ಒಬ್ಬ ಮಹಿಳೆ, ಹಲವು ಪ್ರತಿಭೆ; ಇವರು ರತ್ನ 'ಪ್ರಭೆ'

ಅವರು ದಿನವಿಡೀ ಬ್ಯುಸಿಯಾಗಿರುತ್ತಾರೆ. ಐಎಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದಾಗಿನಿಂದ ಹೆಚ್ಚು ಒತ್ತಡ, ಬ್ಯುಸಿಯಲ್ಲಿ ಈಗ ನಿವೃತ್ತರಾದ ಮೇಲೆ ಇದ್ದಾರೆ ಎಂದರೆ ನಂಬುತ್ತೀರಾ? ಅವರು ಬೇರಾರು ಅಲ್ಲ, ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ಕೆ ರತ್ನ ಪ್ರಭಾ.

Published: 21st January 2021 01:46 PM  |   Last Updated: 21st January 2021 01:46 PM   |  A+A-


Retired IAS officer Ratna Prabha

ನಿವೃತ್ತ ಐಎಎಸ್ ಅಧಿಕಾರಿ ರತ್ನ ಪ್ರಭಾ

Posted By : Sumana Upadhyaya
Source : The New Indian Express

ಬೆಂಗಳೂರು: ಅವರು ದಿನವಿಡೀ ಬ್ಯುಸಿಯಾಗಿರುತ್ತಾರೆ. ಐಎಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದಾಗಿನಿಂದ ಹೆಚ್ಚು ಒತ್ತಡ, ಬ್ಯುಸಿಯಲ್ಲಿ ಈಗ ನಿವೃತ್ತರಾದ ಮೇಲೆ ಇದ್ದಾರೆ ಎಂದರೆ ನಂಬುತ್ತೀರಾ? ಅವರು ಬೇರಾರು ಅಲ್ಲ, ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದು ನಿವೃತ್ತರಾಗಿರುವ ಕೆ ರತ್ನ ಪ್ರಭಾ.

37 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ 2018ರ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದಿದ ರತ್ನ ಪ್ರಭಾ ಸರ್ಕಾರದಿಂದ ಪಿಂಚಣಿ ಬರುತ್ತದೆ, ಆರಾಮಾಗಿರೋಣ ಎಂದು ಸುಮ್ಮನೆ ಕುಳಿತಿಲ್ಲ. ಇಂದು ಕೋವಿಡ್-19 ನ ಬಿಕ್ಕಟ್ಟಿನ ನಡುವೆ, ಆರ್ಥಿಕ ಸಮಸ್ಯೆಗಳ ನಡುವೆ ಮಹಿಳೆಯರ ಸಶಕ್ತೀರಣಕ್ಕಾಗಿ ಶ್ರಮಿಸುತ್ತಿದ್ದಾರೆ.

ಉಬುಂಟು ಮೂಲಕ ರಾಜ್ಯ, ದೇಶೀಯ ಮಟ್ಟದಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರ ಉದ್ಯಮಗಳನ್ನು ಅಭಿವೃದ್ಧಿಪಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ. ನೇರವಾಗಿ ಉದ್ಯಮಿಗಳ ಬಳಿಗೆ ಹೋಗುವ ಬದಲು ಸಂಘಟನೆಗಳನ್ನು ಮಾಡುತ್ತೇವೆ. ಪ್ರಸ್ತುತ 6 ರಾಜ್ಯಗಳಲ್ಲಿ 24 ಸಂಘಟನೆಗಳಿವೆ. ಅದರಲ್ಲಿ 15 ಸಾವಿರ ಸದಸ್ಯರಿದ್ದಾರೆ, ಅವರಿಗೆ ಉದ್ಯಮ ಸಲಹಾ ಸೇವೆಗಳನ್ನು ನೀಡಿ ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವ, ಸಣ್ಣ ಮತ್ತು ಮದ್ಯಮ ಉದ್ಯಮಶೀಲ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ರತ್ನ ಪ್ರಭಾ ಹೇಳುತ್ತಾರೆ.

ರತ್ನ ಪ್ರಭಾ ಅವರು ಐಎಎಸ್ ಅಧಿಕಾರಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಮೊದಲ ಮಹಿಳೆಯಾಗಿದ್ದಾರೆ. ಅವರ ಸೇವೆಯಲ್ಲಿ ಅವರು ಎಂದಿಗೂ ಲಿಂಗ ತಾರತಮ್ಯ ಎದುರಿಸಿರಲಿಲ್ಲವಂತೆ.ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇರುತ್ತದೆ. ಸ್ಪರ್ಧೆಯಿಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ. ನಾವು ಗುರುತಿಸಿಕೊಳ್ಳಬೇಕಾದರೆ ಕಠಿಣ ಶ್ರಮ ಹಾಕಬೇಕು ಎನ್ನುವ ರತ್ನ ಪ್ರಭಾ ಅವರು ಮುಖ್ಯ ಕಾರ್ಯದರ್ಶಿ ಹುದ್ದೆ ಸವಾಲಿದ್ದಾಗಿತ್ತು ಎನ್ನುತ್ತಾರೆ.

ಇಷ್ಟಪಡದ ಪುರುಷ ಸಹೋದ್ಯೋಗಿಗಳಿಂದ ಅಭದ್ರತೆಯ ಭಾವನೆ ಇತ್ತು. ಆದರೆ ಅದು ಬದಲಾಗಬೇಕಾದ ಮನಸ್ಥಿತಿ. ಅಂತಹ ವಿಷಯಗಳಿಂದ ನನ್ನನ್ನು ತೊಂದರೆಗೊಳಗಾಗಲು ನಾನು ಬಿಡುವುದಿಲ್ಲ ಎನ್ನುವ ರತ್ನ ಪ್ರಭಾ ಅವರು 2000ನೇ ಇಸವಿಯಲ್ಲಿ ತೆರೆಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿ ದಾಸ್ ನಂತರ ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿದ್ದರು.

ಉಬುಂಟು ಮಹಿಳಾ ಯೋಜನೆಯನ್ನು 2006 ರಲ್ಲಿ ಸ್ಥಾಪಿಸಲಾಯಿತು. ಮಾರ್ಗದರ್ಶನ ಮತ್ತು ಸ್ಫೂರ್ತಿಯ ಮೂಲಕ ಮಹಿಳಾ ಕೊಡುಗೆದಾರರು ಮತ್ತು ಸಮುದಾಯದ ಒಳಗೊಳ್ಳುವಿಕೆಯನ್ನು ಬೆಳೆಸುವ ಗುರಿ ಹೊಂದಿದೆ. ಉಬುಂಟು ಮಹಿಳಾ ತಂಡವು ಅನೇಕ ಯೋಜನೆಗಳನ್ನು ಹೊಂದಿದ್ದು, ಮಹಿಳಾ ಸಶಕ್ತೀಕರಣ ಇದರ ಮೂಲ ಉದ್ದೇಶ.

ನಿವೃತ್ತಿಯ ನಂತರ, ರತ್ನ ಪ್ರಭಾ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆದರೆ ಮಾರ್ಚ್‌ನಲ್ಲಿ ಕೋವಿಡ್ -19 ಬಂದ ನಂತರ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎನ್ನುತ್ತಾರೆ. ರತ್ನ ಪ್ರಭಾ ಅವರು ಅತ್ಯುನ್ನತ ವಿದ್ಯಾವಂತ ಮತ್ತು ಉತ್ತಮ ಹುದ್ದೆಯನ್ನು ಹೊಂದಿರುವ ಕುಟುಂಬದಿಂದ ಬಂದವರು, ಅವರ ತಂದೆ, ಸೋದರ ಮತ್ತು ಪತಿ ವಿದ್ಯಾಸಾಗರ್ ನಾಗರಿಕ ಸೇವೆಯಲ್ಲಿದ್ದರೆ ತಾಯಿ ಮತ್ತು ಮತ್ತೊಬ್ಬ ಸೋದರ ವೈದ್ಯರು.

ಇಂದು ಮಹಿಳೆಯರು ಕೇವಲ ವೈದ್ಯೆ, ಇಂಜಿನಿಯರ್ ಮತ್ತು ಶಿಕ್ಷಕಿಯರ ವೃತ್ತಿಗೆ ಮಾತ್ರ ಸೀಮಿತವಾಗಿಲ್ಲ. ಪುತ್ರ ವಕೀಲನಾಗಿದ್ದು, ಅದರಲ್ಲಿ ಮಾತ್ರ ಅವನು ತೊಡಗಿಸಿಕೊಂಡಿದ್ದಾನೆ ಎನ್ನುವ ರತ್ನ ಪ್ರಭಾ ಅವರ ಮಗಳು ಬರಹಗಾರ್ತಿ ಮತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರಂತೆ. ನನ್ನ ಮಗಳು ಬಹಳ ಸೃಜನವಂತೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 

Stay up to date on all the latest ವಿಶೇಷ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp