ಸಾವಯವ ಕೃಷಿ ಕ್ಷೇತ್ರದ ಸಾಧಕಿ 105 ವರ್ಷದ ರಂಗಮಾಗೆ ಪದ್ಮ ಶ್ರೀ ಪ್ರಶಸ್ತಿ

ತೆಕ್ಕಂಪಟ್ಟಿಯ 105 ವರ್ಷದ ಆರ್ ರಂಗಮಾ ಅಲಿಯಾಸ್ ಪಪ್ಪಮ್ಮಾಳ್ ಅವರ ಮನೆ ಮಂಗಳವಾರ ಜನಜಂಗುಳಿಯಿಂದ ತುಂಬಿಹೋಗಿತ್ತು. ಕಾರಣ ಪಪ್ಪಮ್ಮಾಳ್ ಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ಅದಕ್ಕಾಗಿ ಅಭಿನಂದನೆ ಸಲ್ಲಿಸಲು ಜನರು ಜಮಾಯಿಸಿದ್ದರು.

Published: 27th January 2021 11:31 AM  |   Last Updated: 27th January 2021 02:05 PM   |  A+A-


ರಂಗಮಾ

Posted By : Raghavendra Adiga
Source : The New Indian Express

ಕೊಯಮತ್ತೂರ್: ತೆಕ್ಕಂಪಟ್ಟಿ ಯ 105 ವರ್ಷದ ಆರ್ ರಂಗಮಾ ಅಲಿಯಾಸ್ ಪಪ್ಪಮ್ಮಾಳ್ ಅವರ ಮನೆ ಮಂಗಳವಾರ ಜನಜಂಗುಳಿಯಿಂದ ತುಂಬಿಹೋಗಿತ್ತು. ಕಾರಣ ಪಪ್ಪಮ್ಮಾಳ್ ಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ಅದಕ್ಕಾಗಿ ಅಭಿನಂದನೆ ಸಲ್ಲಿಸಲು ಜನರು ಜಮಾಯಿಸಿದ್ದರು.

ಸಾವಯವ ಕೃಷಿಯ ಪ್ರತಿಪಾದಕಿಯಾಗಿರುವ ಶತಾಯುಷಿ ಅಜ್ಜಿ ಉಲ್ಲಾಸದ ಬುಗ್ಗೆಯಾಗಿದ್ದಾರೆ. ಆದರೆ ಅಷ್ಟೇ ವಿನಮ್ರತೆಯಿಂದ ತನಗೆ ಅಭಿನಂದನೆ ಸಲ್ಲಿಸಿದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಸಾವಯವ ಕೃಷಿ ಕ್ಷೇತ್ರದಲ್ಲಿ ಪಪ್ಪಮ್ಮಾಳ್ ಅವರ ಪ್ರಯಾಣವು ತನ್ನ 30ನೇ ವಯಸ್ಸಿನಲ್ಲಿ 10 ಎಕರೆ ಜಾಗ ಪಡೆದುಕೊಳ್ಳುವುದರೊಡನೆ ಪ್ರಾರಂಭಗೊಂಡಿತು. ಈ ಜಾಗವನ್ನು ಆಕೆ ಅಂಗಡಿಯೊಂದನ್ನು ನಡೆಸಿದ್ದರಿಂದ ಪಡೆದ ಆದಾಯದಿಂದ ಗಳಿಸಿದ್ದರು. ಅಂದಿನಿಂದಲೂ ಸಹ ಸಾವಯವ ಕೃಷಿಯನ್ನೇ ಅವಲಂಬಿಸಿದ್ದರು. ಪಪ್ಪಮ್ಮಾಳ್ ಅವರೀಗ 2.5 ಎಕರೆ ಕೃಷಿ ಜಮೀನನ್ನು ಹೊಂದಿದ್ದಾರೆ. ಅಲ್ಲಿ ಅವರು ಬಾಳೆಹಣ್ಣು ಹಾಗೂ ಬೆಂಡೆಕಾಯಿಗಳನ್ನು ಬೆಳೆದಿದ್ದಾರೆ.

ಪಪ್ಪಮ್ಮಾಳ್ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಸಲಹಾ ಸಮಿತಿಯ ಭಾಗವಾಗಿದ್ದರು ಮತ್ತು ಕೃಷಿ ಸಮ್ಮೇಳನಗಳಲ್ಲಿ ಭಾಗವಹಿಸುವ ಮೂಲಕ ಸಾವಯವ ಕೃಷಿಯಲ್ಲಿನ ಅಭಿವೃದ್ಧಿಯನ್ನು ಗಮನಿಸಿದ್ದರು. ಅವರು ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದು ತೆಕ್ಕಂಪಟ್ಟಿ ಪಂಚಾಯತ್‌ನ ಮಾಜಿ ಸದಸ್ಯೆಯಾಗಿದ್ದಾರೆ. ಅಲ್ಲದೆ ಕರಮದೈಪಂಚಾಯತ್ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು.

Stay up to date on all the latest ವಿಶೇಷ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp