ವೃತ್ತಿ ಪೊಲೀಸ್ ಕಾನ್ಸ್ಟೇಬಲ್, ಪ್ರವೃತ್ತಿ ಕುರಿ ಸಾಕಾಣಿಕೆ: ಹಾವೇರಿಯ ಹನುಮಂತಪ್ಪರ ಯಶೋಗಾಥೆ 

ಬಾಲ್ಯದಲ್ಲಿ ಕಂಡ ಕನಸು, ಆಕಾಂಕ್ಷೆಗಳನ್ನು ಸಾಕಾರಗೊಳಿಸಿ ಅದು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡ ಹನುಮಂತಪ್ಪ ಸುಂಕದ್ ಅವರ ಜೀವನ ಹೆಮ್ಮೆ ಮತ್ತು ಸಾರ್ಥಕ್ಯ ಅನಿಸುತ್ತಿದೆ. ಅಲ್ಲದೆ ಗುಮ್ಮನಹಳ್ಳಿ ಗ್ರಾಮದಲ್ಲಿನ ಯುವಕರಿಗೆ ಇಂದು ಹನುಮಂತಪ್ಪ ಮಾದರಿಯಾಗಿದ್ದಾರೆ.

Published: 28th February 2021 10:48 AM  |   Last Updated: 28th February 2021 12:17 PM   |  A+A-


Hanumantappa Sunkad is living his childhood dream of becoming a farmer

ಕುರಿ ಸಾಕಾಣಿಕೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹನುಮಂತಪ್ಪ

Posted By : Sumana Upadhyaya
Source : The New Indian Express

ಹಾವೇರಿ: ಬಾಲ್ಯದಲ್ಲಿ ಕಂಡ ಕನಸು, ಆಕಾಂಕ್ಷೆಗಳನ್ನು ಸಾಕಾರಗೊಳಿಸಿ ಅದು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡ ಹನುಮಂತಪ್ಪ ಸುಂಕದ್ ಅವರ ಜೀವನ ಹೆಮ್ಮೆ ಮತ್ತು ಸಾರ್ಥಕ್ಯ ಅನಿಸುತ್ತಿದೆ. ಅಲ್ಲದೆ ಗುಮ್ಮನಹಳ್ಳಿ ಗ್ರಾಮದಲ್ಲಿನ ಯುವಕರಿಗೆ ಇಂದು ಹನುಮಂತಪ್ಪ ಮಾದರಿಯಾಗಿದ್ದಾರೆ.

''ನನ್ನ ತಂದೆ ತಾಯಿಗೆ ಸ್ವಂತ ಜಮೀನು ಇರಲಿಲ್ಲ. ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮಾಡುತ್ತಿದ್ದ ಕೆಲಸ ನನಗೆ ಪ್ರೇರಣೆಯಾಗಿತ್ತು. ಹೀಗಾಗಿ ಬಾಲ್ಯದಲ್ಲಿಯೇ ಜಮೀನು ಕೊಂಡುಕೊಂಡು ಕೃಷಿ, ಪಶುಸಂಗೋಪನೆ ಕನಸು ಕಂಡಿದ್ದೆ ಎನ್ನುತ್ತಾರೆ ಹನುಮಂತಪ್ಪ.

ಓದಿ ಬೆಳೆದ ಹನುಮಂತಪ್ಪಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಒಲಿದುಬಂತು. ಅವರಿಗೆ ಈಗ 37 ವರ್ಷ. ಹಾವೇರಿಯ ಬ್ಯಾಡಗಿ ತಾಲ್ಲೂಕಿನಲ್ಲಿ ಹಿರಿಯ ಅಧಿಕಾರಿಗೆ ಡ್ರೈವರ್ ಆಗಿದ್ದಾರೆ. ಕೆಲಸ ಮಾಡುತ್ತಾ ಎರಡು ವರ್ಷಗಳ ಹಿಂದೆ ತುಂಡು ಭೂಮಿಯನ್ನು ಖರೀದಿಸಿದರು. ಕೃಷಿ ಮಾಡುತ್ತಾ ವಿರಾಮದ ಸಮಯದಲ್ಲಿ ನೆಚ್ಚಿನ ಕುರಿ ಸಾಕಾಣಿಕೆಯನ್ನು ಆರಂಭಿಸಿದರು. ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಎಂದರೆ ಸಾಕಷ್ಟು ಕೆಲಸ, ಅದರ ಮೇಲೆ ಗಮನ ಇರಬೇಕಾಗುತ್ತದೆ, ಆದರೂ ಕೆಲಸ ಮಧ್ಯೆ ತನ್ನ ನೆಚ್ಚಿನ ಹವ್ಯಾಸವಾದ ಕೃಷಿ ಮತ್ತು ಪ್ರಾಣಿ ಸಾಕಾಣಿಕೆಯನ್ನು ಸಹ ಮಾಡುತ್ತಿದ್ದಾರೆ.

ನನ್ನ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆಯಂತೆ ಪೊಲೀಸ್ ಕರ್ತವ್ಯದ ಮೇಲೆ ನಿರ್ಲಕ್ಷ್ಯ ತೋರಿಸದೆ ಅಗತ್ಯವಿದ್ದಾಗ ಲಭ್ಯವಾಗುವಂತೆ ನೋಡಿಕೊಂಡು ಜಮೀನಿನಲ್ಲಿ ಕೃಷಿ ಮಾಡುತ್ತಾ ಸಾಗುತ್ತಿದ್ದೇನೆ ಎನ್ನುತ್ತಾರೆ ಹನುಮಂತಪ್ಪ. ಸುಮಾರು 10 ಕುರಿಗಳಿಂದ ಆರಂಭಿಸಿದ ಹನುಮಂತಪ್ಪ ಬಳಿ ಇಂದು ನೂರಾರು ಕುರಿಗಳಿವೆ.

ಹನುಮಂತಪ್ಪ ಚಿಕ್ಕವರಿದ್ದಾಗ, ಹೆತ್ತವರು ಒಂದೆರಡು ಕುರಿಗಳನ್ನು ಹೊಂದಿದ್ದರು, ಅದನ್ನು ಅವರು ತಮ್ಮ ಮನೆಯ ಹೊರಗಡೆ ಸಾಕುತ್ತಿದ್ದರು, ಜಾನುವಾರುಗಳನ್ನು ಸಾಕುವ ಮೂಲಭೂತ ವಿಷಯಗಳನ್ನು ತಂದೆ-ತಾಯಿಗಳಿಂದ ತಿಳಿದಿದ್ದರು. ಪ್ರಾಯೋಗಿಕ ತಿಳಿವಳಿಕೆ ಮತ್ತು ಗ್ರಾಹಕರ ಸಂಪರ್ಕ ನಿರ್ಮಿಸಲು ಕೆಲವು ಕ್ರಮಗಳನ್ನು ಅನುಸರಿಸಿದರು.

ಹನುಮಂತಪ್ಪ ದಿನಚರಿ: ಬೆಳಗ್ಗೆ 5 ಗಂಟೆಗೆ ಏಳುವ ಹನುಮಂತಪ್ಪ ಕುರಿ ಮಂದೆಗೆ ಹೋಗಿ ಅವುಗಳನ್ನು ಒಮ್ಮೆ ಪರೀಕ್ಷಿಸುತ್ತಾರೆ. ನಂತರ ಹೊರಗೆ ಸ್ವಲ್ಪ ಹೊತ್ತು ವಾಕಿಂಗ್ ಗೆ ಕುರಿಗಳನ್ನು ಕರೆದುಕೊಂಡು ಹೋಗುತ್ತಾರೆ. ಅವುಗಳಿಗೆ ತಿನ್ನಲು ಹಾಕುತ್ತಾರೆ. ನಂತರ ತಮ್ಮ ಪೊಲೀಸ್ ಧಿರಿಸು ಧರಿಸಿ ನಿತ್ಯದ ಡ್ಯೂಟಿಗೆ ಹೊರಡಲು ಅನುವಾಗುತ್ತಾರೆ. 

ಏಳೆಂಟು ತಿಂಗಳ ಕುರಿಗೆ 7ರಿಂದ 8 ಸಾವಿರ ರೂಪಾಯಿ ಕೊಟ್ಟು ಹನುಮಂತಪ್ಪ ಖರೀದಿಸುತ್ತಾರೆ. ಅವುಗಳನ್ನು ಆರು ತಿಂಗಳು ಸಾಕಿ ಒಂದೂವರೆ ವರ್ಷವಾದಾಗ ಮಾರಾಟ ಮಾಡುತ್ತಾರೆ. ಆಗ ಅವು 45ರಿಂದ 50ಕೆಜಿ ತೂಗುತ್ತವೆ. ಪ್ರತಿ ಕುರಿಗೆ ಸುಮಾರು 20 ಸಾವಿರ ಸಿಗುತ್ತದೆ. ಕುರಿಯ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಕೆಜಿಗೆ 450ರಿಂದ 500 ರೂಪಾಯಿಗಳಿರುತ್ತದೆ. ಆರು ತಿಂಗಳಿಗೆ ಸುಮಾರು 3 ಸಾವಿರ ರೂಪಾಯಿ ಕುರಿ ಸಾಕಾಣಿಕೆಗೆ ವೆಚ್ಚವಾಗುವ ಹನುಮಂತಪ್ಪಗೆ ಅದರ ಮಾರಾಟದಿಂದ ಪ್ರತಿ ಕುರಿಯಿಂದ 15 ಸಾವಿರ ರೂಪಾಯಿ ಸಿಗುತ್ತದಂತೆ. ಹೀಗೆ ಹವ್ಯಾಸವನ್ನು ಲಾಭದಾಯಕ ಮಾಡಿಕೊಳ್ಳುತ್ತಾರೆ. 

ಕಳೆದ ಎರಡು ವರ್ಷಗಳಲ್ಲಿ ಹನುಮಂತಪ್ಪ ಸುಮಾರು 200 ಕುರಿಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಮಾಡಿದ್ದಾರೆ. ತಿಂಗಳಿಗೆ 15ರಿಂದ 20 ಕುರಿಗಳನ್ನು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ಹಾವೇರಿಯಲ್ಲಿ ವಾರದ ಸಂತೆಗೆ ತೆಗೆದುಕೊಂಡು ಹೋಗುತ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಕುರಿ ಸಾಕಾಣಿಕೆ, ಮಾರಾಟವನ್ನು ಜನಪ್ರಿಯಗೊಳಿಸಿದ್ದಾರೆ ಹನುಮಂತಪ್ಪ.

Stay up to date on all the latest ವಿಶೇಷ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp