ತಾನು ಕಸಗುಡಿಸುತ್ತಿದ್ದ ಪಂಚಾಯ್ತಿಗೆ ಈಗ ಅಧ್ಯಕ್ಷೆಯಾದ ಮಹಿಳೆ, ಥ್ಯಾಂಕ್ಸ್ ಟು ಪ್ರಜಾಪ್ರಭುತ್ವ!

ಸುಮಾರು ಒಂದು ದಶಕದ ಹಿಂದೆ ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ (ಕಸಗುಡಿಸುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದ ಆನಂದವಳ್ಳಿ ಅವರು, ತಾನೂ ಒಂದು ದಿನ ಈ ಸ್ಥಳೀಯ ಸಂಸ್ಥೆಯ ಮುಖ್ಯಸ್ಥೆಯಾಗಬಹುದು ಎಂದು ಯಾವತ್ತೂ ಭಾವಿಸಿರಲಿಲ್ಲ.

Published: 01st January 2021 03:02 PM  |   Last Updated: 01st January 2021 04:29 PM   |  A+A-


anandavalli

ಆನಂದವಳ್ಳಿ

Posted By : Lingaraj Badiger
Source : PTI

ಕೊಲ್ಲಂ: ಸುಮಾರು ಒಂದು ದಶಕದ ಹಿಂದೆ ಕೇರಳದ ಪಥನಪುರಂ ಬ್ಲಾಕ್ ಪಂಚಾಯಿತಿಯಲ್ಲಿ ಅರೆಕಾಲಿಕ ಸ್ವೀಪರ್ (ಕಸಗುಡಿಸುವ ಕೆಲಸ) ಆಗಿ ಕೆಲಸ ಮಾಡುತ್ತಿದ್ದ ಆನಂದವಳ್ಳಿ ಅವರು, ತಾನೂ ಒಂದು ದಿನ ಈ ಸ್ಥಳೀಯ ಸಂಸ್ಥೆಯ ಮುಖ್ಯಸ್ಥೆಯಾಗಬಹುದು ಎಂದು ಯಾವತ್ತೂ ಭಾವಿಸಿರಲಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಪ್ರಭು ಆಗಬಹುದು ಎಂಬುದನ್ನು ಈ ಮಹಿಳೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ದಮನಿತ ವರ್ಗಗಳ ಸಬಲೀಕರಣದ ಸಂಕೇತವಾಗಿ, ಪರಿಶಿಷ್ಟ ಜಾತಿಗೆ ಸೇರಿದ 46 ವರ್ಷದ ಸಿಪಿಎಂ ಸದಸ್ಯೆ ಆನಂದವಳ್ಳಿ ಅವರು ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

"ನಾನು ಅಂತಹ ಉನ್ನತ ಹುದ್ದೆಯನ್ನು, ಅದೂ ನಾನು ಅರೆಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಅಲಂಕರಿಸುತ್ತೇನೆ ಎಂದು ಎಂದೂ ಯೋಚಿಸಿರಲಿಲ್ಲ" ಎಂದು ಇಬ್ಬರು ಮಕ್ಕಳ ತಾಯಿ ಆನಂದವಳ್ಳಿ ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಪಥನಪುರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಹುದ್ದೆಗೆ ಆನಂದವಳ್ಳಿ ಅವರ ಹೆಸರನ್ನು ಸೂಚಿಸಿತ್ತು. 13 ಸದಸ್ಯ ಬಲದ ಈ ಬ್ಲಾಕ್ ಪಂಚಾಯತ್‌ನಲ್ಲಿ ಎಲ್‌ಡಿಎಫ್ ಏಳು ಸ್ಥಾನಗಳನ್ನು ಗೆದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರು ಸ್ಥಾನಗಳನ್ನು ಗಳಿಸಿತ್ತು.

Stay up to date on all the latest ವಿಶೇಷ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp