ಕೊರೋನಾ ಯುಗ: ಬೆಂಗಳೂರಿನ ವೀರ್ ಕಶ್ಯಪ್ ಗೆ ಪ್ರಧಾನಮಂತ್ರಿ ‘ರಾಷ್ಟ್ರೀಯ ಬಾಲ ಪುರಸ್ಕಾರ'
ದೆಹಲಿಯ ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ 10 ವರ್ಷದ ವೀರ್ ಕಶ್ಯಪ್ ಗೆ ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಲಭಿಸಿದೆ.
Published: 27th January 2021 01:25 PM | Last Updated: 27th January 2021 01:31 PM | A+A A-

ವೀರ್ ಕಶ್ಯಪ್
ಬೆಂಗಳೂರು: ದೆಹಲಿಯ ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಂಗಳೂರಿನ 10 ವರ್ಷದ ವೀರ್ ಕಶ್ಯಪ್ ಗೆ ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಲಭಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಅಜ್ಜನ ಮನೆಯೊಳಗೆ ಬಂಧಿಯಾಗಿದ್ದ ಸಂದರ್ಭದಲ್ಲಿ ಕೊರೊನಾ ಜಾಗೃತಿಗಾಗಿ ವೀರ್ ಕಶ್ಯಪ್ ರೂಪಿಸಿದ ‘ಗೇಮ್ ಬೋರ್ಡ್’ ಆತನಿಗೆ ಪುರಸ್ಕಾರದ ಗರಿ ಮುಡಿಗೇರಿಸಿದೆ.
ದೆಹಲಿ ಮೂಲಕ ವೀರ್ ಕಶ್ಯಪ್ ಮೊದಲ ಹಂತದ ಲಾಕ್ಡೌನ್ ಅವಧಿಯಲ್ಲಿ (2020ರ ಏಪ್ರಿಲ್) ತನ್ನ ಅಜ್ಜನ ಮನೆಯಲ್ಲಿದ್ದ ಸಂದರ್ಭದಲ್ಲಿ ‘ಕೊರೊನಾ–ಯುಗ’ ಎಂಬ ಗೇಮ್ ಬೋರ್ಡ್ನ್ನು ವೀರ್ ಕಶ್ಯಪ್ ಆವಿಷ್ಕರಿಸಿದ್ದ. ಕೊರೊನಾ ವೈರಸ್ ಮಾದರಿಯಲ್ಲಿ ರಚಿಸಿದ್ದ ಆ ಬೋರ್ಡ್ನಲ್ಲಿ, ಕ್ವಾರಂಟೈನ್ ಅವಧಿಯಲ್ಲಿ ನಾವು ಎದುರಿಸುವ ಸವಾಲುಗಳ ಪರಿಸ್ಥಿತಿ ಹಾಗೂ ಅನುಭವಗಳ ಬಗ್ಗೆ ರೂಪಿಸಿದ್ದ.
‘ಕೊರೊನಾ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಕ್ಕಳಿಗೆ ಮತ್ತು ಹಿರಿಯರಿಗೆ ಪರಿಣಾಮಕಾರಿಗಾಗಿ ಜಾಗೃತಿ ಮೂಡಿಸುವಂತೆ ಆ ಗೇಮ್ ಬೋರ್ಡ್ ರೂಪುಗೊಂಡಿತ್ತು.
ಯೋಗಕ್ಕೆ ಉತ್ತೇಜನ, ಅಂತರ ಕಾಪಾಡಬೇಕೆಂಬ ಎಚ್ಚರಿಕೆ, ಕೊರೊನಾ ಸೇನಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲು ಈ ಗೇಮ್ನಲ್ಲಿ ಅವಕಾಶವಿತ್ತು. ಕೊರೊನಾ ದಿನಗಳು ಹೇಗಿದ್ದವು ಎನ್ನುವ ಬಗ್ಗೆಯೂ ಭವಿಷ್ಯದಲ್ಲಿಯೂ ನೆನಪು ಮಾಡುವಂತೆ ಗೇಮ್ ಬೋರ್ಡ್ನ್ನು ರಚಿಸಿದ್ದ’ ತನ್ನ ಗೇಮ್ ಅನ್ನು ಹಲವಾರು ಬಾರಿ ಪರೀಕ್ಷೆ ಮಾಡಿ ಯೂ ಟ್ಯೂಬ್ ಗೆ ಪೋಸ್ಟ್ ಮಾಡಿದ್ದ.