'ಮೈಕೆಲ್ ಅಂಡ್ ಶೀಲಾ ಹೆಲ್ಡ್' ಪ್ರಶಸ್ತಿಗೆ ನಿಖಿಲ್ ಶ್ರೀವಾಸ್ತವ ಭಾಜನ: ಇಬ್ಬರೊಂದಿಗೆ ಪ್ರಶಸ್ತಿ ಹಂಚಿಕೊಂಡ ಭಾರತೀಯ ಯುವ ಗಣಿತಜ್ಞ!
ಭಾರತದ ಯುವ ಗಣಿತಶಾಸ್ತ್ರಜ್ಞ ನಿಖಿಲ್ ಶ್ರೀವಾಸ್ತವ ಅವರು 2021ನೇ ಸಾಲಿನ ಮೈಕೆಲ್ ಅಂಡ್ ಶೀಲಾ ಹೆಲ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ಯಾಡಿಸನ್-ಸಿಂಗರ್ ಪ್ರಾಬ್ಲಮ್ ಮತ್ತು ರಾಮಾನುಜನ್ ಗ್ರಾಫ್ ಗೆ ಸಂಬಂಧಪಟ್ಟಂತೆ ಅತಿ ದೀರ್ಘ ಪ್ರಶ್ನೆಗಳನ್ನು ಉತ್ತರಿಸಿದ್ದಕ್ಕಾಗಿ ನಿಖಿಲ್ ಶ್ರೀವಾಸ್ತವ ಅವರು ಮತ್ತಿಬ್ಬರ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ.
Published: 22nd January 2021 01:48 PM | Last Updated: 22nd January 2021 06:00 PM | A+A A-

ಪ್ರೊಫೆಸರ್ ನಿಖಿಲ್ ಶ್ರೀವಾಸ್ತವ
ವಾಷಿಂಗ್ಟನ್: ಭಾರತದ ಯುವ ಗಣಿತಶಾಸ್ತ್ರಜ್ಞ ನಿಖಿಲ್ ಶ್ರೀವಾಸ್ತವ ಅವರು 2021ನೇ ಸಾಲಿನ ಮೈಕೆಲ್ ಅಂಡ್ ಶೀಲಾ ಹೆಲ್ಡ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ಯಾಡಿಸನ್-ಸಿಂಗರ್ ಪ್ರಾಬ್ಲಮ್ ಮತ್ತು ರಾಮಾನುಜನ್ ಗ್ರಾಫ್ ಗೆ ಸಂಬಂಧಪಟ್ಟಂತೆ ಅತಿ ದೀರ್ಘ ಪ್ರಶ್ನೆಗಳನ್ನು ಉತ್ತರಿಸಿದ್ದಕ್ಕಾಗಿ ನಿಖಿಲ್ ಶ್ರೀವಾಸ್ತವ ಅವರು ಮತ್ತಿಬ್ಬರ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಶ್ರೀವಾಸ್ತವ ಅವರು, ಬರ್ಕ್ಲಿ-ಆಡಮ್ ಮಾರ್ಕಸ್, ಎಕೋಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲೌಸನ್ನೆ (ಇಪಿಎಫ್ಎಲ್) ಮತ್ತು ಯೇಲ್ ವಿಶ್ವವಿದ್ಯಾಲಯದ ಡೇನಿಯಲ್ ಅಲನ್ ಸ್ಪೀಲ್ಮನ್ ಅವರ ಜೊತೆಗೆ 2021ನೇ ಸಾಲಿನ ಮೈಕೆಲ್ ಅಂಡ್ ಶೀಲಾ ಹೆಲ್ಡ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ. ಪ್ರಶಸ್ತಿಯು ಪದಕ ಮತ್ತು 1 ಲಕ್ಷ ಅಮೆರಿರಕನ್ ಡಾಲರ್ ನಗದನ್ನು ಹೊಂದಿದೆ.
ಶ್ರೀವಾಸ್ತವ, ಮಾರ್ಕಸ್ ಮತ್ತು ಸ್ಪೀಲ್ಮನ್ ಅವರು ಕ್ಯಾಡಿಸನ್-ಸಿಂಗರ್ ಮತ್ತು ರಾಮಾನುಜನ್ ಗ್ರಾಫ್ಗಳಲ್ಲಿ ದೀರ್ಘ ಪ್ರಶ್ನೆಗಳನ್ನು ಪರಿಹರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಬೀಜಗಣಿತ, ಬಹುಪದಗಳ ಜ್ಯಾಮಿತಿ ಮತ್ತು ಗ್ರಾಫ್ ಸಿದ್ಧಾಂತದ ನಡುವಿನ ಆಳವಾದ ಹೊಸ ಸಂಪರ್ಕವನ್ನು ಬಹಿರಂಗಪಡಿಸಲಾಯಿತು.ಇದು ಮುಂದಿನ ಪೀಳಿಗೆಯ ಸೈದ್ಧಾಂತಿಕ ಕಂಪ್ಯೂಟರ್ಗೆ ಸ್ಫೂರ್ತಿ ನೀಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಕೆಲ್ ಅಂಡ್ ಶೀಲಾ ಹೆಲ್ಡ್ ನಿಧನ ನಂತರ 2017ರಲ್ಲಿ ಪ್ರಶಸ್ತಿಯನ್ನು ಆರಂಭಿಸಲಾಯಿತು.