ಹುಬ್ಬಳ್ಳಿ: ಬ್ಯಾಂಕಿಂಗ್ ಸೇವೆಗಳಿಗೆ ನೆರವಾಗಲು 'ಮಾಯಾ' ರೋಬೋಟ್ ತಯಾರಿಸಿದ ವಿದ್ಯಾರ್ಥಿಗಳು

ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಬ್ಯಾಂಕಿಂಗ್ ಕೆಲಸಗಳಿಗೆ ಸಹಾಯಕವಾಗಲೆಂಬ ಉದ್ದೇಶದಿಂದ 'ಮಾಯಾ' ಎಂಬ ರೋಬೋಟ್ ಅನ್ನು ಆನ್ವೇಷಿಸಿದ್ದಾರೆ. ಈ ರೋಬೋಟ್ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುತ್ತದೆ.

Published: 30th January 2021 10:41 AM  |   Last Updated: 30th January 2021 01:27 PM   |  A+A-


'ಮಾಯಾ' ರೋಬೋಟ್ ಜತೆಗೆ ವಿದ್ಯಾರ್ಥಿಗಳು

Posted By : Raghavendra Adiga
Source : The New Indian Express

ಹುಬ್ಬಳ್ಳಿ: ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಬ್ಯಾಂಕಿಂಗ್ ಕೆಲಸಗಳಿಗೆ ಸಹಾಯಕವಾಗಲೆಂಬ ಉದ್ದೇಶದಿಂದ 'ಮಾಯಾ' ಎಂಬ ರೋಬೋಟ್ ಅನ್ನು ಆನ್ವೇಷಿಸಿದ್ದಾರೆ. ಈ ರೋಬೋಟ್ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುತ್ತದೆ.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾನಿಲಯದ ಆಟೊಮೇಷನ್ ಮತ್ತು ರೊಬೊಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಸುಮಾರು ಎಂಟು ತಿಂಗಳ ಪರಿಶ್ರಮದಿಂದ ಈ ರೋಬೋಟ್ ತಯಾರಿಸಿದ್ದಾರೆ.  ಇದಕ್ಕಾಗಿ 5 ಲಕ್ಷ ರೂ. ವೆಚ್ಚವಾಗಿದೆ. ಬ್ಯಾಂಕಿಂಗ್ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಖಾತೆಗಳನ್ನು ತೆರೆಯಲು ಗ್ರಾಹಕರಿಗೆ ಸಲಹೆ ನೀಡುವುದು, ಸಂದೇಹಗಳಿದ್ದಲ್ಲಿ ಗೊತ್ತುಪಡಿಸಿದ ಕೌಂಟರ್‌ಗಳಿಗೆ ಕಳುಹಿಸುವುದು ಮುಂತಾದ ಎಲ್ಲಾ ಬ್ಯಾಂಕಿಂಗ್ ಚಟುವಟಿಕೆಗಳನ್ನು ಇದರಲ್ಲಿ ಪ್ರೋಗ್ರಾಮ್ ಮಾಡಲಾಗಿದೆ.

ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಇದು ಗ್ರಾಹಕರ ಮುಖಗಳನ್ನು ಗುರುತಿಸುತ್ತದೆ ಮತ್ತು ಚಾಟ್‌ಬಾಟ್ ಬಳಸುವ ಮೂಲಕ ಅವರಿಗೆ ಪ್ರತಿಕ್ರಿಯಿಸುತ್ತದೆ. ಬ್ಯಾಂಕಿಂಗ್ ಸಮಯದ ನಂತರ, ಅದು ಸ್ವಯಂಚಾಲಿತವಾಗಿ ಡಾಕಿಂಗ್ ಗ್ರೌಂಡ್ ಗೆ ಹೋಗುತ್ತದೆ ಮತ್ತು  ಬ್ಯಾಟರಿಗಳನ್ನು ಯಾವುದೇ ಮಾನವನ ಸಹಾಯವಿಲ್ಲದೆ  ಚಾರ್ಜ್ ಮಾಡುತ್ತದೆ.

ಸಂಶೋಧನಾ ಸಹಾಯಕರಾದ ಅಭಿಜಿತ್ ಸಂಪತ್ ಕೃಷ್ಣಮತ್ತು ಕಾರ್ತಿಕ್ ಲಕ್ಕಮನಹಳ್ಳಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜಿ ಕೆ ಮತ್ತು ಶ್ರೀಧರ್ ತೊಡ್ಡಮಣಿ ಅವರ ಸಹಾಯದಿಂದ ಪೃಥ್ವಿ ದೇಶಪಾಂಡೆ ಮತ್ತು ಆಲ್ವಿನ್ ಎಂ ಎಂಬ ವಿದ್ಯಾರ್ಥಿಗಳು ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದರು.

'ಮಾಯಾ' ಸುಮಾರು 15 ಕೆಜಿ ತೂಕವಿದ್ದು, 8-10 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. ಇದು ಬ್ಯಾಂಕಿಂಗ್ ಸಮಯಕ್ಕೆ ಸಾಕಾಗುತ್ತದೆ ಎಂದು ಆಟೊಮೇಷನ್ ಮತ್ತು ರೊಬೊಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ ಅರುಣ್ ಗಿರಿಯಾಪುರ್ ಹೇಳಿದ್ದಾರೆ.  "ಗ್ರಾಹಕರ ಪ್ರತಿಕ್ರಿಯೆಯ ಆಧಾರದ ಮೇಲೆ ಹೆಚ್ಚಿನ ಹುಮನಾಯ್ಡ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ರೋಬೋಟ್ ಅನ್ನು ಇನ್ನಷ್ಟು ಸುಧಾರಿಸಲಾಗುತ್ತದೆ" ಅವರು ಹೇಳಿದರು.

ಬ್ಯಾಂಕ್ ಗ್ರಾಹಕರಿಗೆ ಸಮಯದ ನಿಭಾವಣೆ ಸಮಸ್ಯೆ ಇರುವುದನ್ನು ಅರಿತು ವಿದ್ಯಾರ್ಥಿಗಳು ಬ್ಯಾಂಕಿಂಗ್ ಸೇವೆಗಳ ಸರಾಗಗೊಳಿಸಲು ರೋಬೋಟ್ ತಯಾರಿಸಲು ಮುಂದಾದರು ಎಂದು ವಿಶ್ವವಿದ್ಯಾನಿಲಯ ಉಪಕುಲಪತಿ ಅಶೋಕ್ ಶೆಟ್ಟರ್ ಹೇಳಿದ್ದಾರೆ.  ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸುತ್ತಿರುವ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲು ಅವರು ಕೈಗಾರಿಕೆಗಳಿಗೆ ಆಹ್ವಾನ ನೀಡಿದ್ದಾರೆ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp