ಸ್ಯಾನ್‌ಫ್ರಾನ್ಸಿಸ್ಕೊ- ಬೆಂಗಳೂರು ಏರ್ ಇಂಡಿಯಾ ವಿಮಾನ ಮೊದಲ ಸಂಚಾರದಲ್ಲಿ ಮಹಿಳಾ ಸಿಬ್ಬಂದಿಗಳದ್ದೇ ಸಾರಥ್ಯ!

ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು–ಸ್ಯಾನ್ ‌ಫ್ರಾನ್ಸಿಸ್ಕೊ ನಡುವೆ ಪ್ರಪ್ರಥಮ ತಡೆರಹಿತ ವಿಮಾನ ಕಾರ್ಯಾಚರಣೆ ಶನಿವಾರದಿಂದ ಆರಂಭವಾಗಲಿದ್ದು, ಮೊದಲ ವಿಮಾನ ಸಂಚಾರದ ಜವಾಬ್ದಾರಿಯನ್ನು ಏರ್ ಇಂಡಿಯಾದ ಮಹಿಳಾ ಪೈಲಟ್"ಗಳ ತಂಡ ನಿರ್ವಹಿಸಲಿದೆ. 

Published: 09th January 2021 01:37 PM  |   Last Updated: 09th January 2021 02:33 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು–ಸ್ಯಾನ್ ‌ಫ್ರಾನ್ಸಿಸ್ಕೊ ನಡುವೆ ಪ್ರಪ್ರಥಮ ತಡೆರಹಿತ ವಿಮಾನ ಕಾರ್ಯಾಚರಣೆ ಶನಿವಾರದಿಂದ ಆರಂಭವಾಗಲಿದ್ದು, ಮೊದಲ ವಿಮಾನ ಸಂಚಾರದ ಜವಾಬ್ದಾರಿಯನ್ನು ಏರ್ ಇಂಡಿಯಾದ ಮಹಿಳಾ ಪೈಲಟ್"ಗಳ ತಂಡ ನಿರ್ವಹಿಸಲಿದೆ. 

ಈ ಕುರಿತು ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 

‘ಕ್ಯಾಪ್ಟನ್ ಜೋಯಾ ಅಗರ್‌ವಾಲ್‌ ನೇತೃತ್ವದ ಮಹಿಳಾ ಪೈಲಟ್ ತಂಡ ಶನಿವಾರ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಮೊದಲ ವಿಮಾನ ಸಂಚಾರ ಆರಂಭಿಸಿದೆ. ಈ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ ಬೆಂಗಳೂರಿಗೆ ತಲುಪಲಿದೆ‘ ಎಂದು ತಿಳಿಸಿದ್ದಾರೆ.

‘ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡವು ಈ ಉದ್ಘಾಟನಾ ವಿಮಾನ ಸಂಚಾರದ ಸಾರಥ್ಯವಹಿಸಲಿದೆ‘ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೊ - ಬೆಂಗಳೂರು ನಡುವಿನ ವೈಮಾನಿಕ ಅಂತರವು ವಿಶ್ವದ ಅತ್ಯಂತ ಧೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧೃವವನ್ನು ದಾಟಿ ಬರುತ್ತವೆ.  

ಉದ್ಘಾಟನಾ ವಿಮಾನ ಎಐ 176 ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಹೊರಡಲಿದ್ದು, ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 3.45 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

Stay up to date on all the latest ವಿಶೇಷ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp