು.

ಮನೆಯೊಳಗೆ ರಾಹುಲ್ ಗಾಂಧಿಯನ್ನು ಕರೆದುಕೊಂಡು ಹೋಗಿ ಅಲ್ಲಿ ರಾಜೀವ್ ಗಾಂಧಿಯವರ ಚಿತ್ರಗಳನ್ನು ನೇತು ಹಾಕಿದ್ದನ್ನು ತೋರಿಸಿದರು. ತಮ್ಮ ಮೊಮ್ಮಕ್ಕಳನ್ನು ರಾಹುಲ್ ಗಾಂಧಿಗೆ ಪರಿಚಯಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವಧಾನವಾಗಿ ಅಜ್ಜಿಯ ಮಾತುಗಳನ್ನು ಕೇಳುತ್ತಾ ಮನೆಯಿಂದ ಹೊರಹೋಗುವಾಗ ತಪ್ಪದೆ ಮಾಸ್ಕ್ ಹಾಕಿಕೊಳ್ಳಿ ಎಂದರು. ಈ ಇಳಿ ವಯಸ್ಸಿನಲ್ಲಿ ಕೂಡ ನಿಮ್ಮಲ್ಲಿರುವ ಉತ್ಸಾಹ ನೋಡಿದರೆ ಖುಷಿಯಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದರು.

Stay up to date on all the latest ವಿಶೇಷ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp