ಮೈಸೂರು: ಹದಗೆಟ್ಟ ರಸ್ತೆಯನ್ನು 3 ಲಕ್ಷ ರೂ. ಸ್ವಂತ ಹಣದಲ್ಲಿ ರಿಪೇರಿ ಮಾಡಿಸಿದ ಎಎಸ್ ಐ!

ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸಲು ಜನರು ಪ್ರಯಾಸ ಪಡುತ್ತಿದ್ದುದ್ದನ್ನು ನೋಡಿದ ಮೈಸೂರಿನ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮದೇ ಸ್ವಂತ ಹಣ ಖರ್ಚು ಮಾಡಿ ರಸ್ತೆ ರಿಪೇರಿ ಮಾಡಿದ್ದಾರೆ.
ರಸ್ತೆ ರಿಪೇರಿ ಮಾಡಿಸುತ್ತಿರುವ ಎಎಸ್ ಐ
ರಸ್ತೆ ರಿಪೇರಿ ಮಾಡಿಸುತ್ತಿರುವ ಎಎಸ್ ಐ

ಮೈಸೂರು: ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಸಂಚರಿಸಲು ಜನರು ಪ್ರಯಾಸ ಪಡುತ್ತಿದ್ದುದ್ದನ್ನು ನೋಡಿದ ಮೈಸೂರಿನ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮದೇ ಸ್ವಂತ ಹಣ ಖರ್ಚು ಮಾಡಿ ರಸ್ತೆ ರಿಪೇರಿ ಮಾಡಿದ್ದಾರೆ.

ಎಚ್ ಡಿ ಕೋಟೆ ಪೊಲೀಸ್ ಠಾಣೆಯ ಎಸ್ ದೊರೆಸ್ವಾಮಿ ಅವರು ಸುಮಾರು 3 ಲಕ್ಷ ರು ಹಣ ಖರ್ಚು ಮಾಡಿದ್ದಾರೆ. ಮಾದಾಪುರ ಮತ್ತು ಕೆ.ಬೆಳ್ಳತ್ತೂರು ನಡುವಿನ ಸುಮಾರು 5 ಕಿಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ರಸ್ತೆಯಲ್ಲಿ ರಾತ್ರಿ ಸಂಚಾರ ದುಸ್ತರವಾಗಿತ್ತು, ಪಾದಚಾರಿಗಳು ಓಡಾಡಲು ಹರಸಾಹಸ ಪಡಬೇಕಾಗಿತ್ತು, ಆದರೆ ಸಂಬಂಧಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು.

ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಹೀಗಾಗಿ, ಸ್ಥಳೀಯರು ಜನ ಸ್ನೇಹಿ ಪೋಲೀಸ್ ಎಂದು ಕರೆಯಲ್ಪಡುವ ದೊರೆಸ್ವಾಮಿಯನ್ನು ಸಂಪರ್ಕಿಸಿದರು. ಅವರು ರಕ್ಷಣ ಸೇವಾ ಟ್ರಸ್ಟ್‌ನ ಪತ್ನಿ ಚಂದ್ರಿಕಾ ಅವರೊಡಗೂಡಿ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಹಣವನ್ನು ನೀಡಿದರು.

ಮಂಗಳವಾರ, ಅಗತ್ಯ ಸಲಕರಣೆಗಳೊಂದಿಗೆ ದೊರೆಸ್ವಾಮಿ ಕಾರ್ಮಿಕರೊಂದಿಗೆ ಗುಂಡಿಗಳನ್ನು ಮುಚ್ಚಿದರು. ಎರಡು-ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಹದಗೆಟ್ಟ ರಸ್ತೆಯ ಕಾರಣದಿಂದ ಹಲವಾರು ಅಪಘಾತಗಳು ಸಂಭವಿಸಿವೆ, ಕೆಲವು ಜನರು ಗಾಯಗೊಂಡಿದ್ದಾರೆ. 30 ಕ್ಕೂ ಹೆಚ್ಚು ಹಳ್ಳಿಗಳ ಜನರು ಪ್ರತಿದಿನ ಈ ರಸ್ತೆಯನ್ನು ಬಳಸುತ್ತಾರೆ. ಕೆಲವು ಆಂಬ್ಯುಲೆನ್ಸ್ ಚಾಲಕರು ಈ ವಿಷಯವನ್ನು ನನ್ನ ಗಮನಕ್ಕೆ ತಂದರು, ಇದರಿಂದ ನನಗೆ ಈ ಕೆಲಸ ಮಾಡಲು ಮನಸ್ಸಾಯಿತು ಎಂದು ದೊರೆಸ್ವಾಮಿ ಹೇಳಿದರು.

ಈ ಹಿಂದೆ ಅವರು ತಾಲ್ಲೂಕಿನಲ್ಲಿ ಮತ್ತೊಂದು ಗುಂಡಿ ತುಂಬಿದ ರಸ್ತೆಯನ್ನು ಸರಿಪಡಿಸಲು ಸಹಾಯ ಮಾಡಿದ್ದರು. ಪೋಷಕರನ್ನು ಕಳೆದುಕೊಂಡ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ದೊರೆಸ್ವಾಮಿ ದತ್ತು ಪಡೆದು ಹಲವು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com