ಅಯೋಧ್ಯೆ ರಾಮ ಮಂದಿರ ನಿರ್ಮಾಣ ತಾಂತ್ರಿಕ ಸಮಿತಿಯಲ್ಲಿ ಚಿತ್ರದುರ್ಗದ ಪ್ರೊ. ಸೀತಾರಾಮ್ ಗೆ ಸ್ಥಾನ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಕಾರ್ಯದಲ್ಲಿ ಕೋಟೆನಾಡು ಚಿತ್ರದುರ್ಗಕ್ಕೂ ಒಂದು ಸಣ್ಣ ಪಾಲಿದೆ. ಜಿಲ್ಲೆಯ ತಳಕು ಮೂಲದ ಪ್ರಾಧ್ಯಾಪಕ ಟಿ.ಜಿ.ಸೀತಾರಾಮ್ ಮಂದಿರ ನಿರ್ಮಾಣಕ್ಕಾಗಿ ರಚನೆಯಾಗಿರುವ ತಾಂತ್ರಿಕ ಸಿಬ್ಬಂದಿಗಳ ತಂಡದ ಸದಸ್ಯರಾಗಿದ್ದಾರೆ.

Published: 21st January 2021 02:44 PM  |   Last Updated: 21st January 2021 04:25 PM   |  A+A-


Professor-TG-Sitharam

ಪ್ರಾಧ್ಯಾಪಕ ಟಿ.ಜಿ.ಸೀತಾರಾಮ್

Posted By : Raghavendra Adiga
Source : The New Indian Express

ಚಿತ್ರದುರ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಕಾರ್ಯದಲ್ಲಿ ಕೋಟೆನಾಡು ಚಿತ್ರದುರ್ಗಕ್ಕೂ ಒಂದು ಸಣ್ಣ ಪಾಲಿದೆ. ಜಿಲ್ಲೆಯ ತಳಕು ಮೂಲದ ಪ್ರಾಧ್ಯಾಪಕ ಟಿ.ಜಿ.ಸೀತಾರಾಮ್ ಮಂದಿರ ನಿರ್ಮಾಣಕ್ಕಾಗಿ ರಚನೆಯಾಗಿರುವ ತಾಂತ್ರಿಕ ಸಿಬ್ಬಂದಿಗಳ ತಂಡದ ಸದಸ್ಯರಾಗಿದ್ದಾರೆ. ಇವರ ಈ ತಂಡ ಮಂದಿರದ ಗುಣಮಟ್ಟ ಪರಿಶೀಲನೆ ನಡೆಸಲಿದೆ.

ಪ್ರಸ್ತುತ ಗುವಾಹತಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ಸೀತಾರಾಮ್ ಅವರು ರಾಕ್ ಮೆಕ್ಯಾನಿಕ್ಸ್, ರಾಕ್ ಎಂಜಿನಿಯರಿಂಗ್ ಮತ್ತು ಜಿಯೋಟೆಕ್ನಿಕಲ್ ಅರ್ಥ್ ಕ್ವೇಕ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ.ಅವರು ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ, ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮತ್ತು ಅಮೇರಿಕನ್ ಸೊಸೈಟಿ ಆಫ್ ಸಿವಿಲ್ ಇಂಜಿನಿಯರ್ಸ್‌ನ ಚುನಾಯಿತ ಸದಸ್ಯರೂ ಕೂಡ ಆಗಿದ್ದಾರೆ.

ಇದಕ್ಕೂ ಮೊದಲು, ಅವರು 1994 ರಿಂದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅವರು 2014 ರವರೆಗೆ ಐಐಎಸ್‌ಸಿಯಲ್ಲಿ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿನ ಎಂಟು ಸದಸ್ಯರ ತಾಂತ್ರಿಕ ಸಿಬ್ಬಂದಿಗಳ ತಂಡದಲ್ಲಿ ಸೇರಿದ್ದಾರೆ. ಈ ತಂಡವನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗಿದೆ.

ಚಳ್ಳಕೆರೆ ತಾಲೂಕು ತಳಕು ಪಟ್ಟಣದವರಾದ ಸೀತಾರಾಮ್ ಅವರು ಟಿ.ಎಸ್. ಗುಂಡುರಾವ್ ಮತ್ತು ವತ್ಸಲಾ ಅವರ ಪುತ್ರರಾಗಿದ್ದು, ಅವರು ಪ್ರಸಿದ್ಧ ಕಾದಂಬರಿಗಾರ ತ.ರಾ. ಸುಬ್ಬರಾವ್ ಅವರ ಕುಟುಂಬದ ಸಂಬಂಧ ಹೊಂದಿದ್ದಾರೆ. ಸೀತಾರಾಮ್ ಪ್ರಾಥಮಿಕ ಶಿಕ್ಷಣವನ್ನು ಹರಿಹರ ತಾಲೂಕಿನ ಮಲೆಬೆನ್ನೂರು ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದರು.ಇದರ ನಂತರ ಅವರು ಉನ್ನತ ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಡೆದರೆ 1978-1984ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಿದ್ದಾರೆ. 1984-86ರಲ್ಲಿ ಐಐಎಸ್‌ಸಿಯಿಂದ ಎಂಎಸ್ ಮತ್ತು 1988-91ರಲ್ಲಿ ವಾಟರ್ಲೂ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದರು.

ಸೀತಾರಾಮ್ ಅವರನ್ನು ಶೀಘ್ರದಲ್ಲೇ ಚಳ್ಳಕೆರೆಗೆ ಆಹ್ವಾನಿಸಿಬ್ರಾಹ್ಮಣ ಸಂಘದ ಪರವಾಗಿ ಸನ್ಮಾನಿಸಲಾಗುವುದು ಎಂದು ಸಂಘದ ಗೌರವ ಅಧ್ಯಕ್ಷ ಎಂ.ವಾಸುದೇವರಾವ್ ಹೇಳಿದರು. ಸೀತಾರಾಮ್ ಅವರ ಸಾಧನೆ ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆಯ ಸಂಗತಿ, ಏಕೆಂದರೆ ಅಯೋಧ್ಯೆಯ ಶ್ರೀರಾಮ ಮಂದಿರ ಎಲ್ಲರ ಮನೋಭಿಲಾಷೆಯಾಗಿದೆ. ಇಂತಹಾ ದೇವಾಲಯ ನಿರ್ಮಾಣದ ಕೆಲಸದಲ್ಲಿ ನಮ್ಮ ಮಣ್ಣಿನ ಮಗನೂ ಇದ್ದಾರೆಂದು ಖುಷಿ ಇದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್ ಗೋಪಿನಾಥ್, ಉಪಾಧ್ಯಕ್ಷ ಎಚ್.ವಿ. ಯೋಗೇಶ್, ನಾಗರಾಜ್, ಎಂ.ಸತ್ಯನಾರಾಯಣ್ ಮತ್ತಿತರರು ಹೇಳಿದ್ದಾರೆ. 


Stay up to date on all the latest ವಿಶೇಷ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp