ದಂಗೆ ಪೀಡಿತ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್!
ಸುಲಿಗೆ, ಅಪಹರಣ ಮತ್ತು ಕೊಲೆಯಂತಹ ಕುಕೃತ್ಯಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಿದ್ದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ಆರಂಭಿಸಿದ ಸಣ್ಣ ಕಾರ್ಯಕ್ರಮ ಸಾಕಷ್ಟು ಆರ್ಥಿಕ ಪ್ರಗತಿಗೆ ಕಾರಣವಾಗಿದೆ.
Published: 12th January 2021 02:22 PM | Last Updated: 12th January 2021 02:30 PM | A+A A-

ತ್ಯಾಜ್ಯ ಸಂಸ್ಕರಣಾ ಘಟಕ
ಅರುಣಾಚಲ ಪ್ರದೇಶ: ಸುಲಿಗೆ, ಅಪಹರಣ ಮತ್ತು ಕೊಲೆಯಂತಹ ಕುಕೃತ್ಯಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಿದ್ದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ಆರಂಭಿಸಿದ ಸಣ್ಣ ಕಾರ್ಯಕ್ರಮ ಸಾಕಷ್ಟು ಆರ್ಥಿಕ ಪ್ರಗತಿಗೆ ಕಾರಣವಾಗಿದೆ.
ಆದಿವಾಸಿ ಸಮುದಾಯ ಪ್ರಾಬಲ್ಯದ ಕುಮುಂಗ್ ಪಾಥರ್ ಪಂಚಾಯಿತಿಯಲ್ಲಿ 2019ರಲ್ಲಿ ಜಿಲ್ಲಾಧಿಕಾರಿ ದೇವಂಶ್ ಯಾದವ್ ಪ್ಲಾಸ್ಟಿಕ್ ಚೂರು ಚೂರು ಮಾಡುವ ಘಟಕವನ್ನು ಸ್ಛಾಪಿಸಿದರು. ರಸ್ತೆ ಕೆಲಸಕ್ಕಾಗಿ ಬಳಸುವ ಪ್ಲಾಸ್ಟಿಕ್ ನ್ನು ಈ ಘಟಕದಲ್ಲಿ ಚೂರು ಚೂರು ಮಾಡಲಾಗುತ್ತದೆ. ಡಾಂಬರು ಹಾಗೂ ಪ್ಲಾಸ್ಟಿಕ್ ಮಿಶ್ರಣದಿಂದ ರಸ್ತೆಯನ್ನು ನಿರ್ಮಿಸುವುದರಿಂದ ನೀರನ್ನು ಹೀರಿಕೊಳ್ಳುವುದಲ್ಲದೇ, ಹೆಚ್ಚು ಕಾಲ ಬಾಳಿಕೆಗೆ ಬರುತ್ತದೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಏಕೆ ಪ್ಲಾಸ್ಟಿಕ್ ನ್ನು ಪುನರ್ ಬಳಕೆ ಮಾಡಬಾರದು ಎಂದು ಯೋಚಿಸಿ ಒಂದು ವರ್ಷದೊಳಗೆ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಯಿತು. ಅದು 2020ರ ಪ್ರಧಾನ ಮಂತ್ರಿ ಪ್ರಶಸ್ತಿಯಡಿಯಲ್ಲಿ ನಾವೀನ್ಯತೆಗಾಗಿ ಟಾಪ್ ಆರು ಯೋಜನೆಗಳಲ್ಲಿ ಸ್ಥಾನ ಪಡೆದುಕೊಂಡಿತು. ಆದರೆ, ಟಾಪ್ ಮೂರರಲ್ಲಿ ಬರಲಿಲ್ಲ ಎಂದು ಯಾದವ್ ದಿ ನ್ಯೂಸ್ ಇಂಡಿಯನ್ ಪತ್ರಿಕೆಗೆ ತಿಳಿಸಿದ್ದಾರೆ.
ಕುಮುಂಗ್ ಪಾಥರ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಅದರ ಸುತ್ತಮುತ್ತ ಯಾವುದೇ ತ್ಯಾಜ್ಯ ವಿಲೇವಾರಿ ಘಟಕಗಳಿಲ್ಲ. ಗ್ರಾಮಸ್ಥರು ಮತ್ತು ಸ್ಥಳೀಯ ಪಂಚಾಯತ್ ಮಧ್ಯಂತರ ಸಮಿತಿಯೊಂದಿಗೆ ಸಭೆ ನಡೆಸಿದ್ದೇವೆ. ತ್ಯಾಜ್ಯ ವಿಲೇವಾರಿಗೆ ಭೂಮಿ ನೀಡಿದರೆ ಆದಾಯದೊಂದಿಗೆ ಉದ್ಯೋಗ ಪಡೆಯಬಹುದೆಂದು ಸ್ಥಳೀಯ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಯೋಜನೆ ಆರಂಭಿಸಿದ ನಂತರ ಜನರು ಸಹಕಾರ ನೀಡುವ ವಿಶ್ವಾಸವಿದೆ ಎಂದು ಯಾದವ್ ಹೇಳಿದರು.
ತ್ಯಾಜ್ಯ ಸಂಸ್ಕರಣಾ ಘಟಕದಿಂದ ಈವರೆಗೂ 10 ಮೆಟ್ರಿಕ್ ಟನ್ ತ್ಯಾಜ್ಯ ಮಾರಾಟದಿಂದ 2.75 ಲಕ್ಷ ಆದಾಯ ಬಂದಿರುವುದಾಗಿ ತಿಳಿಸಿರುವ ಯಾದವ್, ಇತ್ತೀಚಿಗೆ ಇತ್ತೀಚಿಗೆ ಎರಡು ಮೆಟ್ರಿಕ್ ಟನ್ ತ್ಯಾಜ್ಯವನ್ನು ರಸ್ತೆ ನಿರ್ಮಾಣ ಮಾಡುವ ಕಂಪನಿಯೊಂದಕ್ಕೆ ಮಾರಾಟ ಮಾಡಲಾಗಿದೆ. ಮತ್ತೆ 10 ಮೆಟ್ರಿಕ್ ಟನ್ ಗಾಗಿ ಆರ್ಡರ್ ಪಡೆದಿರುವುದಾಗಿ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಈ ರೀತಿಯ ಕೆಲಸ ಮಾಡುತ್ತಿರುವ ಯಾದವ್, ಜಿಲ್ಲಾ ಮಟ್ಟದಲ್ಲಿ ಯೋಜನೆ ಆರಂಭಿಸಲು ಎದುರು ನೋಡುತ್ತಿದ್ದಾರೆ. ತ್ಯಾಜ್ಯ ದಿಂದ ಬರುವ ಆದಾಯವನ್ನು ರಸ್ತೆ ನಿರ್ಮಾಣ, ಸಮುದಾಯ ಭವನ ಮತ್ತು ರಸ್ತೆ ದುರಸ್ಥಿಗಾಗಿ ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.