ಬಾಟಲ್ ಕಲೆಯಲ್ಲಿ ವಿಶ್ವದ 7 ಅದ್ಭುತಗಳು: ಕೇರಳ ಮಹಿಳೆಯ ಸಾಧನೆ ಏಷ್ಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ!

ಉತ್ಸಾಹದಿಂದ ಕನಸುಗಳನ್ನು ಬೆನ್ನಟ್ಟುವುದು ಖ್ಯಾತಿಯ ಶಿಖರಕ್ಕೇರಿಸುತ್ತದೆ. ಅಂಥಹದ್ದೇ ಉದಾಹರಣೆಯಾಗಿದ್ದಾರೆ ಕೇರಳದ ಮಹಿಳೆ ಜಿಸ್ನಾ ನಗಿರ್ಶಾ (40) ಬಾಟಲ್ ಆರ್ಟ್ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. 

Published: 20th January 2021 12:49 PM  |   Last Updated: 20th January 2021 12:52 PM   |  A+A-


Jisna Nagirsha with her bottle art

ಬಾಟಲ್ ಚಿತ್ರಕಲೆಯೊಂದಿಗೆ ಜಿಸ್ನಾ ನಗಿರ್ಶಾ

Posted By : Srinivas Rao BV
Source : UNI

ಕೊಚ್ಚಿ: ಉತ್ಸಾಹದಿಂದ ಕನಸುಗಳನ್ನು ಬೆನ್ನಟ್ಟುವುದು ಖ್ಯಾತಿಯ ಶಿಖರಕ್ಕೇರಿಸುತ್ತದೆ. ಅಂಥಹದ್ದೇ ಉದಾಹರಣೆಯಾಗಿದ್ದಾರೆ ಕೇರಳದ ಮಹಿಳೆ ಜಿಸ್ನಾ ನಗಿರ್ಶಾ (40) ಬಾಟಲ್ ಆರ್ಟ್ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. 

"ನಾನು 6 ವರ್ಷಗಳಿಂದ ಬಾಟಲ್ ಆರ್ಟ್ ಕಲೆಯನ್ನು ಅಭ್ಯಾಸ ಮಾಡುತ್ತಿದ್ದೇನೆ, ಕಳೆದ 2 ವರ್ಷಗಳಿಂದಷ್ಟೇ ಅದರೆಡೆಗೆ ತೀವ್ರವಾಗಿ ಕೆಲಸ ಮಾಡುತ್ತಿದ್ದೇನೆ, ಈಗ ವಿಶ್ವದ 7 ಅದ್ಭುತಗಳನ್ನು ಬಾಟಲ್ ಆರ್ಟ್ ನಲ್ಲಿ ತೋರಿಸಿರುವ ಕಲೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ ಎನ್ನುತ್ತಾರೆ ಜಿಸ್ನಾ ನಗಿರ್ಶಾ 

ಜೇಡಿಮಣ್ಣು, ಅಂಟು, ವಾರ್ನಿಷ್ ಮತ್ತು ಬಣ್ಣವನ್ನು ಬಳಕೆ ಮಾಡಿ ವಿಶ್ವದ 7 ಅದ್ಭುತಗಳನ್ನು ಬಾಟಲ್ ಆರ್ಟ್ ನಲ್ಲಿ ತೋರಿಸಿದ್ದು, ಇದಕ್ಕಾಗಿ ಅತಿ ಹೆಚ್ಚು ತಾಳ್ಮೆ ವಹಿಸಿದ್ದೆ ಎಂದು ಜಿಸ್ನಾ ಹೇಳಿದ್ದಾರೆ.

ಹಾಗೆಂದು ಕೇರಳದ ಈ ಸಾಧಕಿಗೆ ಇಷ್ಟಕ್ಕೆ ಸಮಾಧಾನವಿಲ್ಲ. ತಮ್ಮ ಕಲೆ ಲಿಮ್ಕಾ ಬುಕ್ ದಾಖಲೆಯನ್ನು ಸೇರಬೇಕೆಂಬ ಹೆಬ್ಬಯಕೆ ಹೊಂದಿದ್ದು, ಅದನ್ನು ಈಡೇರಿಸುವ ಕನಸು ಹೊಂದಿದ್ದಾರೆ. 

ನನ್ನ ಕೆಲಸಗಳ ವಿವರಗಳನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳಿಸಿಕೊಡುವ ಪ್ರಕ್ರಿಯೆಯಲ್ಲಿದ್ದೇನೆ ಎನ್ನುತ್ತಾರೆ ಜಿಸ್ನಾ.ಬಾಟಲ್ ಆರ್ಟ್ ನ ವಿನ್ಯಾಸಗಳು ಬಾಟಲ್ ಗಳ ಆಕಾರವನ್ನು ಆಧರಿಸಿರುತ್ತದೆ, ಈ ರೀತಿಯ ಬಾಟಲ್ ಕಲೆಗಳು 1,000 ರೂಪಾಯಿಗಳಿಂದ ಲಭ್ಯವಿದೆ.

Stay up to date on all the latest ವಿಶೇಷ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp