ಎಲೆ, ಕಡ್ಡಿಯಿಂದ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿದ ಸುಳ್ಯ ಯುವಕ!

ಎಲೆ ಕಡ್ಡಿಯನ್ನೇ ಬಳಸಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸುವ ಮೂಲಕ ಸುಳ್ಯದ ಯುವಕನೊಬ್ಬ ಅಚ್ಚರಿಯ ಸಾಧನೆ ಮಾಡಿದ್ದಾರೆ. 

Published: 13th January 2021 09:23 PM  |   Last Updated: 13th January 2021 09:23 PM   |  A+A-


ಸ್ವಾಮಿ ವಿವೇಕಾನಂದರ ಕಲಾಕೃತಿ ಹಾಗೂ ಕಲಾವಿದ ಶಶಿ ಅಡ್ಕರ್

Posted By : Raghavendra Adiga
Source : Online Desk

ಸುಳ್ಯ: ಎಲೆ ಕಡ್ಡಿಯನ್ನೇ ಬಳಸಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸುವ ಮೂಲಕ ಸುಳ್ಯದ ಯುವಕನೊಬ್ಬ ಅಚ್ಚರಿಯ ಸಾಧನೆ ಮಾಡಿದ್ದಾರೆ. 

ಇಂಗು ಎಲೆಯನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸಿ ಅದನ್ನು ಪೊರಕೆ ಕಡ್ಡಿಗೆ ಅಂಟಿಸಿ, ಬಳಿಕ ಮರಳು ತುಂಬಿದ ಬಕೆಟ್​ನಲ್ಲಿ ಇಡುವ ಮೂಲಕ ಸುಳ್ಯದ  ಶಶಿ ಅಡ್ಕರ್ ಎಂಬ ಯುವಕ ಈ ಕಲಾಕೃತಿಯನ್ನು ರಚಿಸಿದ್ದಾರೆ. 

ನಿನ್ನೆ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆಯ ಸಮಯದಲ್ಲಿ ಕೇವಲ ಎಲೆ ಕಡ್ಡಿಯನ್ನೇ ಉಪಯೋಗಿಸಿ ನೆರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ಮೂಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೇಲ್ನೋಟಕ್ಕೆ ಇದು ಸಾಮಾನ್ಯ ಆಗಿ ಐದು ಕಡ್ಡಿಯನ್ನು ಬಕೆಟ್ ನಲ್ಲಿ ಸಿಕ್ಕಿಸಿರುವಂತೆಯೇ ಕಾಣುತ್ತದೆ.ಒಂದು ಕೋನದಿಂದ ಕಂಡಾಗ ಸ್ವಾಮಿ ವಿವೇಕಾನಂದರ ಬಿಂಬ ಸ್ಪಷ್ಟವಾಗಿ ಕಾಣಿಸುತ್ತದೆ. 

ಶಶಿ ಹೇಳೀದಂತೆ ಈ ಕಲಾಕೃತಿ ರಚನೆಗೆ ಸುಮಾರು ಐದು ಗಂಟೆಗಳ ಕಾಲ ತಗುಲಿದೆ. ಮೊದಲು ವಿವೇಕಾನಂದರ ಚಿತ್ರವನ್ನು ಬಿಡಿಸಿ ಬಳಿಕ ಇಂಗಿನ ಎಲೆಯನ್ನು ಅದೇ ಆಕಾರದಲ್ಲಿ ವಿಶಿಷ್ಟವಾಗಿ ಕತ್ತರಿಸಿ ಅದನ್ನು ಕಡ್ಡಿಗಳಿಗೆ ಅಂಟಿಸಲಾಗಿ, ಅದನ್ನು ಎದುರು ಬದರಾಗಿ ಮರಳು ತುಂಬಿರುವ ಬಕೆಟ್ ನಲ್ಲಿ ನೇರವಾಗಿ ನಿಲ್ಲಿಸಿದಾಗ ವಿವೇಕಾನಂದರ ಆಕೃತಿ ಮೂಡಿದೆ. 

"ನನಗೆ ವಿದೇಶಿಗನೊಬ್ಬ ನೆಟ್,ಬೋಲ್ಟ್ ಮೂಲಕ ರಚಿಸಿದ ಕಲಾಕೃತಿಯು ಇದಕ್ಕೆ ಪ್ರೇರಣೆಯಾಗಿತ್ತು" ಎಂದು ಕಲಾವಿದ ಶಶಿ ಹೇಳಿದ್ದಾರೆ. 

ಈ ವಿಶಿಷ್ಟ ಕಲಾಕೃತಿಯ ಹಿನ್ನೆಲೆಯಲ್ಲಿ ಸ್ವಾಮಿ ವಿಏಕಾನಂದರ ಚಿಕಾಗೋ ಭಾಷಣದ ಮಾತನ್ನು  ಹಾಕಲಾಗಿದ್ದು  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Stay up to date on all the latest ವಿಶೇಷ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp