ದಕ್ಷಿಣ ಭಾರತದ ಕುಲ ನಕ್ಷೆಗಳು 6,000 ವರ್ಷ ಪ್ರಾಚೀನ, ಗಾಂಧಾರದವರೆಗೆ ವಲಸೆ!

ಸುಮಾರು 6,000 ವರ್ಷಗಳ ಹಿಂದೆ, ದಕ್ಷಿಣ ಭಾರತದ ಕೆಲವು ಅರಣ್ಯ ವಾಸಿಗಳು ಒಂದು ದೊಡ್ಡ ಪ್ರಮಾಣದ ವಲಸೆ ಹೊರಟಿದ್ದರು, ಅದು ಅವರನ್ನು ಕರಾವಳಿಯುದ್ದಕ್ಕೂ ತಲುಪಿಸಿದೆಯಲ್ಲದೆ ಉತ್ತರ ಭಾಗದ ಹಲವಾರು ಭಾಗಗಳನ್ನು ಸೇರಿಸಿದೆ.
ಸಂಶೋಧಕ ಗಣೇಶ್ ಎನ್ ದೇವಿ
ಸಂಶೋಧಕ ಗಣೇಶ್ ಎನ್ ದೇವಿ

ಹುಬ್ಬಳ್ಳಿ: ಸುಮಾರು 6,000 ವರ್ಷಗಳ ಹಿಂದೆ, ದಕ್ಷಿಣ ಭಾರತದ ಕೆಲವು ಅರಣ್ಯ ವಾಸಿಗಳು ಒಂದು ದೊಡ್ಡ ಪ್ರಮಾಣದ ವಲಸೆ ಹೊರಟಿದ್ದರು, ಅದು ಅವರನ್ನು ಕರಾವಳಿಯುದ್ದಕ್ಕೂ ತಲುಪಿಸಿದೆಯಲ್ಲದೆ ಉತ್ತರ ಭಾಗದ ಹಲವಾರು ಭಾಗಗಳನ್ನು ಸೇರಿಸಿದೆ. ಅವರು ಗಾಂಧಾರ (ಇಂದಿನ ಅಫ್ಘಾನಿಸ್ತಾನದ ಕಂದಹಾರ್) ವರೆಗೆ ತಲುಪಿದರು. ಚಕ್ರವನ್ನು ಸಹ ಇನ್ನೂ ಕಂಡು ಹಿಡಿಯದೆ ಇದ್ದ ಕಾಲದಲ್ಲಿ ಭಾರತದ ಇತಿಹಾಸಪೂರ್ವದ ಅವಧಿಯಲ್ಲಿ ನಡೆದ ಈ ಮಹಾವಲಸೆಯನ್ನು ಮಾನವ ಕುಲದ ದೊಡ್ಡ ಸಾಹಸಗಳಲ್ಲಿ ಒಂದು ಎಂದು ಭಾವಿಸಬಹುದು. ಕರಾವಳಿಯುದ್ದಕ್ಕೂ ಪ್ರಯಾಣವನ್ನು ಕೈಗೊಂಡ ಕುಟುಂಬಗಳು, ದೋಣಿ, ನಡಿಗೆ ಅಥವಾ ಪ್ರಾಣಿಗಳ ಬೆನ್ನೇರಿ ನದಿಗಳನ್ನು ದಾಟಿದಂತಹ ಕೆಲವು ಸಂಗತಿಗಳ ಬಗ್ಗೆ ಸಂಶೋಧನೆಗಳು ಬೆಳಕು ಚೆಲ್ಲಿವೆ.

ಸುಮಾರು 10,000 ವರ್ಷಗಳ ಹಿಂದಿನ ಇತಿಹಾಸಪೂರ್ವ ಭಾರತದ ಬಗ್ಗೆ ಅಂತಹ ಹಲವಾರು ಅಪರಿಚಿತ ಸಂಕೀರ್ಣ ಜ್ಞಾನ ಈಗ ಪ್ರಸಿದ್ಧ ಭಾಷಾಶಾಸ್ತ್ರಜ್ಞ ಮಾನವಶಾಸ್ತ್ರಜ್ಞ ಮತ್ತು ಪದ್ಮ ಪ್ರಶಸ್ತಿ  ಪುರಸ್ಕೃತ ಗಣೇಶ್ ಎನ್ ದೇವಿ ಅವರು ಸಂಶೋಧಿಸಿದ್ದಾರೆ. ಅವರ ಪುಸ್ತಕ, ‘ಇಂಡಿಯಾ ಬಿಫೋರ್ ಹಿಸ್ಟರಿ’ (‘India Before History’) 1,500 ಪುಟಗಳ ದಸ್ತಾವೇಜು ಆಧಾರಿತ ಕೃತಿಯಾಗಿದ್ದು, ಇದು ದೇಶದ ಪ್ರಖ್ಯಾತ ವಿದ್ವಾಂಸರ  ಸುಮಾರು 70 ಲೇಖನಗಳನ್ನು ಒಳಗೊಂಡಿರುತ್ತದೆ.

ಕಳೆದ 12,000 ವರ್ಷಗಳ ಭಾರತದ ಇತಿಹಾಸವನ್ನು ದಾಖಲಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರತಿಯಾಗಿ ಪ್ರೊಫೆಸರ್ ದೇವಿ ಅವರ ಯೋಜನೆಯನ್ನು ಕಾಣಬಹುದು. ಆದರೆ ತನ್ನ ಸಂಶೋಧನೆಯ ಮೂಲಕ, ಭಾರತೀಯರ ಪೂರ್ವ ಮತ್ತು ಪ್ರೋಟೋಹಿಸ್ಟರಿಯ ವೈಜ್ಞಾನಿಕ ಅಂಶಗಳನ್ನು ಪ್ರಸ್ತುತಪಡಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಪ್ರೊಫೆಸರ್ ದೇವಿ ಅವರ ಪ್ರಕಾರ, ಈ ಭೂಮಿ, ಅದರ ಜನರು ಮತ್ತು ಅವರ ಸಂಸ್ಕೃತಿಯ ಬಗ್ಗೆ ಹಲವಾರು ಪುರಾಣ  ಸಂಗತಿಗಳು ಇವೆ. ಆದರೆ ವೈಜ್ಞಾನಿಕ ದೃಷ್ಟಿಕೋನದಿಂದ ಅವುಗಳನ್ನು ನೋಡಬೇಕು. ಪುರಾತತ್ತ್ವ ಶಾಸ್ತ್ರ ಕಾರ್ಬನ್ ಡೇಟಿಂಗ್, ಭೂವಿಜ್ಞಾನ ಮತ್ತು ಪ್ರಾಚೀನ ಅವಶೇಷಗಳಲ್ಲಿ ಲಭ್ಯವಾದ ಮೂಳೆಗಳ ಡಿಕೋಡಿಂಗ್ ಮಾಡುವಂತಹ ಇತಿಹಾಸಪೂರ್ವ ಅಧ್ಯಯನದ ಹಲವಾರು ಶಾಖೆಗಳಿವೆ - ಆ ಅವಧಿಗಳಲ್ಲಿ ಯಾವ ರೀತಿಯ ಕಾಯಿಲೆಗಳು ಅಸ್ತಿತ್ವದಲ್ಲಿದ್ದವು, ಜನರು ಯಾವ ರೀತಿಯ ಆಹಾರವನ್ನು ಹೊಂದಿದ್ದರು ಮುಂತಾದವುಗಳನ್ನು ತಿಳಿಯಲು ಇವು ಸಹಕಾರಿ.

"ಭಾರತದ ಇತಿಹಾಸಪೂರ್ವದ ಬಗ್ಗೆ ನನ್ನ ದಸ್ತಾವೇಜನ್ನು ನಮ್ಮ ಪೂರ್ವದ ಬಗ್ಗೆ ಯಾವುದೇ ರೀತಿಯ ಸುಳ್ಳಿನ ಕಥೆಯನ್ನು ಹರಡದಂತೆ ತಡೆಯುವ ಉದ್ದೇಶವಿದೆ. ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಸರ್ಕಾರ ರಚಿಸಿರುವ ಸಮಿತಿ ತನ್ನ ಸದಸ್ಯರ ಆಯ್ಕೆ ಮತ್ತು ಅವರು ಪ್ರತಿನಿಧಿಸುವ ಪ್ರದೇಶಗಳಿಂದಾಗಿ ಈಗಾಗಲೇ ವಿವಾದಕ್ಕೆ ಸಿಲುಕಿದೆ. ಸಮಿತಿಯ ಕುರಿತ ಆರಂಭಿಕ ವಿರೋಧವೆಂದರೆ ಅದರಲ್ಲಿ ಮಹಿಳಾ ಸದಸ್ಯರು ಮತ್ತು ದಕ್ಷಿಣ ಭಾರತದ ಒಬ್ಬರೇ ಒಬ್ಬ ವಿದ್ವಾಂಸರು ಇರಲಿಲ್ಲ. ವಾಸ್ತವವಾಗಿ, ಶಿಲಾಯುಗದ ಉಪಕರಣಗಳ ಉತ್ಖನನದ ನಂತರ ಕರ್ನಾಟಕದ ಉತ್ತರ ಭಾಗಗಳಿಂದ ಇತಿಹಾಸದ ಅಧ್ಯಯನವು ಪ್ರಾರಂಭವಾಯಿತು” ಎಂದು ಪ್ರೊಫೆಸರ್ ದೇವಿ ವಿವರಿಸುತ್ತಾರೆ..

"ವೈಜ್ಞಾನಿಕ ಅಧ್ಯಯನಗಳು ಮೂಲತಃ, 60,000 ವರ್ಷಗಳ ಹಿಂದೆ ಮಾನವ ಕುಲಗಳು ಆಫ್ರಿಕಾದಿಂದ ಹೊರವಲಸೆ ಹೊರಟವು ಮತ್ತು ನಮ್ಮ ಮೂಲ ಪೂರ್ವಜರು ಸುಮಾರು 700 ರಷ್ಟಿದ್ದರು. ಅವರು ಹೇಗೋ  ಸಮುದ್ರವನ್ನು ದಾಟಿ ಅಮೆರಿಕನ್, ಏಷ್ಯನ್ ಮತ್ತು ಆಸ್ಟ್ರೇಲಿಯಾದ ಪ್ರದೇಶಗಳನ್ನು ತಲುಪಲು ಯಶಸ್ವಿಯಾದರು. ಆದರೆ ಆರ್ಯರು ಭಾರತಕ್ಕೆ ಬಂದಿದ್ದಾರೋ ಅಥವಾ ಇಲ್ಲಿಂದ ಹೋದರೋ ಎಂಬ ಚರ್ಚೆಗಳಿವೆ. ಭಾರತದ ಸಂಸ್ಕೃತ ಮಾತನಾಡುವ ಜನರು ಈ ಪ್ರದೇಶದಿಂದ ಹೋಗಿ ವಿಭಿನ್ನ ಭಾಗಗಳಲ್ಲಿ ನೆಲೆಸಿದರು ಎಂದು ಹೇಳಿದ ಸಿದ್ಧಾಂತಗಳಿವೆ.

ಜಗತ್ತಿನ ಕೆಲವು ಭಾಗಗಳು, ಅಥವಾ ಸಂಸ್ಕೃತ ಮಾತನಾಡುವ ಜನ ಭಾರತಕ್ಕೆ ನೆಲೆಸಲು ಬಂದರು. ಆದರೆ ಭಾಷೆ ಇದ್ದರೂ ಇತಿಹಾಸದಲ್ಲಿ ಯಾವುದೇ ಸಮಯದಲ್ಲಿ ಆರ್ಯರು ಎಂದು ಕರೆಯಲ್ಪಡುವ ಜನರು ಇರಲಿಲ್ಲ” ಎಂದು ಅವರು ಹೇಳುತ್ತಾರೆ.

"ಹಿಮಯುಗದ ನಂತರ, ತಾಪಮಾನ ಏರಿಕೆಯಾದಾಗ, ಮಾನವರು ಭೂಮಿಯಲ್ಲಿ ಅಭಿವೃದ್ಧಿ ಹೊಂದಲು ಪ್ರಾರಂಭಿಸಿದರು. ಈ ಮೊದಲು, ಬೇಟೆಗಾರ, ಸಂಗ್ರಹಗಾರರಾಗಿದ್ದವರು  ಅವರಿಗೆ ಅಗತ್ಯವಾದ ಸಾಧನಗಳ ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು. ನಿಧಾನವಾಗಿ, ಮನುಷ್ಯರು ಕೃಷಿ ಪ್ರಾರಂಭಿಸುವ ಮುನ್ನ  ಪ್ರಾಣಿಗಳನ್ನು ಸಾಕಲು ಪ್ರಾರಂಭಿಸಿದ, ಆ ನಂತರ ನ್ಯಾವಿಗೇಷನ್ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಕಂಡುಬಂದಿತು. ಅಲ್ಲಿ ವರ್ಣಚಿತ್ರಗಳು, ಕರಕುಶಲ ವಸ್ತುಗಳು ಮತ್ತು ಕವಿತೆಗಳು ರಚನೆಯಾದವು.ಇದು ವೇದಗಳು ಮತ್ತು ಉಪನಿಷತ್ತುಗಳನ್ನು ರಚಿಸಿದ ಸಮಯ, ಮತ್ತು ನಂತರ ಬೌದ್ಧಧರ್ಮ ಮತ್ತು ಜೈನ ಧರ್ಮದಂತಹ ಧಾರ್ಮಿಕ ತತ್ತ್ವಚಿಂತನೆಗಳು ಬಂದವು” ಎಂದು ಅವರು ಹೇಳುತ್ತಾರೆ.

“ಅಲ್ಲದೆ, ಭಾರತದ ಇತಿಹಾಸಪೂರ್ವದ ಒಂದು ಕುತೂಹಲಕಾರಿ ದಾಖಲಾತಿ ಕಂಡುಬಂದಿದ್ದು ಅಲ್ಲಿ ಈ ಭೂಮಿಯ ದಕ್ಷಿಣದಿಂದ ಹೆಚ್ಚಿನ ಜನಸಂಖ್ಯೆಯು ವಲಸೆ ಹೊರಟಿದೆ ಆ ಜನರು ಭೂಮಿಯ ಇತರ ಭಾಗಗಳನ್ನು ಅನ್ವೇಷಿಸಿದರು, ಅವರ ಪ್ರಯಾಣ, ಅವರು ನೆಲೆಸಿದ ಸ್ಥಳಗಳು ಮತ್ತು ಅವರು ಪ್ರಯಾಣದ ಸಮಯದಲ್ಲಿ ಸತ್ತವರನ್ನು ಸಮಾಧಿ ಮಾಡಿದ ಸ್ಥಳಗಳ ಬಗ್ಗೆ ದಾಖಲೆಗಳು ಮತ್ತು ಪುರಾವೆಗಳಿವೆ” ಎಂದು ಅವರು ಹೇಳುತ್ತಾರೆ.

ಇಂಡಿಯಾ ಬಿಫೋರ್ ಹಿಸ್ಟರಿ ಎಂಬ ಪುಸ್ತಕವು ಭಾರತವು ಒಂದು ಪ್ರಮುಖ ಕೃಷಿ ಪ್ರದೇಶವಾಗಿತ್ತು, ಆರಂಭಿಕ ವಲಸೆ, ಹರಪ್ಪಾ ನಾಗರಿಕತೆ ಮತ್ತು ಸಂಶೋಧನೆಗಳ ಬಗ್ಗೆ ಪ್ರಸ್ತುತ ಸಿದ್ಧಾಂತಗಳು ಮತ್ತು ಇನ್ನೂ ಅನೇಕವುಗಳ ಬಗ್ಗೆ ಹೇಳುತ್ತದೆ. ಈ ಪ್ರದೇಶದ ತಳಿಶಾಸ್ತ್ರ, ಗೌತಮ ಬುದ್ಧನ ಮೊದಲು ಈ ಭೂಮಿಯಲ್ಲಿ ಉಳಿದಿದ್ದ  ಕುಲಗಳು, ಅವರ ಜೀವನಶೈಲಿ, ಬೇಟೆ ಮತ್ತು ಕೃಷಿ ಪದ್ಧತಿಗಳನ್ನು ಸಹ ಒಳಗೊಂಡಿದೆ.

ಪುಸ್ತಕವು ಶೀಘ್ರದಲ್ಲೇ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com